ಕಾರ್ಯಕ್ರಮ

ಗಣತಿ ಕಾರ್ಯ ಪರಿಶೀಲಿಸಿದ ಕುಶಾಲನಗರ ತಹಸೀಲ್ದಾರ್

ಕುಶಾಲನಗರ, ಏ. 19: ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ ಅವರು ತಾಲ್ಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಗಣತಿ ಸಮೀಕ್ಷೆಗೆ ನೇಮಕಗೊಂಡಿರುವ ಸಿಬ್ಬಂದಿಗಳ ಗಣತಿ ಸಮೀಕ್ಷೆಯ ಪರಿಶೀಲನೆಯನ್ನು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕು ವ್ಯಾಪ್ತಿಯ ಹೆಬ್ಬಾಲೆ, ಕೂಡುಮಂಗಳೂರು ತೊರೆನೂರು, ಶಿರಂಗಾಲ ಕೂಡಿಗೆ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಗಣತಿ ಸಮೀಕ್ಷೆಯ ಪರಿಶೀಲನೆ, ಮತ್ತು ಮಾಹಿತಿಯನ್ನು ಒದಗಿಸುವ ಮತ್ತು ಸರಕಾರದ ನಿಯಮಾನುಸಾರ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಸ್ಧಳಕ್ಕೆ ತೆರಳಿ ಪರಿಶೀಲನೆ ನೆಡೆಸಿದರು. ಈ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಣ ಅಧಿಕಾರಿ ಸಂತೋಷ್, ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಗಣತಿ ಕಾರ್ಯಕ್ಕೆ ನೇಮಕಗೊಂಡ ಶಿಕ್ಷಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!