ಕುಶಾಲನಗರ, ಆ. 25: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದಲ್ಲಿರುವ ಕುಶಾಲನಗರದ ಪುರಸಭೆಯ ಕಸ ವಿಲೇವಾರಿ ಘಟಕದ ಕೇಂದ್ರಕ್ಕೆ ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ಸೇರಿದಂತೆ ಅಧಿಕಾರಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿ ಕಸ ವಿಲೇವಾರಿ ಮಾಡುವ ಕ್ರಮದ ಬಗ್ಗೆ ಚಿಂತನೆ ಹರಿಸಿದ್ದಾರೆ.
ಈಗಾಗಲೇ ಸ್ವಚ್ಛ ಭಾರತ್ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳು ಸೇರಿದಂತೆ ಘಟಕದ ಕೇಂದ್ರದಲ್ಲಿರುವ ಹಳೆಯ ಪರಂಪರಿಕ ಕಸ ವಿಲೇವಾರಿಗೆ ಸಂಬಂಧಿಸಿದಂತ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದ್ದು ರೂ 3.50 ಕೋಟಿ ವೆಚ್ಚದಲ್ಲಿ ಹಳೆಯ ಕಸವನ್ನು ವಿಲೇವಾರಿ ಮಾಡುವ ಟೆಂಡರ್ ಪ್ರಕ್ರಿಯೆ ನಡೆದು ಟೆಂಡರದಾರ ವಿಲೇವಾರಿ ಮಾಡುವ ಸಂದರ್ಭಕ್ಕೆ ಅನುಗುಣವಾದ ನೂತನ ಯಂತ್ರಗಳ ಜೋಡಣೆ ಮೂಲಕ ಕಾರ್ಯ ತೊಡಗಿದ್ದಾರೆ. ಮಳೆಯಿಂದಾಗಿ ತೆಡೆಯಾಗಿದೆ ಮುಂದಿನ ದಿನಗಳಲ್ಲಿ ಆರಂಭಗೊಳ್ಳುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ 15. ವರ್ಷಗಳಿಂದಲೂ ಕಸ ವಿಲೇವಾರಿ ಘಟಕದಿಂದ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮಸ್ಥರಿಗೆ ತೊಂದರೆಗಳು, ದುರ್ವಾಸನೆಯಿಂದಾಗಿ ಅನೇಕ ಬಾರಿ ಗ್ರಾಮಸ್ಥರು ಪುರಸಭೆ ಅಧಿಕಾರಿ ವರ್ಗದವರಿಗೆ ಮನವಿ ಪತ್ರಗಳನ್ನು ಸಲ್ಲಿಸಿದರು. ಅಲ್ಲದೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ನವರ ಪ್ರಯತ್ನದಿಂದಾಗಿ ಈ ಸಾಲಿನಲ್ಲಿ ಸ್ವಚ್ಛ ಭಾರತ್ ಯೋಜನೆ ಅಡಿ ಘಟಕದ ಕೇಂದ್ರದಲ್ಲಿ ಯಾವುದೇ ರೀತಿಯ ವಾಸನೆ ಮತ್ತು ಕಸ ವಿಲೇವಾರಿಗೆ ಸಂಬಂಧಿಸಿದಂತೆ ನಗರ ಪ್ರದೇಶಗಳಲ್ಲಿ ಅಳವಡಿಕೆ ಮಾಡಿರುವಂತೆ ಅಧುನಿಕ ತಂತ್ರಜ್ಞಾನದ ನೂತನ ಯಂತ್ರಗಳು ಬಳಕೆಯ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಕಾರ್ಯೊನ್ಮಖರಾಗುತ್ತೇವೆ ಎಂದು ತಿಳಿಸಿದ್ದಾರೆ.
ಭುವನಗಿರಿ ಕಸ ವಿಲೇವಾರಿ ಘಟಕದಲ್ಲಿ ಈಗಾಗಲೇ ಟೆಂಡರ್ ಪಡೆದ ಗುತ್ತಿಗೆದಾರ ನೂತನ ಯಂತ್ರಗಳ ಅಳವಡಿಕೆಗೆ ಸಂಬಂಧಿಸಿದಂತೆ ಬೃಹತ್ ಯಂತ್ರಗಳನ್ನು ರಾಜ್ಯ ಮತ್ತು ಹೊರ ರಾಜ್ಯಗಳಿಂದ ತಂದು ಅಳವಡಿಕೆ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಅಲ್ಲದೆ ರೂ. 75. ಲಕ್ಷ ದಲ್ಲಿ 4. ನೂತನ ಕಸ ವಿಲೇವಾರಿ ಯಂತ್ರಗಳು, ಮತ್ತು 33. ಲಕ್ಷ ವೆಚ್ಚದಲ್ಲಿ ಅದಕ್ಕೆ ಸಂಬಂಧಿಸಿದ ಕಸ ಜಾರಣಿ, ಮತ್ತು ಹಸಿ ಕಸ, ಒಣ ಕಸ, ಮತ್ತು ಪ್ಲಾಸ್ಟಿಕ್ ಗಳು ವಿಭಾಗವಾಗಲು ಸೇರಿದಂತೆ ನೂತನ ತಂತ್ರಜ್ಞಾನದ ಹಲವಾರು ಯಂತ್ರಗಳ ಅಳವಡಿಕೆ, ಮತ್ತು ಯಾವುದೇ ರೀತಿಯ ದುರ್ವಾಸನೆ ಬಾರದ ಹಾಗೆ ಕೈಗೊಳ್ಳುವ ವಿವಿಧ ಯಂತ್ರಗಳ ಅಳವಡಿಕೆಯ ಕಾರ್ಯವು ಕಸಿ ವಿಲೇವಾರಿ ಘಟಕದಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯು ಕಡಿಮೆ ಅದ ದಿನಗಳಲ್ಲಿ ಕಸ ವಿಲೇವಾರಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ತಿಳಿಸಿದರು.
ಈ ಸಂದರ್ಭದಲ್ಲಿ
ಆರೋಗ್ಯ ಅಧಿಕಾರಿ ಉದಯ್ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
Back to top button
error: Content is protected !!