ಕ್ರೈಂ

ಕೂಡಿಗೆಯಲ್ಲಿ ಮನೆಯ ಬಾಗಿಲು ಒಡೆದು ಕಳ್ಳತನ

ಕುಶಾಲನಗರ., ಜೂ. 30: ಕೂಡಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಮನೆಯೊಂದರ ಮುಂಬಾಗಿಲು ಮುರಿದು ಕಳ್ಳತನ ನಡೆಸಲಾಗಿದೆ.

ಕೂಡಿಗೆ ಲಕ್ಷ್ಮಿ ಜ್ಯೂವೆಲರಿ ಅಂಗಡಿ ಮಾಲೀಕ ಕುಮಾರ್ ಎಂಬವರ ಮನೆಗೆ ಹಗಲು ವೇಳೆಯಲ್ಲೇ ಕನ್ನ ಹಾಕಿದ ಕಳ್ಳರು ಮನೆಯೊಳಗೆ ಲಾಕರ್ ನಲ್ಲಿದ್ದ ರೂ 14 ಲಕ್ಷ ಹಣವನ್ನು ದೋಚಿದ್ದಾರೆ

ಕುಮಾರ್ ಕುಟುಂಬದ ಸಮೇತ ಕೆಲಸ ನಿಮಿತ್ತ ಬೆಳಿಗ್ಗೆ ಹೊರಗಡೆ ಹೋಗಿ ಸಂಜೆ ಹಿಂತಿರುಗಿ ಬಂದ ಸಂದರ್ಭದಲ್ಲಿ ನಡೆದ ಘಟನೆ ತಿಳಿದಿದೆ.

ಸ್ಧಳಕ್ಕೆ ಕುಶಾಲನಗರ ಪೋಲಿಸ್ ವೃತ್ತಾಧಿಕಾರಿ ದಿನೇಶ್ ಕುಮಾರ್, ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ರಾಮಚಂದ್ರ, ಅಪರಾಧ ವಿಭಾಗ ಠಾಣಾಧಿಕಾರಿ ಸ್ವಾಮಿ ಸೇರಿದಂತೆ ಸಿಬ್ಬಂದಿ ವರ್ಗದವರು ಸ್ಧಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!