ಸಾಮಾಜಿಕ

ಕುಶಾಲನಗರ ರೋಟರಿಯಿಂದ ಹಸಿದವರಿಗೆ ಅನ್ನ ಯೋಜನೆಗೆ ಚಾಲನೆ

ಕುಶಾಲನಗರ, ಜೂ 30: ಕುಶಾಲನಗರ ರೋಟರಿ ಸಂಸ್ಥೆಯಿಂದ ಆರಂಭಿಸಿರುವ ಹಸಿದವರಿಗೆ ಅನ್ನ ಯೋಜನೆಗೆ ಚಾಲನೆ ನೀಡಲಾಯಿತು.

ನಿಸರ್ಗ ಹೋಟೆಲ್ ನಲ್ಲಿ ಸೋಮವಾರ ರೋಟರಿ ಅಧ್ಯಕ್ಷ ಮನುಪೆಮ್ಮಯ್ಯ ಕೂಪನ್ ಗಳನ್ನು ‌ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಯೋಜನೆ ಬಗ್ಗೆ ಮಾಹಿತಿ ನೀಡಿದ ಸಂಸ್ಥೆ ಅಧ್ಯಕ್ಷ ಮನು‌ಪೆಮ್ಮಯ್ಯ, ರೋಟರಿಯ ಸುವರ್ಣ ಮಹೋತ್ಸವ ಅಂಗವಾಗಿ ಹಸಿದವರಿಗೆ ಅನ್ನ ಎಂಬ ವಿನೂತನ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ಅರ್ಹರಿಗೆ ಉಚಿತವಾಗಿ ಒದಗಿಸಲಾಗುತ್ತದೆ. ಎರಡೂ ವೇಳೆಯಲ್ಲಿ ಹೋಟೆಲ್ ಮೂಲಕ ಉಚಿತವಾಗಿ ಒದಗಿಸಿದ ಆಹಾರಕ್ಕೆ ರೋಟರಿಯಿಂದ ಹಣ ಪಾವತಿಸಲಾಗುತ್ತದೆ. ಊಟಕ್ಕಾಗಿ ಪರಿತಪಿಸುವ ಅರ್ಹರು ಈ ಯೋಜನೆ ಸದುಪಯೋಗಪಡಿಸಿಕೊಳ್ಳಬಹುದು. ಇದು ರೋಟರಿಯ ನಿರಂತರ ಯೋಜನೆಯಾಗಿದೆ ಎಂದು ತಿಳಿಸಿದರು. ಹೋಟೆಲ್ ಮಾಲೀಕರು ಅರ್ಹ ಫಲಾನುಭವಿಗಳ ಬಗ್ಗೆ ನಿಗಾವಹಿಸಲಿದ್ದಾರೆ. ಸಾರ್ವಜನಿಕರು, ದಾನಿಗಳು‌ ಕೂಡ ಈ ಯೋಜನೆಗೆ ಸಹಕಾರ ನೀಡಬಹುದು ಎಂದು ಅವರು ಕೋರಿದರು.

ಈ ಸಂದರ್ಭ ಸಂಸ್ಥೆ ಕಾರ್ಯದರ್ಶಿ ಹೆಚ್.ಪಿ.ಮಂಜುನಾಥ್, ಸಹಾಯಕ ಗವರ್ನರ್ ಉಲ್ಲಾಸ್ ಕೃಷ್ಣ, ರೋಟರಿ ಹಿರಿಯ ಸದಸ್ಯರಾದ ಮಹೇಶ್ ನಲ್ವಡೆ, ಡಾ.ಹರಿ ಎ ಶೆಟ್ಟಿ, ಆರತಿ ಶೆಟ್ಟಿ, ರಿಚರ್ಡ್, ಗಂಗಾಧರ್, ಪ್ರಕಾಶ್, ಸುದೀಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!