ಪ್ರಶಸ್ತಿ

ಜೆಸಿಐ ಕುಶಾಲನಗರ ಕಾವೇರಿಗೆ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದಲ್ಲಿ 3ನೇ ಸ್ಥಾನ

ಕುಶಾಲನಗರ, ಆ 10: ಶೃಂಗೇರಿಯಲ್ಲಿ ನಡೆದ ಜೆಸಿಐ ಇಂಡಿಯಾ, ಜೋನ್ 14ರ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನ – ವಿಸ್ತಾರ ಕಾರ್ಯಕ್ರಮದಲ್ಲಿ, ಜೆಸಿಐ ಕುಶಾಲನಗರ ಕಾವೇರಿ ಘಟಕವು 3ನೇ ಸ್ಥಾನ ಗಳಿಸುವ ಸಾಧನೆ ಮಾಡಿದೆ. ದೇವನಹಳ್ಳಿ ಘಟಕ ಪ್ರಥಮ, ವಿಜಯಪುರ ಘಟಕ ದ್ವಿತೀಯ ಸ್ಥಾನ ಗಳಿಸಿವೆ.

ಕಾರ್ಯಕ್ರಮವು ವೈಭವಯುತವಾಗಿ ನಡೆಯಿತು. ಜೆಸಿಐ ರಾಷ್ಟ್ರೀಯ ಅಧ್ಯಕ್ಷರು ವಿಶೇಷವಾಗಿ ಆಗಮಿಸಿ ಹಾರೈಸಿದರು.

ಈ ಸಂದರ್ಭದಲ್ಲಿ ಜೆಸಿಐ ಕುಶಾಲನಗರ ಕಾವೇರಿ ಅಧ್ಯಕ್ಷರಾದ ತೇಜ ದಿನೇಶ್, ZVP ಜಗದೀಶ್ ಬಿ, ಜೋನ್ ಕೋ-ಆರ್ಡಿನೇಟರ್ ರಜನಿಕಾಂತ್ ಎಂ.ಜೆ, ZAC ಮಾಜಿ ಅಧ್ಯಕ್ಷ ರಂಗಸ್ವಾಮಿ ಎಂ.ಡಿ, ZAC ಕಾರ್ಯದರ್ಶಿ ಪುನೀತ್ ಡಿ, ಸದಸ್ಯರಾದ ಕಾವ್ಯ ಜಗದೀಶ್, ಕೋಮಲ ರಜನಿಕಾಂತ್, ರವಿ ಸಿ, ಶ್ರೀನಿವಾಸ್ ಹಾಗೂ ಅನೇಕರು ಉಪಸ್ಥಿತರಿದ್ದರು.

ಈ ವರ್ಷ ಜೆಸಿಐ ಕುಶಾಲನಗರ ಕಾವೇರಿ ಘಟಕವು ಶನಿವಾರಸಂತೆ ಸಿರಿ ಎಂಬ ಹೊಸ ಘಟಕವನ್ನು ಸ್ಥಾಪಿಸಿದೆ. ಇದು ಘಟಕದ ಸಾಧನೆಗೆ ಮತ್ತೊಂದು ಮೈಲುಗಲ್ಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!