ಕುಶಾಲನಗರ, ಆ 28: ಸಂಚಾರಿ ನಿಯಮ ಉಲ್ಲಂಘಿಸುವವರ ಮೇಲೆ ನಿಗಾವಹಿಸಲು ಪೊಲೀಸ್ ಇಲಾಖೆ ವತಿಯಿಂದ ಕೊಡಗು-ಮೈಸೂರು ಗಡಿ ಕೊಪ್ಪದಲ್ಲಿ ಅಳವಡಿಸಿರುವ ಹೈಟೆಕ್ ಸಿಸಿ ಕ್ಯಾಮೆರಾದಿಂದ ಲೋಪ ಉಂಟಾಗಿರುವುದು ಗಮನಕ್ಕೆ ಬಂದಿದೆ.
ಹೆಲ್ಮೆಟ್ ಧರಿಸದ ಸವಾರರ ಛಾಯಾಚಿತ್ರ ಸೆರೆಹಿಡಿದು ಮಾಲೀಕರಿಗೆ ಫೈನ್ ನೋಟೀಸ್ ರವಾನೆಯಾಗಿದೆ. ಆದರೆ ನಿಯಮ ಉಲ್ಲಂಘಿಸಿದ ಸ್ಕೂಟಿ ಮಾಲೀಕನ ಬದಲಾಗಿ ಬುಲೆಟ್ ಮಾಲೀಕನಿಗೆ ದಂಡ ಪಾವತಿಸಲು ಕೋರಿ ಮೆಸೇಜ್ ರವಾನೆಯಾಗಿದೆ. ಸದರಿ ದಿನಾಂಕ ಹಾಗೂ ಸಮಯದಂದು ಬುಲೆಟ್ ಹೊರಗೆ ತೆಗೆಯದ ಮಾಲೀಕನಿಗೆ ಇದರಿಂದ ಆಶ್ಚರ್ಯ ಉಂಟಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ನಿಯಮ ಉಲ್ಲಂಘಿಸಿದ ದಿನಾಂಕ,ಸಮಯ ಪರಿಶೀಲಿಸಿದಾಗ ಅಲ್ಲಿ ಸ್ಕೂಟಿ ಚಿತ್ರ ಪತ್ತೆಯಾಗಿದ್ದು ಹೈಟೆಕ್ ಕ್ಯಾಮೆರಾ ಲೋಪದಿಂದ ಇನ್ನೆಷ್ಟು ಅಚಾತುರ್ಯ ಸಂಭವಿಸಲಿದೆ ಎಂದು ಕಾದು ನೋಡಬೇಕಾಗಿದೆ.
Back to top button
error: Content is protected !!