ರಾಜಕೀಯ

ಜಿಪಂ ಚುನಾವಣೆ: ಕೂಡಿಗೆ ಕ್ಷೇತ್ರಕ್ಕೆ ಬಿ.ಬಿ.ಜೈರಾಜ್ ಕಣಕ್ಕೆ ಸಾಧ್ಯತೆ

ಕುಶಾಲನಗರ, ನ 26: ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಕೂಡಿಗೆ ಕ್ಷೇತ್ರದಿಂದ ಉದ್ಯಮಿ ವಿ.ಬಿ.ಜೈರಾಜ್ ಸ್ಪರ್ಧಿಸುವ ಸಾಧ್ಯತೆ ಕಂಡುಬಂದಿದೆ.

ಕೂಡ್ಲೂರು ನಿವಾಸಿಯಾಗಿರುವ ಯುವ ಉದ್ಯಮಿ ಜೈರಾಜ್ ಅವರು ಕೂಡಿಗೆ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ.
ಕುಶಾಲನಗರ
ನಾಡಪ್ರಭು ಪತ್ತಿನ ಸಹಕಾರ ಸಂಘದ ನಿರ್ದೇಶಕರರು ಹಾಗು ಕುಶಾಲನಗರ ತಾಲೂಕು ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷರೂ ಆಗಿರುವ ಜೈರಾಜ್ ಅವರು ತಮ್ಮದೇ ಆದ ಬಳಗವನ್ನು ಹೊಂದಿದ್ದು ಪ್ರಸಕ್ತ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ನಿರೀಕ್ಷೆಯಲ್ಲಿ ಇದ್ದಾರೆ. ಜೈರಾಜ್ ಅವರು ಸ್ಥಳೀಯ ಅಭ್ಯರ್ಥಿಯಾಗಿರುವ ಕಾರಣ ಮತದಾರರೂ ಕೂಡ ಇವರ ಬಗ್ಗೆ ಒಲವು ಹೊಂದುವ ಸಾಧ್ಯತೆಯಿದೆ ಎನ್ನುವುದು ಇವರ ಬಳಗದ ಅಭಿಪ್ರಾಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!