ಕಾಮಗಾರಿ

ಚಿಕ್ಲಿಹೊಳೆ ಅಣೆಕಟ್ಟೆಯ ಮುಖ್ಯ ಕಾಲುವೆಗಳ ದುರಸ್ತಿಗೆ ಟೆಂಡರ್ ಪ್ರಕ್ರಿಯೆ

ಕುಶಾಲನಗರ, ಜೂ. 6: ಕಾವೇರಿ ನೀರಾವರಿ ಇಲಾಖೆಯ ಅಧೀನದಲ್ಲಿರುವ ಚಿಕ್ಲಿಹೊಳೆ ಅಣೆಕಟ್ಟೆಯ ಉಸ್ತುವಾರಿ ಮತ್ತು ಮುಖ್ಯ ಕಾಲುವೆಗಳ ಗಿಡಗಂಟಿಗಳ ತೆರವಿಗೆ ಸಂಬಂಧಿಸಿದಂತೆ ಇಲಾಖೆಯ ಮೂಲಕ ರೂ. 9. ಲಕ್ಷ ವೆಚ್ಚದ ಟೆಂಡರ್ ಪ್ರಕ್ರಿಯೆ ನಡೆದಿದ್ದು ಸಾಧ್ಯದಲ್ಲಿ ಸಣ್ಣ ಪ್ರಮಾಣದ ದುರಸ್ತಿ ಮತ್ತು ಗಿಡಗಂಟಿಗಳ ತೆರವು ಕೆಲಸ ನಡೆಯಲಿದೆ ಎಂದು ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.
ಚಿಕ್ಲಿಹೊಳೆ ಅಣೆಕಟ್ಟೆಯ ಉಸ್ತುವಾರಿಗೆ ಮತ್ತು ಅದಕ್ಕೆ ಸಂಬಂಧಿಸಿದ ಮುಖ್ಯ ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಕಡಿಯುವ ಮೂಲಕ ನಾಲೆ ನೀರು ಸರಾಗವಾಗಿ ಹರಿಯುವಂತೆ ಮಾಡುವ ಮತ್ತು ಕೆಲವು ಆಯ್ದ ಭಾಗಗಳಲ್ಲಿ ಮುಖ್ಯ ಕಾಲುವೆಯ ನೀರು ಪೋಲಾಗುತ್ತಿರುವ ಜಾಗದ ದುರಸ್ತಿ ಸೇರಿದಂತೆ ಅಣೆಕಟ್ಟೆಯ ಉಸ್ತುವಾರಿಯನ್ನು ನಿರ್ವಹಣೆ ಮಾಡಲು ಈ ಬಾರಿ ಸರಕಾರ ನೀರಾವರಿ ನಿಗಮದ ಮುಖೇನ ಟೆಂಡರ್ ಪ್ರಕ್ರಿಯೆ ನಡೆಸಿದೆ. ಅದರ ಮೂಲಕ ಕೆಲಸವನ್ನು ಕೈಗೊಳ್ಳಲಾಗುವುದು ಎಂದು ಐ‌ ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!