ಕುಶಾಲನಗರ, ಮೇ 18: ಸೋಮವಾರಪೇಟೆ ಚೌಡ್ಲು ಗ್ರಾಮದ ನಿವಾಸಿ ಸಂಪತ್ @ ಶಂಬು ಹತ್ಯೆ ಪ್ರಕರಣಕ್ಕೆ ಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರಪೇಟೆ ಹಾನಗಲ್ಲು ಗ್ರಾಮದ ಕಿರಣ್ ಬಿ.ಎಂ. (44), ಕಿರಣ್ ಪತ್ನಿ ಸಂಗೀತ (35) ಹಾಗೂ
ಚೌಡ್ಲು ಗ್ರಾಮದ ಪಿ.ಎಂ.ಗಣಪತಿ (43) ಬಂಧಿತ ಆರೋಪಿಗಳು
ಘಟನೆಯ ಸಂಕ್ಷಿಪ್ತ ವಿವರ:
ಮೃತ ಸಂಪತ್ ಮೇಲಿನ ಆರೋಪಿಗಳು ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೊಲೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಆರೋಪಿ ಸಂಗೀತಾಳು ಸಂಪತ್ ರನ್ನು ಸೋಮವಾರಪೇಟೆಯ ಹಾನಗಲ್ ಗೆ 09.05.2025 ಬರಮಾಡಿಕೊಂಡು ಕಿರಣ್ ಹಾಗೂ ಗಣಪತಿ ಜೊತೆ ಸೇರಿಕೊಂಡು ಕೋವಿಯಿಂದ ಬೆದರಿಸಿ, ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಕಡಿದು ಕೊಲೆ ಮಾಡಿ ಮೃತದೇಹವನ್ನು ಮರೆಮಾಚಲು ಸಂಪತ್ ಚಲಾಯಿಸಿಕೊಂಡು ಬಂದಿದ್ದ ಫಿಯೇಟ್ ಪುಂಟೋ ಕಾರಿನಲ್ಲಿ ಹಾಕಿಕೊಂಡು ಸಕಲೇಶಪುರ ತಾಲ್ಲೂಕು ವಣಗೂರು ಅರಣ್ಯದಲ್ಲಿ ಸಂಪತ್ ಮೃತ ದೇಹವನ್ನು ಬಿಸಾಡಿ ಕಾರನ್ನು ಕಲ್ಲಳ್ಳಿ ಗ್ರಾಮದಲ್ಲಿ ನಿಲ್ಲಿಸಿ ತಮ್ಮ ಸಂಚಿನಂತೆ ಮೊದಲೇ ಬೆಂಗಳೂರಿನಿಂದ ಬರಮಾಡಿಕೊಂಡಿದ್ದ ಬೇರೊಂದು ಕಾರಿನಲ್ಲಿ ಯಾರಿಗೂ ತಿಳಿಯದಂತೆ ವಾಪಾಸ್ಸು ಬಂದಿರುವುದಾಗಿದೆ ತನಿಖೆಯಲ್ಲಿ ತಿಳಿದುಬಂದಿದೆ. ಅಪರಾಧ ಪತ್ತೆ ತಂಡಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ದಿನಾಂಕ 16-05-2025 ರಂದು ಆರೋಪಿ ಕಿರಣ್ನನ್ನು ಬೆಂಗಳೂರಿನಲ್ಲಿ ದಸ್ತಗಿರಿ ಮಾಡಿದ್ದು, ಆತನ ವಿಚಾರಣೆ ನಂತರ ಆರೋಪಿ ಗಣಪತಿಯನ್ನು ದಿ : 17-05-2025 ರಂದು ಬೆಳ್ತಂಗಡಿಯಲ್ಲಿ ಹಾಗೂ 18-05-2025 ರಂದು ಕಿರಣನ ಹೆಂಡತಿ ಸಂಗೀತಳನ್ನು ಸೋಮವಾರಪೇಟೆಯಲ್ಲಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ಆರೋಪಿಗಳು ಕೃತ್ಯವನ್ನು ಎಸಗಿರುವುದು ಧೃಡಪಟ್ಟಿರುತ್ತದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕೋವಿ, ಕತ್ತಿ, ದೊಣ್ಣೆ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯ ಎಸಗಲು ಆರೋಪಿಗಳಿಗೆ ಸಹಕರಿಸಿದ ಹಾಗೂ ಆರೋಪಿಗಳಾದ ಕಿರಣ್ ಮತ್ತು ಗಣಪತಿ ತಲೆಮರೆಸಿಕೊಳ್ಳಲು ಸಹಕರಿಸಿದ ಇತರೆ ಆರೋಪಿಗಳನ್ನು ಆದಷ್ಟು ಶೀಘ್ರವಾಗಿ ಪತ್ತೆ ಹಚ್ಚಿ ದಸ್ತಗಿರಿ ಮಾಡಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
Back to top button
error: Content is protected !!