ಕುಶಾಲನಗರ, ಡಿ 17: : ಇದೇ ತಿಂಗಳ ತಾ.21 ರಂದು ಜರುಗುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹನಿಗಳನ್ನು ಹಾಕಿಸಿಕೊಳ್ಳುವಂತೆ ಪೋಷಕರನ್ನು ಅಣಿಗೊಳಿಸಬೇಕೆಂದು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆ ಯರಿಗೆ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ ಕರೆಕೊಟ್ಟರು.
ಕೂಡಿಗೆಯ ಯೂನಿಯನ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಕುರಿತಾದ ಪೂರ್ವ ಭಾವಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತ ಪೋಲಿಯೋ ಮುಕ್ತ ದೇಶವಾಗಿದೆ. ಆದರೆ ಕೆಲವು ದೇಶಗಳಲ್ಲಿ ಭೀತಿ ಉಂಟು ಮಾಡುತ್ತಿರುವ ಪೋಲಿಯೋ ನಮ್ಮ ದೇಶಕ್ಕೆ ನುಸುಳದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ವಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದೆ. ಹಾಗಾಗಿ ಅಂಗನವಾಡಿ ಹಾಗೂ ಅಶಾ ಕಾರ್ಯಕರ್ತರು ಪೋಲಿಯೋ ಹನಿಗಳಿಂದ ಯಾವುದೇ ಒಂದು ಮಗುವು ವಂಚಿತವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಕರೆ ಕೊಟ್ಟರು.
ತಾ.21 ರ ನಂತರ 24 ರವರೆಗೂ ಮನೆ ಮನೆಗಳಿಗೆ ತೆರಳಿ ಪೋಲಿಯೋ ಲಸಿಕೆ ಹಾಕಲಾಗುತ್ತದೆ ಎಂದು ಡಾ.ದೀಪಿಕಾ ಹೇಳಿದರು.
ಸಮುದಾಯ ಆರೋಗ್ಯ ನಿರೀಕ್ಷಕರಾದ ಚಂದ್ರೇಶ್, ಮುಖೇಶ್, ಸಕೀನಾ, ಮಮತ, ರಘು ರಾಜಯ್ಯ,ಸೌಮ್ಯ ಹಾಗೂ ದೀಪಾ ಇದ್ದರು.
Back to top button
error: Content is protected !!