ಕ್ರೈಂ

ಬಿ.ಶೆಟ್ಟಿಗೇರಿಯಲ್ಲಿ ಕೇರಳ‌ ಮೂಲದ‌ ವ್ಯಕ್ತಿಯ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ

ಕುಶಾಲನಗರ, ಮೇ 03:ದಿನಾಂಕ: 23-04-2025 ರಂದು ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಗಣ, ಬಿ.ಶೆಟ್ಟಿಗೇರಿ ಗ್ರಾಮದ ಕಾಫಿ ತೋಟದ ಮನೆಯಲ್ಲಿ ವಾಸವಿದ್ದ ಕೇರಳ ರಾಜ್ಯ ಕಣ್ಣೂರು ಜಿಲ್ಲೆ ಮೂಲದ ಪ್ರದೀಪ್ ಕೊಯ್ಲಿ ರವರನ್ನು ಕುತ್ತಿಗೆ ಹಗ್ಗದಿಂದ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕಲಂ: 103(1), 3(3) ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಉಪವಿಭಾಗ ಮಟ್ಟದ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು 05 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ..

ಆರೋಪಿಗಳ ವಿವರ:

1. ಅನಿಲ್.ಎನ್.ಎಸ್ @ ಮುತ್ತಣ್ಣ, 25 ವರ್ಷ, ಮುಗುಟಗೇರಿ, ಪೊನ್ನಂಪೇಟೆ.

2. ದೀಪಕ್ @ ದೀಪು, 21 ವರ್ಷ, ಅಲ್ಲೂರು ಕಟ್ಟೆ, ಸೋಮವಾರಪೇಟೆ.

3. ಸ್ಟೀಫನ್ ಡಿಸೋಜ, 26 ವರ್ಷ, ನೇರುಗಳಲೆ, ಸೋಮವಾರಪೇಟೆ.

4. ಕಾರ್ತಿಕ್.ಹೆಚ್.ಎಂ. 27 ವರ್ಷ, ಹಿತ್ತಲಮಕ್ಕಿ, ಸೋಮವಾರಪೇಟೆ.

5. ಹರೀಶ್.ಟಿಎಸ್, 29 ವರ್ಷ, ನಲ್ಲೂರು, ಪೊನ್ನಂಪೇಟೆ,

ವಶಪಡಿಸಿಕೊಡ ಸ್ವತ್ತುಗಳ ವಿವರ:

1. ನಗದು ರೂ 13,03,000/-

2. ಕೃತ್ಯಕ್ಕೆ‌ ಬಳಸಿದ ಎರಡು ದ್ವಿಚಕ್ರ ವಾಹನ

3. ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್.

4. ಮೃತ ವ್ಯಕ್ತಿಯ ಮೊಬೈಲ್

5. ಮೃತ ವ್ಯಕ್ತಿಗೆ ಸೇರಿದ ಆಸ್ತಿ ಪತ್ರಗಳು.

ಸದರಿ ಪ್ರಕರಣದ ಆರೋಪಿಯಾದ ಅನಿಲ್ ಎಂಬಾತನು ಪ್ರೀತಿಸುತ್ತಿದ್ದ ಹುಡುಗಿಯ ಮನೆಯವರಲ್ಲಿ ಮದುವೆ ಮಾತುಕತೆ ನಡೆಯುವಾಗ, ಹುಡುಗಿ ಮನೆಯವರು ನೀನು ಯಾವುದೇ ಕೆಲಸ ಮಾಡದೇ ಮತ್ತು ಯಾವುದೇ ಆಸ್ತಿ ಇಲ್ಲದೇ ಇರುವುದರಿಂದ ಮದುವೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನಿರಾಕರಿಸಿರುವ ಕಾರಣದಿಂದ ಶೀಘ್ರವಾಗಿ ಹಣ/ಆಸ್ತಿ ಗಳಿಸುವ ಉದ್ದೇಶ ಹೊಂದಿ ಈ ಕೆಳಗಿನ ಕೃತ್ಯಗಳನ್ನು ಎಸಗಿರುವುದು ತನಿಖೆಯಲ್ಲಿ ಕಂಡುಬಂದಿದೆ.

ತಾನು ಕೆಲಸ ಮಾಡುವ ಜಾಗಗಳಲ್ಲಿ ಪರಿಚಯ ಮಾಡಿಕೊಂಡು ಜಮೀನಿನಲ್ಲಿ ನಿಧಿ ಇರುವುದಾಗಿ ನಂಬಿಸಿ ಬೆಂಗಳೂರು, ಹಾಸನ ಪೊನ್ನಂಪೇಟೆ ಕಡೆಗಳಲ್ಲಿ ಹಣ ಪಡೆದು ಮೋಸ ಮಾಡಿರುವುದು,

ಒಂಟಿಯಾಗಿ ವಾಸ ಮಾಡುತ್ತಾ ಹೆಚ್ಚಿನ ಆಸ್ತಿ ಹೊಂದಿರುವವರನ್ನು ಗುರುತಿಸಿ ಆಸ್ತಿ ಖರೀದಿ/ಮಾರಾಟ ಮಾಡುವ ನೆಪದಲ್ಲಿ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ತಿತಿಮತಿಯಲ್ಲಿನ ಒಂಟಿ ಮಹಿಳೆಯೊಬ್ಬರನ್ನು ಸಂಪರ್ಕಿಸಿದ್ದು, ಸದರಿ ಮಹಿಳೆಗೆ ಸ್ಥಳೀಯವಾಗಿ ಸಂಬಂಧಿಕರು ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸದರಿ ವ್ಯವಹಾರವನ್ನು ಸ್ಥಗಿತಗೊಳಿಸಿರುವುದು.

ಕೊಣನಕಟ್ಟೆ ಎಂಬಲ್ಲಿ 50 ಎಕರೆ ಮಾಲೀಕರನ್ನು ಆಸ್ತಿ ಖರೀದಿಸುವ ನೆಪದಲ್ಲಿ ಪರಿಚಯಿಸಿಕೊಂಡು ಮನೆಯಲ್ಲಿ ಮಕ್ಕಳು ಇರುವುದರಿಂದ ಈ ವ್ಯವಹಾರವನ್ನು ಸರಿ ಬರುವುದಿಲ್ಲ ಎಂದು ಬಿಟ್ಟಿರುತ್ತಾನೆ

ಮಧ್ಯವರ್ತಿಗಳ ಮೂಲಕ ಮೃತ ಪ್ರದೀಪ್ ಕೊಯ್ಲಿ ರವರಿಗೆ ಮದುವೆಯಾಗದಿರುವ ಬಗ್ಗೆ ಮತ್ತು ಸ್ಥಳೀಯ ವಾಸಿಯಲ್ಲ ಹಾಗೂ ಹೆಚ್ಚಿನ ಆಸ್ತಿ ಹೊಂದಿರುವ ಕುರಿತು ಮಾಹಿತಿಯನ್ನು ಖಚಿತ ಪಡಿಸಿಕೊಂಡು ಖರೀದಿದಾರರು ವಿದೇಶದಲ್ಲಿರುವುದಾಗಿ ತಿಳಿಸಿ ಅವರ ಪರವಾಗಿ ಮೃತ ಪ್ರದೀಪ್‌ ಕೊಡ್ಲಿ ರವರಿಗೆ ಆಸ್ತಿ ಖರೀದಿಸುವುದಾಗಿ ರೂ. 1 ಲಕ್ಷ ಹಣವನ್ನು ಮುಂಗಡವಾಗಿ ನೀಡಿರುತ್ತಾನೆ.

ಕೊಲೆ ಮಾಡಿದ ನಂತರ ಮೃತರ ಮನೆಗೆ ರಾತ್ರಿ ಮರಳಿ ಮನೆಯಲ್ಲಿದ್ದ ಮೃತದೇಹವನ್ನು ಹೂತು ಹಾಕುವುದು ಹಾಗೂ ಮನೆಯಲ್ಲಿದ್ದ ಕರಿಮೆಣಸು, ಮೃತರ ಕಾರು. ಸಿಸಿಟಿವಿಗಳನ್ನು ನಾಶಪಡಿಸುವ ಬಗ್ಗೆ ಉಪಾಯ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿರುತ್ತದೆ.

ವಿಶೇಷ ತನಿಖಾ ತಂಡದ ವಿವರ:

1. ಶ್ರೀ ಮಹೇಶ್ ಕುಮಾರ್.ಎಸ್. ಡಿಎಸ್ ಪಿ, ವಿರಾಜಪೇಟೆ ಉಪವಿಭಾಗ

2. ಶ್ರೀ ಶಿವರಾಜ್ ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ

3. ಶ್ರೀ ಅನೂಪ್ ಮಾದಪ್ಪಪಿ, ಸಿಪಿಐ, ವಿರಾಜಪೇಟೆ ವೃತ್ತ,

5. ಶ್ರೀ ಪ್ರದೀಪ್ ಕುಮಾರ್, ಪಿಎಸ್‌ಐ, ಗೋಣಿಕೊಪ್ಪ ಪೊಲೀಸ್ ಠಾಣೆ.

4. ಶ್ರೀ ಶಿವರುದ್ರ,ಬಿ.ಎಸ್, ಸಿಪಿಐ, ಕುಟ್ಟಿ ವೃತ್ತ

6. ಶ್ರೀ ಪ್ರಮೋದ್ ಕುಮಾರ್, ಪಿಎಸ್‌ಐ, ವಿರಾಜಪೇಟೆ ನಗರ ಹೊ.ತಾ.

7. ಶ್ರೀ ನವೀನ್.ಜಿ. ಪಿಎಸ್‌ಐ, ಪೊನ್ನಂಪೇಟೆ ಪೋ.ತಾ.

೫. ಶ್ರೀ ರವೀಂದ, ಪಿಎಸ್‌ಐ, ಶ್ರೀಮಂಗಲ ಪೊ.ತಾ.

10. ಶ್ರೀಮತಿ ಲತಾ.ಎನ್.ಜೆ, ಪಿಎಸ್‌ಐ, ವಿರಾಜಪೇಟೆ ಗ್ರಾಮಾಂತರ ಪೊ.ಡಾ.

9. ಶ್ರೀ ಮಹದೇವ ಹೆಚ್.ಕೆ, ಕುಟ್ಟ ಪೊ.ಠಾ

11. ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು

Related Articles

Leave a Reply

Your email address will not be published. Required fields are marked *

Back to top button
error: Content is protected !!