ಕಾರ್ಯಕ್ರಮ

ಕುಶಾಲನಗರದಲ್ಲಿ ಗಮನ ಸೆಳೆದ ಬೆಸ್ಟ್ ಪೆಟ್ ಶೋ

ಕುಶಾಲನಗರ,‌ ಮೇ 04:ಸಾಕು ನಾಯಿ, ಬೆಕ್ಕು ಮನೆಯಲ್ಲಿ ಇದ್ದರೇ ಸಾಕಷ್ಟು ಪ್ರಯೋಜನಗಳನ್ನು ಕಾಣಬಹುದು. ಒಳ್ಳೆ ಜಾತಿಯ ನಾಯಿ ಮನೆಯಲ್ಲಿ ಒಂದು ಇದ್ದರೂ ಸಾಕು ಅದು 10 ಜನರಿಗೆ ಸಮಾ ಎಂದು ಕುಶಾಲನಗರ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಚಿತ್ರ ರಮೇಶ್ ಹೇಳಿದರು.

ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ಕುಶಾಲನಗರದ ಇನ್ನರ್ ವೀಲ್ ಸಂಸ್ಥೆಯ 10ನೇ ವರ್ಷದ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ವಿಶೇಷವಾಗಿ ಸಂಭ್ರಮಿಸಲು ಆಯೋಜಿಸಿದ್ದ ಸಾಕು ನಾಯಿ ಮತ್ತು ಬೆಕ್ಕುಗಳ ಬೆಸ್ಟ್ ಪೆಟ್ ಸ್ಪರ್ಧೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸ್ಪರ್ಧೆಯ ಮೂಲಕ ಜನರಲ್ಲಿ ನಾಯಿ ಬೆಕ್ಕುಗಳ ಬಗ್ಗೆ ಜಾಗೃತಿ ಮತ್ತು ಪ್ರೀತಿ ಮೂಡಿಸುವ ಉದ್ದೇಶವಿದೆ. ಬಹಳಷ್ಟು ಜನಕ್ಕೆ ಸಾಕುವ ಆಸೆ ಇದ್ದರೂ ಕೂಡ ಸಮಯ ಮತ್ತು ಸೂಕ್ತ ಸ್ಥಳವಾಕಶವಿರುವುದಿಲ್ಲ. ಅಂತಹವರು ಇಂತಹ ಸ್ಪರ್ಧೆಗಳ ಮೂಲಕ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ನಾಯಿಯಿದೆ ಎಂದು ಬೋರ್ಡ್ ಮನೆಯ ಮುಂದೆ ಹಾಕಿದರೆ ಸಾಕು ಆ ಮನೆ ಕಳ್ಳರಿಂದ ದೂರಾಗುತ್ತದೆ ಎಂದು ವಿವರಿಸಿದರು. ಇನ್ನು ಬೆಕ್ಕು ಮನೆಯ ಸದಸ್ಯರಂತೆ ಇರುವುದನ್ನು ನಾನು ಅನುಭವಿಸಿದ್ದೇನೆ ಎಂದು ತಿಳಿಸಿದರು.
ಬೈಲುಕೊಪ್ಪ ಸಮೀಪದಲ್ಲಿ ಡೋಲ್ಮ ಡಾಗ್ ರೆಸ್ಕ್ಯೂ ಹೌಸ್ ನ ಮಾಲೀಕ ಕಲ್ಸಂಗ್ ದೊರ್ಜಿ ಮತ್ತು ಪಶು ಇಲಾಖೆಯ ಸಂಚಾರಿ ಆಂಬ್ಯುಲೆನ್ಸ್ ನ ಪಶು ವೈದ್ಯಾಧಿಕಾರಿ ಡಾ.ಶಶಿಧರ್.ಎನ್.ಕ್ಯಾತರಿ ಜಡ್ಜ್ ಗಳಾಗಿ ಕಾರ್ಯ ನಿರ್ವಹಿಸಿದರು.
ಕ್ಲಬ್ ಪ್ರಮುಖರಾದ ಸೀತಾಲಕ್ಷ್ಮಿ, ನೇಹಾ ಜಗದೀಶ್, ರೇಖಾ ಗಂಗಾಧರ್, ಭಾರತಿ ದೇವಯ್ಯ, ದಿವ್ಯ ಸುಜಯ್, ಸುನೀತಾ ಮಹೇಶ್, ಜಾಸ್ಮಿನ್, ಕವಿತಾ ಸಾತಪ್ಪನ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಬಹುಮಾನ ವಿಜೇತರ ವಿವರ :
ನಾಯಿಗಳ ವಿಭಾಗ :
ಒಟ್ಟು ಪ್ರದರ್ಶನದಲ್ಲಿ ಗುಡ್ಡೆಹೊಸೂರು ಗ್ರಾಮದ ವರ್ಷ ಮಾಲಿಕತ್ವದ ಹಸ್ಕಿ ಜಾತಿಯ ಅರ್ಜುನ ಎನ್ನುವ ನಾಯಿ ಪ್ರಥಮ ಸ್ಥಾನ ಪಡೆಯಿತು.
ಕುಶಾಲನಗರ ಬಸವೇಶ್ವರ ಬಡಾವಣೆಯ ಅರುಂಧತಿ ಮಾಲಿಕತ್ವದ ಗೋಲ್ಡನ್ ರಿಟ್ರೀವರ್ ಜಾತಿಯ ಅಧಿ ಉತ್ರಮ ಪ್ರದರ್ಶನ ಬಹುಮಾನ ಪಡೆಯಿತು.
ಬೆಸ್ಟ್ ಗ್ರೂಮ್ ಗುಮ್ಮನಕೊಲ್ಲಿಯ ಹೇಮಂತ್ ಅವರ ಶೀಟ್ಜು ಜಾತಿಯ ಲೂನ ಬಹುಮಾನ ಪಡೆಯಿತು.
ಉತ್ತಮ ನಡವಳಿಕೆ ವಿಭಾಗದಲ್ಲಿ ಗಂಧದಕೋಟೆಯ ಯಾಧವ್ ಎನ್ನುವರ ಬ್ರೂನೋ ಹೆಸರಿನ ರಾಟ್ವಿಲ್ಲರ್ ನಾಯಿ ಬಹುಮಾನ ಪಡೆಯಿತು.
ವಿಶೇಷ ಪ್ರದರ್ಶನ ವಿಭಾಗದಲ್ಲಿ ಕುಶಾಲನಗರದ ರಂಜನ್ ಅವರ ಬ್ರೋನೋ ಹೆಸರಿನ ನಾಯಿ ಆಯ್ಕೆಯಾಯಿತು.

ಬೆಕ್ಕುಗಳ ವಿಭಾಗ :
ದಂಡಿನಪೇಟೆಯ ಶಾಹಿನ ಅವರ ಬೆಕ್ಕು
ಮುಸ ಖಾನ್ ಮೊದಲ ಸ್ಥಾನ, ಧರಣಿ ಸೋಮಯ್ಯ ಅವರ ಟಾರ್ಜನ್ ದ್ವಿತೀಯ ಮತ್ತು ಸರಿತಾರಯ್ಯ ಅವರ ರಿಕ್ಕಿ ತೃತೀಯ ಸ್ಥಾನ ಪಡೆಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!