ಕೂಡಿಗೆ, ಏ. 5: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಕೆ ಕೆ. ಹೇಮಂತ್ ಕುಮಾರ್ ನವರ ಅಧ್ಯಕ್ಷತೆಯಲ್ಲಿ ರೈತರ ಸಭೆಯು ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಪ್ರಮುಖವಾಗಿ ಸರಕಾರವು ರೈತರಿಗೆ ಶೇ 0% ಬಡ್ಡಿ ದರದಲ್ಲಿ ಕೆ.ಸಿ.ಸಿ. ಫಸಲು ಸಾಲ ನೀಡುವ ಸಂಬಂಧವಾಗಿ ಸರಕಾರದ ಆದೇಶದ ಪ್ರಕಾರವಾಗಿ ಸಿಂಗಲ್ ಆರ್.ಟಿ.ಸಿ. ಉಳ್ಳವರು ಮಾತ್ರ ಪ್ರೂಟ್ ತಂತ್ರಾಂಶದ ಮೂಲಕ ಫಾರಂ 3. ಮಾಡಿಸಿ ಕೆ. ಸಿ. ಸಿ. ಸಾಲ ಪಡೆಯಬಹುದಾಗಿದೆ, ಅದರೆ 2021ರಲ್ಲಿ ಆದೇಶ ಬಂದರೂ ಇಲ್ಲಿಯವರೆಗೆ ಶೇ 0%. ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿತು. ಅದರೆ ಸಹಕಾರ ಸಂಘದಲ್ಲಿ ಕಳೆದ ವರ್ಷಗಳಲ್ಲಿ ಜಂಟಿ ಖಾತೆಯ ಆರ್.ಟಿ.ಸಿ. ಯಲ್ಲಿ 200.ಕ್ಕೂ ಹೆಚ್ಚು ಮಂದಿ ರೈತರು ಸಹಕಾರ ಸಂಘದ ನಿಯಮಾನುಸಾರ ಕೆ.ಸಿ.ಸಿ. ಸಾಲವನ್ನು ಪಡೆದಿರುತ್ತಾರೆ ಅದರೆ ಇಂದಿಗ ಮರು ಪಾವತಿ ಸಂದರ್ಭದಲ್ಲಿ ಈ. ನಿಯಮಗಳನ್ನು ಜಾರಿಗೆ ತಂದಿರುವುದರಿಂದಾಗಿ ರೈತರುಗಳಿಗೆ ತೊಂದರೆಗಳು ಅಗುವುದರ ಬಗ್ಗೆ ಸವಿಸ್ತಾರವಾಗಿ ಸಭೆಯಲ್ಲಿ ಹಾಜರಿದ್ದ ನೂರಾರು ರೈತರು ತಿಳಿಸಿದರು.
ಸಭೆಯಲ್ಲಿ ಸರಕಾರದ ಸೂಚನೆ, ಮತ್ತು ಅದಕ್ಕೆ ಅನುಗುಣವಾಗಿ ರೈತರಿಗೆ ಅನುಕೂಲವಾಗುವಂತೆ ಜಂಟಿ ಖಾತೆಯಲ್ಲಿರುವ ರೈತರಿಗೆ ಕೆ.ಸಿ.ಸಿ. ಸಾಲವನ್ನು ಪಡೆಯುವ ಯೋಜನೆಗೆ ಸಂಬಂಧಿಸಿದ ಸಲಹೆ,ಸೂಚನೆಗಳು ಸಂಘದ ಅಧ್ಯಕ್ಷ ಕೆ ಕೆ ಹೇಮಂತ್ ಕುಮಾರ್ ನೀಡಿದರು. ಅದರ ಅನುಗುಣವಾಗಿ ಜಿಲ್ಲೆ ಕೇಂದ್ರದ ಬ್ಯಾಂಕ್ ನಿಯಮಗಳನ್ನು ಪಾಲನೆ ಮಾಡಿ ತಮ್ಮ ತಮ್ಮ ಜಂಟಿ ಖಾತೆದಾರರು ತಮ್ಮ ಆಧಾರ್ ಕಾರ್ಡ್ ನೊಂದಣಿ, ಸೇರಿದಂತೆ ಸಹಕಾರ ನಿಯಮಾನುಸಾರ ಕೆ.ಸಿ.ಸಿ. ಸಾಲ ನೀಡುವ ಸಂಪೂರ್ಣವಾದ ಮಾಹಿತಿಯನ್ನು ರೈತರಿಗೆ ಒದಗಿಸಿದರು. ಜೊತೆಗೆ ಸಿಂಗಲ್ ಆರ್.ಟಿ.ಸಿ. ಮಾಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಹಾಜರಿದ್ದ ರೈತರುಗಳಾದ ಪ್ರಕಾಶ್, ತಮ್ಮಯ್ಯ ರಾಜಣ್ಣ, ಕುಮಾರ್ ಕೆ.ಕೆ. ನಾಗರಾಜಶೆಟ್ಟಿ, ಸೋಮಶೇಖರ್, ಮಂಜುನಾಥ ನವರು ಸಹಕಾರ ಸಂಘದ ನಿಯಮಗಳಿಲ್ಲಿ ಸಡಿಲಿಕೆಯ ಮೂಲಕ ರೈತರಿಗೆ ಸಾಲ ಸೌಲಭ್ಯಗಳನ್ನು ನೀಡುವಂತೆ ಸಲಹೆಗಳನ್ನು ನೀಡುವುದರ ಜೊತೆಯಲ್ಲಿ ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಸಭೆಗೆ ಅಗಮಿಸಿದ್ದ ಕೊಡಗು ಜಿಲ್ಲೆಯ ಸಹಕಾರ ಬ್ಯಾಂಕ್ ನ ಕುಶಾಲನಗರ ವಲಯ ಮೆನೇಜರ್ ಅಜಿತ್ ಕುಮಾರ್ ನವರು ಕೆ.ಸಿ.ಸಿ.ಫಸಲು ಸಾಲ ಪಡೆಯುವ ಹೊಸ ವಿಧಾನ , ರೈತರು ಕೈಗೊಳ್ಳಲಾಬಹುದಾದ ಮಾಹಿತಿಯನ್ನು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಕೃಷ್ಣ ಗೌಡ, ಕೆ.ಪಿ. ರಾಜು , ಎಸ್. ಎಸ್. ಕೃಷ್ಣ, ಜಯಶ್ರೀ, ರಮೇಶ್, ಕುಮಾರ್, ಸಂಘದ ಮೇಲ್ವಿಚಾರಕ ಮಹಮ್ಮದ್ , , ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಪೂರ್ಣಿಮಾ, ಸೇರಿದಂತೆ 14 ಗ್ರಾಮಗಳ ನೂರಾರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.
Back to top button
error: Content is protected !!