ಸಭೆ

ಕುಶಾಲನಗರ ಕೋಟಿ ಚೆನ್ನಯ ಬಿಲ್ಲವ ಸಮಾಜ ವಾರ್ಷಿಕ ಮಹಾಸಭೆ

ಕುಶಾಲನಗರ, ಆ 24: ಕುಶಾಲನಗರ ಕೋಟಿ ಚೆನ್ನಯ ಬಿಲ್ಲವ ಸಮಾಜ  ಅಧ್ಯಕ್ಷರಾದ  ಸುಧೀರ್ ಪೂಜಾರಿ ಅವರ ನೇತೃತ್ವದಲ್ಲಿ ವಾರ್ಷಿಕ ಮಹಾಸಭೆ ನಗರದ ಮಹಾಲಕ್ಷ್ಮಿ ಹಾಲ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ
ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷ ರಾದ  ಲಿಂಗಪ್ಪ ಪೂಜಾರಿ, ಜಿಲ್ಲಾ ಮಹಿಳಾ ಸಂಚಾಲಕಿ  ಪೂರ್ಣಿಮ ಹಾಗೂ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಸೌಮ್ಯ ಭರತ್  ಅವರನ್ನು ಸನ್ಮಾನಿಸಲಾಯಿತು.
ವಾರ್ಷಿಕ ವರದಿಯನ್ನು ಕಾರ್ಯ ದರ್ಶಿ  ದಿನೇಶ್ ಪೂಜಾರಿ ಮಂಡಿಸಿದರು.
24/25ರ ಆಯಾ ವ್ಯಯ ಖಜಾಂಚಿ ಆಶಾ ಅಣ್ಣಪ್ಪ ಮಂಡಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ  ಕುಸುಮಾವತಿ, ಸಲಹೆಗಾರರಾದ  ಚಂದ್ರಶೇಖರ್ , ಮಾಜಿ ಅಧ್ಯಕ್ಷ ಸತೀಶ್ ಕುಂದರ್, ರಮೇಶ್ ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!