ಕುಶಾಲನಗರ, ಮಾ 01: ಬೆಂಗಳೂರಿನ ಜಾಗೃತಿ ಹಾಗೂ ಸಿಸ್ಕೊ ಸಂಸ್ಥೆಯ 40 ಸ್ವಯಂಸೇವಕರ ತಂಡವು ಸಿದ್ದಾಪುರದ ಸ. ಹಿ ಪ್ರಾ. (ಮಲಯಾಳಂ ) ಶಾಲೆಗೆ ಭೇಟಿ ನೀಡಿತ್ತು.
ತಂಡದ ಸದಸ್ಯರು ಶಿಕ್ಷಕರಿಗೆ ಹಾಗೂ ಶಾಲಾ ಮಕ್ಕಳಿಗೆ ಅಗತ್ಯವಾದ ಕಲಿಕಾ – ಭೋದನ ಉಪಕರಣಗಳನ್ನು ವಿದ್ಯಾರ್ಥಿಗಳ , ಶಿಕ್ಷಕರ ಜೊತೆಗೂಡಿ ತಯಾರಿಸಿಕೊಟ್ಟು ಮಕ್ಕಳ ಕಲಿಕೆ ಪ್ರೋತ್ಸಾಹ ನೀಡುವುದರ ಜೊತೆಗೆ ತರಗತಿ ಕೊಠಡಿಗಳ ಕಪ್ಪು ಹಲಗೆಗಳಿಗೆ, ಶಾಲಾ ರಂಗ ಮಂದಿರಕ್ಕೆ ಬಣ್ಣ ಬಳಿದು, ಶಾಲೆಯ ವಿದ್ಯಾರ್ಥಿಗಳಿಗೆ ಬರೆಯುವ ವಿವಿಧ ಪರಿಕರ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಿ ಶಾಲೆಯ ಭೌತಿಕ, ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ಸಿಸ್ಕೊ ಸಂಸ್ಥೆಯ ಸ್ವಯಂ ಸೇವಕರು, ಜಾಗೃತಿ ಟ್ರಸ್ಟಿನ ಆಡಳಿತ ಅಧಿಕಾರಿ ಆರ್.ಕಣ್ಣನ್, ಖಜಾಂಚಿ ಕೊಡಿಜಮ್ಮಂಡ ಶರಣು, ನೋಯಲ್ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಟಿ. ಕೆ. ಪ್ರೇಮ, ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸದಸ್ಯರು ಉಪಸ್ಥಿತರಿದ್ದರು
Back to top button
error: Content is protected !!