ಕುಶಾಲನಗರ, ಫೆ 05: ಕುಶಾಲನಗರ ಹೃದಯ ಭಾಗದಲ್ಲಿ ನೆಲೆಸಿರುವ ಸಹಸ್ರಾರು ಭಕ್ತರ ಆರಾಧ್ಯ ದೇವರಾದ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಹಿನ್ನಲೆಯಲ್ಲಿ ಭೂಮಿ ಪೂಜೆ ಫೆ. 9 ಮತ್ತು 10 ರಂದು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 6 ಕೋಟಿ ವೆಚ್ಚದಲ್ಲಿ ದೇವಾಲಯ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಹಿನ್ನಲೆಯಲ್ಲಿ 9/2/2025ರ ಭಾನುವಾರ ಬೆಳಿಗ್ಗೆ ಗಣಪತಿ ಪೂಜೆ, ಪುಣ್ಯಾಹ, ಋತ್ವಿಕ್ ವರಣ,12 ಕಾಯಿ ಗಣ ಹೋಮ, ಮುಷ್ಠಿ ಕಾಣಿಕೆ ಸಮರ್ಪಣೆ, ನಂತರದಲ್ಲಿ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ರಾತ್ರಿ ಪ್ರೇತಾ ಆಕರ್ಷಣೆ ಉಚ್ಚಾಟನೆ, ಅಘೋರ ಬಲಿ, 10/2/2025 ರಂದು ಶತ ರುದ್ರಾಭಿಷೇಕ ಬೆಳಿಗ್ಗೆ 7 ರಿಂದ 10ವರೆಗೆ, ನವಗ್ರಹ ಸಹಿತ ಭೂವರಾಹ ಸ್ವಾಮಿ ಹೋಮ ಬೆಳಿಗ್ಗೆ 9 ರಿಂದ 11.30ವರೆಗೆ, ಮಧ್ಯಾಹ್ನ 12 ರಿಂದ 12.30 ಒಳಗೆ ನಡೆಯುವ ವೃಷಭ ಲಗ್ನ ಶುಭಾಂಶದಲ್ಲಿ ಭೂಮಿ ಪೂಜೆ ನೆರವೇರಲಿದೆ, ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.
ಅದೇ ದಿನ ಬೆಳಿಗ್ಗೆ 10.30 ಗಂಟೆಗೆ ಜೀರ್ಣೋದ್ಧಾರ ನಿಮಿತ್ತ ದೇವಸ್ಥಾನ ಆವರಣದಲ್ಲಿ ಭಕ್ತರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಮಹಾಶಯರು, ಕೊಡುಗೈ ದಾನಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.
ಈ ಸಂದರ್ಭ ದೇವಾಲಯ ಸಮಿತಿಯ ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್, ನಿರ್ದೇಶಕರಾದ ಟಿ.ಆರ್.ಶರವಣಕುಮಾರ್, ಚಂದ್ರು, ಇದ್ದರು.
Back to top button
error: Content is protected !!