ಕುಶಾಲನಗರ, ಜು 25:
ಹಿಂದುವಿವಾಹ ಸಂಬಂಧಿತ ಸಂಘಟನೆತಾದ ವಿಶ್ವ ಹಿಂದು ಮಾಂಗಲ್ಯ ಮಂಚ್ ನ ರಾಷ್ಟ್ರೀಯ ಸಮಿತಿಯ ಪ್ರತಿನಿಧಿಗಳು ಕುಶಾಲನಗರಕ್ಕೆ ಭೇಟಿ ನೀಡಿದರು.
ಕುಶಾಲನಗರದ ಟಾಪ್ ಇನ್ ಟೌನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಹಿಂದು ಮಾಂಗಲ್ಯ ಮಂಚ್ ನ ಕರ್ನಾಟಕ ಶಾಖೆಯನ್ನು ಮಾಜಿ ಮಂತ್ರಿಗಳು, ಹಾಲಿ ಮಡಿಕೇರಿ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು
ರಂಜನ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ
ಕುಶಾಲನಗರ ಪ.ಪಂ.ಅಧ್ಯಕ್ಷ ಜೈವರ್ಧನ್, ಹಿಂದು ಮಲೆಯಾಳಿ ಸಮಾಜದ ಜಿಲ್ಲಾಧ್ಯಕ್ಷ, ವಿ.ಎಂ.ವಿಜಯನ್,ಪದಾಧಿಕಾರಿಗಳಾದ ಪಿ.ಡಿ.ಪ್ರಕಾಶ್, ಕಿಶೋರ್, ಅಜೀಶ್, ಪ್ರಮುಖರಾದ ಕೆ.ರಾಜನ್,ತಿಮ್ಮಯ್ಯ, ಶೇಖರನ್, ವಿಲಾಸಿನಿ, ಕನಕ,ನಿರ್ಮಲಾ, ವಾಣಿ,ಗೌರಮ್ಮ, ಪುಷ್ಪ, ಕವಿತಾ ಉದಯ ಉಪಸ್ಥಿತರಿದ್ದರು.
ಕೊಡವ ಸಮಾಜದ ಅಧ್ಯಕ್ಷರಾದ ಮಂಡೇಪಂಡ ಬೋಸ್ ಮೊಣ್ಣಪ್ಪ ,
ಗೌಡ ಸಮಾಜದ ಅಧ್ಯಕ್ಷರಾದ ಕೂರನ ಪ್ರಕಾಶ, ಗೌಡ ಯುವವೇದಿಕೆಯ ಅಧ್ಯಕ್ಷ ಕೊಡಗನ ಹರ್ಷ, ಕೇರಳ ಸಮಾಜದ ಅಧ್ಯಕ್ಷರಾದ ಶಿವನ್, ರಾಜ್ಯ ಬಿಜೆಪಿ ಎಸ್.ಟಿ.ಮೋರ್ಚಾದ ಕಾರ್ಯದರ್ಶಿ ಮಂಜುಳಾ, ನಗರ ಬಿಜೆಪಿ ಅಧ್ಯಕ್ಷ
ಉಮಾಶಂಕರ್, ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಜನಪ್ರತಿನಿಧಿಗಳು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಶ್ವ ಹಿಂದು ಮಾಂಗಲ್ಯ ಮಂಚ್ ನ ರಾಷ್ಟ್ರೀಯ ಅಧ್ಯಕ್ಷ ಷಾಜಿ ಮಾನಂತೇರಿ, ಉಪಾಧ್ಯಕ್ಷರಾದ ಜನಚಂದ್ರನ್ ಮಾಸ್ಟರ್, ರಾಷ್ಟ್ರೀಯ ಕಾರ್ಯಕಾರಣಿಯ 15 ಮಂದಿಯ ತಂಡ, ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಘೋಷಿತರಾದ ವಿನೋದ್ ಥರಮಲ್, ಕಾರ್ಯದರ್ಶಿ ಕೆ.ವರದ
ಖಜಾಂಚಿ ರಂಜಿತ್ ಇದ್ದರು.
ನೋಂದಣಿ ಪ್ರಕ್ರಿಯೆ :
ವಧು ನೋಂದಣಿ ಉಚಿತ
ವರನ ನೋಂದಣಿ ₹ 300/ ನಿಗದಿಪಡಿಸಲಾಗಿದೆ.
Back to top button
error: Content is protected !!