ಕುಶಾಲನಗರ, ಫೆ 04: ಆದಿಚುಂಚನಗಿರಿ ವಿಶ್ವ ವಿದ್ಯಾಲಯ,ಆದಿಚುಂಚನಗಿರಿ ಆಸ್ಪತ್ರೆ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಂಗಳವಾರ ಕುಶಾಲನಗರ ಎಪಿಎಸಿಎಂಸ್ ಸುವರ್ಣ ಮಹೋತ್ಸವ ಸಭಾಂಗಣದ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ನೂರಾರು ರೋಗಿಗಳು ಪ್ರಯೋಜನವನ್ನು ಪಡೆದುಕೊಂಡರು.
ನಾಗಮಂಗಲ ಚುಂಚನಗಿರಿ ಆಸ್ಪತ್ರೆಯ ಹಿರಿಯ ವೈದ್ಯರಾದ ಸಾಮಾನ್ಯ ರೋಗ ತಜ್ಞ ಡಾ.ಪಿ.ಶ್ರೀನಿವಾಸ್ ಹಾಗೂ ದಂತ ತಜ್ಞೆ
ಡಾ.ಲಕ್ಷ್ಮಿ ನೇತೃತ್ವದಲ್ಲಿ 50 ಮಂದಿ ವೈದ್ಯರು ಹಾಗೂ 25 ಮಂದಿ ಸಿಬ್ಬಂದಿಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆ ವರೆಗೆ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆ ಕಾರ್ಯವನ್ನು ನಿರ್ವಹಿಸಿದರು.
ಆಸ್ಪತ್ರೆಯ ಹೃದ್ರೋಗ, ನರರೋಗ, ಮಧುಮೇಹ, ಸ್ತ್ರೀರೋಗ,ಕಿವಿ,ಮೂಗು,ಗಂಟಲು ಸೇರಿದಂತೆ ವಿವಿಧ ವಿಭಾಗಗಳ ವೈದರು ಶಿಬಿರಕ್ಕೆ ಅಗಮಿಸಿದ್ದ ರೋಗಿಗಳ ತಪಾಸಣೆ ಮಾಡಿ ಔಷಧೋಪಚಾರ ಮಾಡಿದರು. ರೋಗಿಗಳಿಗೆ ರಕ್ತ ಪರೀಕ್ಷೆ, ರಕ್ತದ ಒತ್ತಡ,ಸಕ್ಕರೆ ಕಾಯಿಲೆ,ಇಸಿಜಿ ತಪಾಸಣೆ ಕೂಡ ಮಾಡಲಾಯಿತು. ಸಂಘದ ಸದಸ್ಯರು ಸೇರಿದಂತೆ ನೂರಕ್ಕೆ ಹೆಚ್ಚು ಜನರು ರಕ್ತ ದಾನ ಮಾಡಿದರು.ಶಿಬಿರಕ್ಕೆ ಆಗಮಿಸಿದ ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು.
ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯ.ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚುಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗ್ಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ತಿಳಿಸಿದರು.
ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಇದೇ ಪ್ರಥಮ ಬಾರಿಗೆ ಉಚಿತ ಆರೋಗ್ಯ ಶಿಬಿರ ಆಯೋಜಿಸಿರುವುದು ಹೆಮ್ಮೆಯ ವಿಚಾರ.ಈ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಸಾಮಾನ್ಯರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ.ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಮಹಿಳೆಯರಲ್ಲಿ ಆರೋಗ್ಯದ ಕಾಳಜಿ ಅತೀ ಅಗತ್ಯ. ಆರೋಗ್ಯವಂತ ಮಹಿಳೆ ಯಿಂದ ಇಡೀ ಕುಟುಂಬ ಕ್ಷೇಮವಾಗಿರುತ್ತದೆ. ಮಹಿಳೆಯರು ಹೆಚ್ಚಾಗಿ ಇಂತಹ ಶಿಬಿರಗಳಲ್ಲಿ ಭಾಗವಹಿಸಿ, ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭ ಆದಿಚುಂಚನಗಿರಿ ಸಂಪರ್ಕ ಅಧಿಕಾರಿ ವಿನಯ್‌ಕುಮಾರ್,ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು,ತಾಲ್ಲೂಕು ಒಕ್ಕಲಿಗರ ಸಂಘದ
ಉಪಾಧ್ಯಕ್ಷ ಎಸ್.ಎಸ್.ಚಂದ್ರಶೇಖರ್,ಕಾರ್ಯದರ್ಶಿ ಎಂ.ಎಂ.ಪ್ರಕಾಶ್,ಗೌರವ ಕಾರ್ಯದರ್ಶಿ ಎಚ್.ಎಂ.ಭಾನುಪ್ರಕಾಶ್,ಸಹ ಕಾರ್ಯದರ್ಶಿಗಳಾದ ಎಂ.ಎನ್.ಮೂರ್ತಿ,ರಮೇಶ್,ಖಜಾಂಜಿ ಡಿ.ಸಿ.ಅರುಣ್ ಕುಮಾರ್,ಸಂಘಟನಾ ಕಾರ್ಯದರ್ಶಿಗಳಾದ ಬಿ.ಎ.ನಾಗೇಗೌಡ,ವಿ.ಎಲ್.ಧನಂಜಯ್ಯ,ನಿರ್ದೇಶಕರಾದ ಜಿ.ಟಿ.ಜಗದೀಶ್,ಎಂ.ಕೆ.ಹನುಮರಾಜ್,ವಿ.ಜಿ.ನವೀನ್ ಕುಮಾರ್, ರಶ್ಮಿ,ಕೆ.ಕೆ.ಗಾಯಿತ್ರಿ,ಬಿ.ಸರೋಜ,ಕೆ.ಎಸ್.ಗೌರಮ್ಮ, ಎಂ.ಡಿ.ಕೃಷ್ಣಪ್ಪ,ಗಿರ್, ಮಧುಕುಮಾರ್,ಗೌತಮ್,ಶಿವಕುಮಾರ್, ರಮೇಶ್,ಭರತ್ ಕುಮಾರ್,ಎಂ.ಜೆ.ವೆಂಕಟೇಶ್ ಪಾಲ್ಗೊಂಡಿದ್ದರು.
Back to top button
error: Content is protected !!