ಕುಶಾಲನಗರ, ಡಿ 10: ಕುಶಾಲನಗರದ ಆದಿಶಂಕರಾಚಾರ್ಯ ಬಡಾಬಣೆ ನಿವಾಸಿ ರಣಜಿತ್ ಸಿಂಗ್ ಅವರ ದ್ವಿತೀಯ ಪುತ್ರಿ ಭಾವನ ಡಿ.8 ರಿಂದ ನಾಪತ್ತೆಯಾಗಿರುವುದಾಗಿ ಕುಶಾಲನಗರ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಎಸ್ಸೆಸ್ಸೆಲ್ಸಿ ಮುಗಿಸಿ ಮನೆಯಲ್ಲಿದ್ದ ಭಾವನ (19) ಬಿಡುವಿನ ವೇಳೆಯಲ್ಲಿ ರಥಬೀದಿಯ ತಮ್ಮ ಫ್ಯಾನ್ಸಿ ಸ್ಟೋರ್ ನಲ್ಲಿ ನೆರವಾಗುತ್ತಿದ್ದಳು. ಡಿ. 8 ರಂದು ಮೊಬೈಲ್ ವಿಚಾರವಾಗಿ ಭಾವನ ಹಾಗೂ ಆಕೆಯ ಸಹೋದರ ಮಹಿಪಾಲ್ ನಡುವೆ ಜಗಳವಾಗಿದೆ. ಈ ಸಂದರ್ಭ ಭಾವನ ಅಂಗಡಿಯಿಂದ ಹೊರತೆರಳಿದ್ದು ಇದುವರೆಗೆ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
Back to top button
error: Content is protected !!