ಪ್ರಕಟಣೆ

ಜನವರಿ 19 ರಂದು ಬೃಹತ್ ಉದ್ಯೋಗ ಮೇಳ

ಕುಶಾಲನಗರ, ಡಿ 09: ಅನ್ನ, ಅಕ್ಷರ, ಅವಕಾಶ ಕಲ್ಪಿಸುವ ಸಂಕಲ್ಪದೊಂದಿಗೆ ಒಕ್ಕಲಿಗ ಯುವ ಬ್ರಿಗೇಡ್ ನೇತೃತ್ವದಲ್ಲಿ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯುತ್ಸವ ಅಂಗವಾಗಿ ಉದ್ಯೋಗ ಮೇಳವನ್ನು, ಪಿರಿಯಾಪಟ್ಟಣ್ಣದಲಿರುವ ಆದಿ ಚುಂಚನಗಿರಿ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ವಿವಿಧ ವಿದ್ಯಾಹರ್ತೆಗೆ ಅವಕಾಶ: ಉದ್ಯೋಗಾಂಕ್ಷಿಗಳಿಗೆ ಈ ಮೇಳವು ಸಂಪೂರ್ಣ ಉಚಿತವಾಗಿದ್ದು, ಪ್ರತಿ ಅಭ್ಯರ್ಥಿಯು 5 ಕಂಪನಿಗಳಿಗೆ ಸಂದರ್ಶನ ನೀಡಬಹುದಾಗಿದೆ.
ಎಸ್ ಎಸ್ ಎಲ್ ಸಿ, ಪಿಯುಸಿ, ವಿವಿಧ ಕೋರ್ಸ್ ಗಳ ಪದವಿ (ಪಾಸ್, ಫೇಲ್), ITI , ಡಿಪ್ಲೋಮ, ಇಂಜಿನಿಯರಿಂಗ್, ಸ್ನಾತಕೋತರ ಪದವಿದಾರರು ಈ ಮೇಳದಲ್ಲಿ ಭಾಗವಹಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ .

50 ಕಂಪನಿಗಳು ಮತ್ತು 2000 ಉದ್ಯೋಗ ಅವಕಾಶಗಳು: ಈ ಮೇಳದಲ್ಲಿ ಸುಮಾರು ೫೦ ಕಂಪನಿಗಳು ಭಾಗವಹಿಸಲಿದ್ದು, 2000 ಕಿಂತ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿದೆ.

ವಿಶೇಷ ಚೇತನ ಹಾಗೂ ಅಂಗವಿಕಲರಿಗೂ ಉದ್ಯೋಗ ಅವಕಾಶ: ಈ ಮೇಳದಲ್ಲಿ ವಿಶೇಷವಾಗಿ ವಿಶೇಷ ಚೇತನ ಹಾಗೂ ಅಂಗವಿಕಲರಿಗೂ ಉದ್ಯೋಗ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.
ಬಕಾರ್ಡಿ ಇಂಡಿಯಾ ಲಿಮಿಟೆಡ್ , ಸಂಧರ್ ಇಂಡಿಯಾ ಲಿಮಿಟೆಡ್,ಅಯುಷ್ಮಾನ್ ಹೆಲ್ತ್ ಕೇರ್, ಆಟೋಮೋಟಿವ್ ಆಸ್ಲ್ಸ್ , ಏಶಿಯನ್ ಪೇಂಟ್ಸ್, ಪ್ರಬೋಧಿತ ಸರ್ವಿಸಸ್, ಮಹಾಲಕ್ಷ್ಮಿ ಸ್ವೀಟ್ಸ್, ಭೀಮ ಪ್ರಾಪರ್ಟೀಸ್, ಕೇರ್ ಹೆಲ್ತ್ ಇನ್ಶೂರೆನ್ಸ್, ರುಚಾ ಇಂಜಿನಿಯರಿಂಗ್, ಆಟೋಲೈವ್ ಇಂಡಿಯಾ , ಕ್ರಿಯೇಟಿವ್ ಎಂಜಿನೀರ್ಸ್, ಕಲ್ಯಾಣಿ ಮೋಟರ್ಸ್, ಕ್ರಿಯಾ ನೆಕ್ಸ್ಟ್ ವೆಲ್ತ್, ವಿಧಾರ್ಥಿ ಮೋಟರ್ಸ್, ಮಾಂಡೋವಿ ಮೋಟರ್ಸ್ , ಸೇವ್ ಸಂಗ್ರಹ ಕಾಪೋರೇಷನ್, ತೆಮೆರೆ ಇಂಡಿಯಾ ಲಿಮಿಟೆಡ್, ಅಪೊಲೊ ಫಾರ್ಮ , ಮುಥೂತ್ ಫೈನಾನ್ಸ್, ವಾಯ್ಸ್ ಆ ನೀಡಿ ಫೌಂಡೇಶನ್, ಸೂರ್ಯೋದಯ ಬ್ಯಾಂಕ್, ಆದರ್ಶ್ ಕೀಯ ಮೋಟರ್ಸ್, ದ್ವಾರ ಫೈನಾನ್ಸಿಯಲ್ ಸರ್ವಿಸಸ್, Dusters ಇಂಡಿಯಾ ಲಿಮಿಟೆಡ್ , VFS ಗ್ಲೋಬಲ್, ಇಂಡಸ್ ಬ್ಯಾಂಕ್, ಸುರಕ್ಷಾ ಕೇರ್ ಕೇರ್ ಹಾಗೂ ಇನ್ನಿತರ ಕಂಪನಿಗಳು ಭಾಗವಹಿಸಲಿದ್ದಾವೆ .

ಹೆಚ್ಚಿನ ಮಾಹಿತಿಗಾಗಿ ಮೋಹನ್: 9686564192 ಮತ್ತು ಶಿವ ಕುಮಾರ್: 6363144181 ಸಂಪರ್ಕಿಸಲು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!