ಕುಶಾಲನಗರ, ನ 29: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ಬಡವಾಣಿ ಸಮೀಪ ಶ್ರೀದೇವಿ ಆನ್ಲೈನ್ ಸರ್ವಿಸಸ್ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವನ್ನು ಶುಕ್ರವಾರ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅವರು ಉದ್ಘಾಟಿಸಿದರು.
ಕೂಡುಮಂಗಳೂರು ಗ್ರಾಮದಲ್ಲಿ ಶ್ರೀದೇವಿ ಆನ್ಲೈನ್ ಸರ್ವಿಸಸ್ ಗ್ರಾಮ ಒನ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್, ಗ್ರಾಮ ಒನ್ ಯೋಜನೆಯ ಸರಕಾರದ ಅತ್ಯಂತ ಮಹಾತ್ವಕಾಂಕ್ಷಿ ನಾಗರಿಕ ಸ್ನೇಹಮಹಿ ಯೋಜನೆಯಾಗಿದ್ದು ಒಂದೇ ಸೂರಿನಡಿ ಎಲ್ಲಾ ಇಲಾಖೆಗಳ ಸೇವೆಗಳನ್ನು ಗ್ರಾಮೀಣ ಜನರಿಗೆ ಅವರ ಸ್ವಂತ ಗ್ರಾಮದಲ್ಲಿ ತಲುಪಿಸುವ ಗುರಿ ಹೊಂದಿದೆ ಆ ದಿಸೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಒನ್ ಕೇಂದ್ರವನ್ನು ತೆರೆಯಲಾಗಿದೆ ಗ್ರಾಮ ಒನ್ ಕೇಂದ್ರದಲ್ಲಿ ಜೆರಾಕ್ಸ್ ಲ್ಯಾಮಿನೇಷನ್ ಕಲರ್ ಪ್ರಿಂಟ್. ಇಂಗ್ಲಿಷ್ ಹಾಗೂ ಕನ್ನಡ ಟೈಪಿಂಗ್. ಪಾನ್ ನ್ಯೂ. ಕರೆಕ್ಷನ್ ವೋಟರ್ ಐಡಿ. ರೇಷನ್ ಕಾರ್ಡ್. ಜಾತಿ ಆದಾಯ ದೃಢೀಕರಣ ಪತ್ರ. ವಾಸ ಸ್ಥಳ.ದೃಢೀಕರಣ ಪತ್ರ.ವಂಶವೃಕ್ಷ. ಜಾಬ್ ಅಪ್ಲಿಕೇಶನ್. ಹೆಲ್ತ್ ಕಾರ್ಡ್. ಇನ್ನು ಹಲವಾರು ಸರಕಾರದ ಸೌಲಭ್ಯಗಳು ಗ್ರಾಮ ಒನ್ ಕೇಂದ್ರದಲ್ಲಿ ದೊರೆಯಲಿದೆ ಇದರ ಸೌಲಭ್ಯವನ್ನು ಪ್ರತಿ ಎಲ್ಲಾ ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ತಿಳಿಸಿದರು.
ಶ್ರೀದೇವಿ ಆನ್ ಲೈನ್ ಸರ್ವಿಸಸ್ ಗ್ರಾಮ ಒನ್ ಮಾಲೀಕರಾದ ರಂಜಿತ್. ಸೋನಿಯಾ, ಗ್ರಾಪಂ ಸದಸ್ಯರಾದ ಮಂಜುನಾಥ್, ಮಾಜಿ ಸದಸ್ಯ ಸುರೇಶ್, ಎಂ ಡಿ ರಮೇಶ್, ಉದ್ಯಮಿಗಳಾದ ಕಿಶೋರ್, ಬಿಜು, ಎಂ ಡಿ ಸುರೇಶ್, ರಮ್ಯಾ, ಚಂದನ, ಚರಣ್, ಪಲ್ಲವಿ ಹಾಗೂ ಕೂಡುಮಂಗಳೂರು ವ್ಯಾಪ್ತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.
Back to top button
error: Content is protected !!