ಕುಶಾಲನಗರ, ನ 21: ಚಿಕ್ಲಿಹೊಳೆ ಜಲಾಶಯದ ಬಳಿ ಇರುವ ಕಟ್ಟೆಹಾಡಿಯಲ್ಲಿ ಹಾಡಿಯ ನಿವಾಸಿಗಳು ಗ್ರಾಮ ಸಭೆ ನಡೆಸಿ ಗ್ರಾಮ ಅರಣ್ಯ ಸಮಿತಿಯನ್ನು ರಚಿಸಿದ್ದಾರೆ.
ಕಟ್ಟೆಹಾಡಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾಗಿ ಜೆ.ಎ.ಅಪ್ಪು, ಉಪಾಧ್ಯಕ್ಷರಾಗಿ ಜೆ.ಆರ್.ಗೌರಿ, ಕಾರ್ಯದರ್ಶಿಯಾಗಿ ಜೆ.ಎಸ್.ಚಂದ್ರಿಕಾ, ಸಮಿತಿಯ ಸದಸ್ಯರಾಗಿ ಅಪ್ಪಣ್ಣ, ಪಾಪು, ಸುನಿಲ್, ರವಿ, ಜೆ.ಕೆ.ಶಿವು, ಜೆ.ಪಿ.ಅಣ್ಣಯ್ಯ, ಜೆ.ಎಂ.ರಮೇಶ್, ಜೆ.ಆರ್.ಸುರೇಶ, ಜೆ.ಎಸ್.ಅಶೋಕ್, ಜೆ.ಎ.ಪುಟ್ಟರಾಜು, ಜೆ.ಎ.ರೂಪ ಹಾಗೂ ಜೆ.ಬಿ.ರಾಜು ಆಯ್ಕೆಯಾಗಿದ್ದಾರೆ.
ಈ ಸಂಬಂಧಿತ ಕಟ್ಟೆಹಾಡಿ ಗ್ರಾಮ ಅರಣ್ಯ ಸಮಿತಿಯ ನಾಮಫಲಕವನ್ನು ಗಿರಜನ ಮುಖಂಡರಾದ ಆರ್.ಕೆ.ಚಂದ್ರು ಹಾಗೂ ಜೆ.ಎಸ್. ಕಾಳಿಂಗ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಇವರು ಅನುಸೂಚಿತ ಬುಡಕಟ್ಟು ಹಾಗೂ ಇತರೇ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮದಡಿ ಅರಣ್ಯ ಸಮಿತಿಯನ್ನು ಮೊದಲ ಬಾರಿಗೆ ಕಟ್ಟೆಹಾಡಿಯಲ್ಲಿ ಆರಂಭಿಸಲಾಗಿದೆ. ಪರಿಸರ ಸಂರಕ್ಷಣೆಯ ಸೋಗಿನಲ್ಲಿ, ಹುಲಿ ಸಂರಕ್ಷಿತ ಯೋಜನೆಗಳ ನೆಪದಲ್ಲಿ ತಲಾ ತಲಾಂತರಗಳಿಂದ ಕಾಡಿನಲ್ಲಿ ವಾಸ ಮಾಡಿಕೊಂಡು ಬರುತ್ತಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಬಾರದು. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಗಿರಿಜನ ಹಾಡಿಗಳ ನಿವಾಸಿಗಳಿಗೆ ಒದಗಿಸುವ ಸಂಬಂಧ ಎಲ್ಲಾ ಹಾಡಿಗಳಲ್ಲೂ ಅರಣ್ಯ ಸಮಿತಿಗಳನ್ನು ರಚಿಸಿ ಜನರೊಂದಿಗೆ ಹೋರಾಟ ರೂಪಿಸುವ ಎಚ್ಚರಿಕೆಯನ್ನು ಅವರು ನೀಡಿದರು.
ಈ ಸಂದರ್ಭ ಅರಣ್ಯ ಸಮಿತಿ ಅಧ್ಯಕ್ಷ ಜೆ.ಎ.ಅಪ್ಪು ಸೇರಿದಂತೆ ಸಮಿತಿಯ ಪದಾಧಿಕಾರಿಗಳಿದ್ದರು.
Back to top button
error: Content is protected !!