ಕುಶಾಲನಗರ, ನ 15: ಕೂಡಿಗೆ ಸಮೀಪದ ಹೆಗ್ಗಡಹಳ್ಳಿ ಶನೈಶ್ವರ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಹೆಗ್ಗಡಹಳ್ಳಿ ಶನೈಶ್ವರ ದೇವಾಲಯ ಆವರಣದಲ್ಲಿ ಸ್ವರ್ಗಸ್ತ ಎಲ್ಲುಬಾಯಿ ಅಮ್ಮನವರ ಆಶೀರ್ವಾದದಿಂದ ಶುಕ್ರವಾರ ಬೆಳಿಗ್ಗೆಯಿಂದಲೇ ಧರ್ಮಸ್ಥಳದ ಉಜಿರೆಯ ರಾಮಚಂದ್ರ ಶರ್ಮ ತಂತ್ರಿಗಳ ನೇತೃತ್ವದಲ್ಲಿ ಗಣಯಾನ ಶ್ರೀ ಅಣ್ಣಪ್ಪ ಫರ್ಜುರ್ಲಿ ಪರಿವಾರ ದೈವಗಳ ನವಕ ಪ್ರಧಾನ ಹೋಮ ಶುದ್ದಿ ಕಲಶ ಹೋಮಗಳು ಹಾಗೂ ಇನ್ನೂ ಹಲವಾರು ವಿವಿಧ ಹೋಮ ಹವನಗಳು ನೆರವೇರಿತು.
ಸಂಜೆ 4:00 ಗಂಟೆಗೆ ದೈವಗಳ ಭಂಡಾರ ತೆಗೆಯಲಾಯಿತು. ಕೂಡಿಗೆ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶನೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸ್ವರ್ಗಸ್ತ ಎಲ್ಲೂಬಾಯಿ ಅಮ್ಮನವರ ಕುಟುಂಬಸ್ಥರು ಮತ್ತು ಭಕ್ತವೃಂದ ಹಾಗೂ ದೇವಾಲಯ ಸಮಿತಿಯಿಂದ ವಿವಿಧ ಹೋಮ ಹವನಗಳು ನಡೆಸಲಾಯಿತು.
ಮಧ್ಯಾಹ್ನ ಮಹಾಮಂಗಳಾರತಿ ದೇವಾಲಯಕ್ಕೆ ಬಂದಂತ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣ ಕಾರ್ಯಕ್ರಮ ನೆರವೇರಿತು.
ಈ ದೇವಾಲಯಕ್ಕೆ ಮಂಗಳೂರು ಪುತ್ತೂರು ಸುಳ್ಯ ಉಜಿರೆ ಬೆಳ್ತಂಗಡಿ ಬೆಂಗಳೂರು ಮೈಸೂರು ಧರ್ಮಸ್ಥಳ ವ್ಯಾಪ್ತಿಯ ನೂರಾರು ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು.
Back to top button
error: Content is protected !!