ವಿರಾಜಪೇಟೆ, ಅ 17: ವಿರಾಜಪೇಟೆಯ ಮಗ್ಗುಲದಲ್ಲಿರುವ ಪ್ರತಿಷ್ಟಿತ ದಂತ ಮಹಾವಿದ್ಯಾಲಯವಾದ ಕೊಡಗು ದಂತ ಮಹಾ ವಿದ್ಯಾಲಯಕ್ಕೆ ಹ್ಯಾನೋವರ್‍ನ ಇಂಟರ್‍ನ್ಯಾಷನಲ್ ಆರ್ಥೊಡಾಂಟಿಕ್ ಸೊಸೈಟಿಯ ಉಪಾಧ್ಯಕ್ಷ ಪ್ರೊ. ಜಾನ್. ವಿ ರೈಮನ್ ಮತ್ತು ಆರ್ಥೊಡಾಂಟಿಸ್ಟ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜನ್ ಹಾಗೂ ಅಡ್ವಾನ್ಸ್‍ಡ್ ರಿಪೊಸಿಷನಿಂಗ್ ಅಪ್ಲೈಯನ್ಸ್‍ನ ಸಂಶೋದಕ ಪ್ರೊ.ಅಲಾದಿನ್ ಸಬಾಗ್ ಅವರು ಇತ್ತೀಚೆಗೆ ಭೇಟಿ ನೀಡಿದರು.
ಕೊಡಗು ದಂತ ಮಹಾ ವಿದ್ಯಾಲಯ(ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್) ನ 25 ನೇ ವರ್ಷದ ಸಂಭ್ರಮಾಚರಣೆಯ ನೆನಪಿಗಾಗಿ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‍ನ ರಜತ ಮಹೋತ್ಸವ ಉಪನ್ಯಾಸ ಸರಣಿಯ ಭಾಗವಾಗಿ ಕೊಡಗು ದಂತ ಮಹಾವಿದ್ಯಾಲಯ ಮತ್ತು ಇಂಟರ್ ನ್ಯಾಷನಲ್ ಆರ್ಥೋಡಾಂಟಿಕ್ ಸೊಸೈಟಿಯ ವೈಜ್ಞಾನಿಕ ಮತ್ತು ಭೋಧನ ವಿನಿಮಯ ಒಪ್ಪಂದದ ಅಡಿಯಲ್ಲಿ ಈ ಭೇಟಿ ಹಾಗೂ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಯುರೋಪಿಯನ್ ಅಸೋಸಿಯೇಶನ್ ಆಫ್ ಆರ್ಥೊಡಾಂಟಿಸ್ಟ್ಗೆ ಭಾರತವನ್ನು ಪ್ರತಿನಿಧಿಸುವ ರಾಯಭಾರಿಗಳಾಗಿ ನೇಮಕಗೊಂಡ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‍ನ ಡೀನ್ ಡಾ. ಸುನಿಲ್ ಮುದ್ದಯ್ಯ ಮತ್ತು ಡಾ. ಅನ್ಮೋಲ್ ಕಲ್ಹಾ ಅವರಿಗೆ ಮಹತ್ವದ ಮನ್ನಣೆ ನೀಡಲಾಯಿತು.
ಇಬ್ಬರು ಅಂತಾರಾಷ್ಟ್ರೀಯ ಆರ್ಥೊಡಾಂಟಿಸ್ಟ್ಗಳ ಭೇಟಿಯು ದಂತವೈದ್ಯಶಾಸ್ತ್ರ ಕ್ಷೇತ್ರದಲ್ಲಿ ಜಾಗತಿಕ ಸಹಯೋಗದ ಮಹತ್ವವನ್ನು ಒತ್ತಿಹೇಳಿತ್ತಲ್ಲದೆ ವಿಚಾರಗಳ ವಿನಿಮಯವು ಭಾರತದಲ್ಲಿನ ಆರ್ಥೊಡಾಂಟಿಕ್ ಸಮುದಾಯದಲ್ಲಿ ನಾವೀನ್ಯತೆ ಮತ್ತು ಪ್ರಗತಿಯನ್ನು ಉತ್ತೇಜಿಸಲು ಸಹಾಯ ಮಾಡಿತು.
ಇದೇ ಸಂದರ್ಭ, ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಕಲಿಕೆಯ ಪ್ರಮಾಣವನ್ನು ಬೆಂಬಲಿಸಲು ಮಹತ್ವದ ಉಪಕ್ರಮವನ್ನು ತೆಗೆದುಕೊಳ್ಳಲಾಯಿತು. ಗಣ್ಯ ಅತಿಥಿಗಳು ಹೊಸ ಬ್ಯಾಚ್ ವಿದ್ಯಾರ್ಥಿಗಳಿಗೆ ವಿವರವಾದ ಪಾಠ ಯೋಜನೆಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಕೊಡಗು ದಂತ ಮಹಾ ವಿದ್ಯಾಲಯ ಮತ್ತು ಇಂಟರ್ ನ್ಯಾಷನಲ್ ಆರ್ಥೊಡಾಂಟಿಕ್ ಸೊಸೈಟಿಯ ಸಹಯೋಗದಲ್ಲಿ ಆಯೋಜಿಸಿರುವ ಹಲವು ಯೋಜನೆಗಳಿಗೆ ಚಾಲನೆ ನೀಡಲಾಯಿತ್ತು.
Back to top button
error: Content is protected !!