ಸಭೆ

ವಾಲ್ನೂರು ತ್ಯಾಗತ್ತೂರು ದವಸ ಭಂಡಾರ : ವಾರ್ಷಿಕ ಮಹಾಸಭೆ

ಕುಶಾಲನಗರ, ಅ 15; ಕುಶಾಲನಗರ ತಾಲ್ಲೂಕಿನ ವಾಲ್ನೂರು ಗ್ರಾಮದ ಲ್ಲಿರುವ 491 ನೇ ವಾಲ್ನೂರು ತ್ಯಾಗತ್ತೂರು ವಿವಿಧೋದ್ದೇಶ ದವಸ ಭಂಡಾರದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಎ.ವಿ.ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
210 ಸದಸ್ಯರು ಇರುವ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ 41 ಲಕ್ಷ ರೂಗಳನ್ನು ಸಂಘದ ಸದಸ್ಯರಿಗೆ ಸಾಲ ನೀಡಿದ ಬಡ್ಡಿಯ ಮೊಬಲಗು ಸೇರಿದಂತೆ ವಿವಿಧ ವಹಿವಾಟುಗಳ ಮೂಲಕ 2.84 ಲಕ್ಷ ಲಾಭ ಗಳಿಸಿದೆ.
ಲಾಭಾಂಶದಲ್ಲಿ ಸದಸ್ಯರಿಗೆ ಶೇ.20 ರಷ್ಟು ಡಿವಿಡೆಂಡ್ ನೀಡಲಾಗಿದೆ ಎಂದು ಶಾಂತಕುಮಾರ್ ಸಭೆಯಲ್ಲಿ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ 92 ದವಸ ಭಂಡಾರಗಳಿದ್ದು ವಾಲ್ನೂರು ತ್ಯಾಗತ್ತೂರು ದವಸ ಭಂಡಾರದ ಸಾಲ ವಸೂಲಾತಿ ಶೇ.100 ರಷ್ಟಿರುವ ಕಾರಣ ಸಂಘಕ್ಕೆ ‘ ಎ ‘ ದರ್ಜೆಯ ಮಾನ್ಯತೆ ದೊರಕಿದೆ.
ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ದವಸ ಭಂಡಾರದ ಸದಸ್ಯರಿಗೆ ಮರಣ ನಿಧಿ ಹಾಗೂ ಮರಣ ಸಹಾಯ ನಿಧಿಯನ್ನು ಜಾರಿಮಾಡಲಾಗಿದೆ.
ಸದಸ್ಯರು ಮೃತಪಟ್ಟ ಸಂದರ್ಭ ಮರಣ ನಿಧಿ ಅಲ್ಲದೇ ಅಂತ್ಯಕ್ರಿಯೆಗೆ ಸಹಕಾರವಾಗುವಂತೆ 2 ಸಾವಿರ ರೂಗಳ ಮರಣ ಸಹಾಯಕ್ಕೆಂದು ನೀಡಲಾಗುತ್ತಿದೆ ಎಂದು ಶಾಂತಕುಮಾರ್ ತಿಳಿಸಿದರು.
ಸಂಘದ ಉಪಾಧ್ಯಕ್ಷ ಜಿ.ಎನ್.ರಾಮಪ್ಪ, ನಿರ್ದೇಶಕರಾದ ಮನು ಮಹೇಶ್, ಎ.ಡಿ.ದರ್ಶನ್, ಎಸ್.ಸಿ. ಸುರೇಶ್, ಹೆಚ್.ಎನ್.ಕೃಷ್ಣಪ್ಪ, ಪಿ.ಪಿ.ಕಿರಣ್, ಎ.ವಿ.ಅಯ್ಯಪ್ಪ, ಹೆಚ್.ನ್.ಕೃಷ್ಣಪ್ಪ, ಹೆಚ್.ಎನ್.ಕಮಲಮ್ಮ, ರುದ್ರಮ್ಮ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿತ್ರಾ ಇದ್ದರು.
ಸದಸ್ಯೆ ಸರಸ್ವತಿ ಪ್ರಾರ್ಥಿಸಿದರು.
ನಿರ್ದೇಶಕ ದರ್ಶನ್ ಸ್ವಾಗತಿಸಿದರು.
ಪಿ.ಪಿ.ಕಿರಣ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!