ಪ್ರಕಟಣೆ

ಕಾಳಮ್ಮ ಕಾಲೋನಿ ಹಾಗೂ ವಿವೇಕಾನಂದ ಬಡಾವಣೆಯ ನಿವಾಸಿಗಳ ಮನವಿ.

ಕಾಳಮ್ಮ‌ ಕಾಲನಿಗೆ ಅಂಬೇಡ್ಕರ್, ಜಗಜೀವನರಾನ್ ನಾಮಕರಣಕ್ಕೆ ಆಗ್ರಹ

ಕುಶಾಲನಗರ, ಜು 19:
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಮಾಜಿ ಉಪರಾಷ್ಟ್ರಪತಿ ದಿ. ಡಾ. ಬಾಬು ಜಗಜೀವನ್ ರಾಮ್ ಜಂಟಿ ಹೆಸರಿನಲ್ಲಿ ವೃತ್ತಕ್ಕೆ ಹೆಸರಿಡುವಂತೆ ಆಗ್ರಹಿಸಿ ಕುಶಾಲನಗರ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಿಗೆ ಕಾಳಮ್ಮ ಕಾಲೋನಿ ಹಾಗೂ ವಿವೇಕಾನಂದ ಬಡಾವಣೆಯ ನಿವಾಸಿಗಳು ಮನವಿ ಪತ್ರ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಪ್ರಮುಖರಾದ ಹೆಚ್. ವಿ. ಧರ್ಮ, ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಮುಖ್ಯ ದ್ವಾರದ ಬಳಿ ಇರುವ ಹಾಗೂ ಬಿಎಂ ರಸ್ತೆ ಹಾಗೂ ಹಾಸನ ರಸ್ತೆಗೆ ಹೊಂದಿಕೊಂಡಂತೆ ಇರುವ ಕಾಳಮ್ಮ ಕಾಲೋನಿಯ ಪಕ್ಕದ ಸರ್ಕಲ್ ಗೆ ಬೇರೆ ಹೆಸರಿಡುವಂತೆ ಇಲ್ಲಿನ ಪಟ್ಟಣ ಪಂಚಾಯಿತಿಯ ಕೆಲಸ ಸದಸ್ಯರು ಹುನ್ನಾರ ನಡೆಸಿರುವುದು ಸರಿಯಲ್ಲ. ದಲಿತರೇ ಅತಿ ಹೆಚ್ಚು ಸಂಖ್ಯೆಯಲ್ಲಿ ವಾಸವಿರುವ ಕಾಳಮ್ಮ ಕಾಲೋನಿ ಹಾಗೂ ವಿವೇಕಾನಂದ ಬಡಾವಣೆಗೆ ಹೊಂದಿಕೊಂಡಂತಿರುವ ಈ ಸರ್ಕಲ್ ಗೆ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ರವರ ಜಂಟಿ ಹೆಸರಿಡಬೇಕು ಬೇರೆ ಯಾವುದೇ ಹೆಸರಿಟ್ಟರೂ ನಾವು ಅದಕ್ಕೆ ಒಪ್ಪುವುದಿಲ್ಲ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿಯ ಮುಂಭಾಗ ಉಗ್ರ ಸ್ವರೂಪದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಇದೇ ಸಂದರ್ಭ ತಿಳಿಸಿದರು.
ನಂತರ ಮಾತನಾಡಿದ ಇನ್ನೋರ್ವ ಪ್ರಮುಖ ರಕ್ಷಿತ್, ಕರ್ನಾಟಕದ ಕಾಶ್ಮೀರ ಕೊಡಗಿನ ಹೆಬ್ಬಾಗಿಲಾದ ಕುಶಾಲನಗರದ ಮುಖ್ಯದ್ವಾರದಲ್ಲಿರುವ ಹಾಗೂ ಪ್ರಾಥಮಿಕವಾಗಿ ಪ್ರತಿಯೊಬ್ಬರೂ ನಗರಕ್ಕೆ ಪ್ರವೇಶಿಸುವಾಗ ಸಿಗುವ ಸರ್ಕಲ್ ಇದಾಗಿದ್ದು ಇದಕ್ಕೆ ರಾಷ್ಟ್ರ ನಾಯಕರಾದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್. ಹಾಗೂ ಡಾ ಬಾಬು ಜಗಜೀವನ್ ರಾಮ್ ರವರ ಜಂಟಿ ಹೆಸರಿನಲ್ಲಿ ಸರ್ಕಲ್ ನಿರ್ಮಾಣವಾಗಬೇಕು. ಆ ನಿಟ್ಟಿನಲ್ಲಿ ಇಂದು ಕುಶಾಲನಗರ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಗಿದ್ದು ಪಟ್ಟಣ ಪಂಚಾಯಿತಿಯ ಸರ್ವ ಸದಸ್ಯರು ಇದಕ್ಕೆ ಸಮ್ಮತಿ ನೀಡಬೇಕು. ಮತ್ತು ಆದಷ್ಟು ಶೀಘ್ರವೇ ವೃತ್ತ ನಿರ್ಮಾಣದ ಕಾಮಗಾರಿಯನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಎರಡು ಗ್ರಾಮಗಳ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ. ಎಂದು ಇದೇ ಸಂದರ್ಭ ತಿಳಿಸಿದರು.
ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ಜಯವರ್ಧನ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭ ಗ್ರಾಮಸ್ಥರಾದ. ಶ್ರೀನಿವಾಸ್ ದೇವರಾಜು ಅಜಯ್ ತೇಜಸ್ ಗೌತಮ್ ಧರ್ಮ ಸಿ. ಸೇರಿದಂತೆ ಇನ್ನಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!