ಕಾರ್ಯಕ್ರಮ

ಕುಶಾಲನಗರದ ಕನ್ನಡ‌ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾಗತ ಸಮಾರಂಭ

ಕುಶಾಲನಗರ, ಅ 04: ಕುಶಾಲನಗರದ ಕನ್ನಡ‌ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ‌ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ದೇಶಕ್ಕೆ ಸುಶಿಕ್ಷಿತ ರಾಜಕಾರಣಿಗಳ ಅಗತ್ಯವಿದೆ. ವಿವಿಧ ವೃತ್ತಿಗಳ ಬಗ್ಗೆ ಕನಸು ಹೊಂದಿರುವ ವಿದ್ಯಾರ್ಥಿಗಳ ಪೈಕಿ‌ ಕೆಲವರಾದರೂ ರಾಜಕೀಯಕ್ಕೆ ಪ್ರವೇಶಿಸುವ ಅಗತ್ಯವಿದೆ. ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ‌ ಕೊಡುಗೆ‌ ನೀಡಲು, ದೂರದೃಷ್ಟಿಯ ಯೋಜನೆಗಳನ್ನು ಜಾರಿಗೊಳಿಸಲು ಇದು ಸಹಕಾರಿಯಾಗಲಿದೆ.‌ ಈ‌ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ‌ಮಾರ್ಗದರ್ಶನದ ಅಗತ್ಯವಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಡಾ.ದೇವರಾಜ್ ಮುಖ್ಯ‌ ಭಾಷಣ ಮಾಡಿದರು. ವಿದ್ಯೆ ಯಾವುದೇ‌ ನಿರ್ದಿಷ್ಟ ವರ್ಗ, ಸಮುದಾಯ, ವ್ಯಕ್ತಿಗಳಿಗೆ‌ ಮಾತ್ರ ಸೀಮಿತವಲ್ಲ. ನಮ್ಮಲ್ಲಿ‌ ಕೊನೆಯವರೆಗೆ ಉಳಿಯುವ ಒಂದೇ ಸಂಪತ್ತು ಎಂದರೆ ಅದು ಶಿಕ್ಷಣ ಮಾತ್ರ. ವಿದ್ಯೆಯಿಲ್ಲದವನು‌ ಪ್ರಾಣಿಗೆ ಸಮಾನ ಎಂದರು.
ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು, ಸೌಕರ್ಯ ಕಲ್ಪಿಸಲು ಜೀವನ ಮುಡಿಪಾಗಿಡುವ ಪೋಷಕರ‌ ತ್ಯಾಗದ ಬಗ್ಗೆ ಕೂಡ ವಿದ್ಯಾರ್ಥಿಗಳು ಸ್ಮರಿಸಿಕೊಳ್ಳಬೇಕಿದೆ. ನಮ್ಮ ಬಗ್ಗೆ ನಮಗೆ ಹೆಮ್ಮೆ‌ ಮೂಡಿಸುವಂತೆ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಕಳೆದ ಸಾಲಿನಲ್ಲಿ‌ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು‌ ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡ‌ ಭಾರತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ‌ ಮುಖ್ಯಸ್ಥ ಬಿ.ಜೈವರ್ಧನ್ ಅಧ್ಯಕ್ಷತೆ ವಹಿಸಿದ್ದರು.

ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ, ಉಪಾಧ್ಯಕ್ಷೆ ಪುಟ್ಟ ಲಕ್ಷ್ಮಮ್ಮ, ಸದಸ್ಯರಾದ ವಿ.ಎಸ್.ಆನಂದಕುಮಾರ್, ಅಮೃತ್ ರಾಜ್,
ನಿವೃತ್ತ ಮುಖ್ಯ ಶಿಕ್ಷಕಿ ರಾಣಿ, ವಿದ್ಯಾಸಂಸ್ಥೆ ಪ್ರಾಂಶುಪಾಲರುಗಳಾದ ಡಾ.ನಾಗೇಂದ್ರ ಸ್ವಾಮಿ, ಕೆ.ಎಸ್.ರುದ್ರಪ್ಪ ಸೇರಿದಂತೆ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು, ಪೋಷಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!