ಚುನಾವಣೆ

ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕುಶಾಲನಗರ ಪಪಂ ಚುನಾವಣೆ

ಕುಶಾಲನಗರ, ಸೆ 25: ಕುಶಾಲನಗರ ಪಪಂ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಂದು.

ಪೊಲೀಸ್ ಬಂದೋಬಸ್ತ್ ನಡುವೆ‌ ಚುನಾವಣೆ ಪ್ರಕ್ರಿಯೆ ಆರಂಭ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಾರ್ಥಿ ಪರ ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಉಪಾಧ್ಯಕ್ಷೆ ಸ್ಥಾನಾರ್ಥಿ‌ಪರ ಶೆಖ್ ಕಲೀಮುಲ್ಲಾ ಉಮೇದುವಾರಿಕೆ.

ಕಾಂಗ್ರೆಸಿಗರೊಂದಿಗೆ ಜೆಡಿಎಸ್ ಸದಸ್ಯರು ಸಾಥ್.

ಒಟ್ಟು 16 ಮಂದಿ ಸದಸ್ಯರು, ಇಬ್ಬರು ನಾಮನಿರ್ದೇಶಿತ ಹೆಚ್ಚುವರಿ ಸದಸ್ಯರು, ಸಂಸದರು, ಶಾಸಕರಿಗೆ ಮತದಾನಕ್ಕೆ ಅವಕಾಶ.

6 ಕಾಂಗ್ರೆಸ್, 6 ಬಿಜೆಪಿ, 4 ಜೆಡಿಎಸ್ ಚುನಾಯಿತ. ಸದಸ್ಯರು.

ಈಗಾಗಲೆ ಕಾಂಗ್ರೆಸ್ ಗೆ ಸಹಕಾರ ನೀಡುವುದಾಗಿ ಘೋಷಿಸಿರುವ ಜೆಡಿಎಸ್ ನಾಲ್ವರು ಸದಸ್ಯರು.

ಎರಡೂ ಸ್ಥಾನದಲ್ಲಿ ಜಯಗಳಿಸುವ ವಿಶ್ವಾಸ ದಲ್ಲಿ ಕಾಂಗ್ರೆಸ್ ಪಕ್ಷ.

ಅಧ್ಯಕರಾಗಿ ಕಾಂಗ್ರೆಸ್ ಜಯಲಕ್ಷ್ಮಿ ಚಂದ್ರು, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪುಟ್ಟ ಲಕ್ಷ್ಮಮ್ಮ ಆಯ್ಕೆ ಸಾಧ್ಯತೆ.

ಬಿಜೆಪಿಯಿಂದ ಕೂಡ ಅಧಿಕಾರ ಹಿಡಿಯುವ ಪ್ರಯತ್ನ.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ರೂಪಾ ಉಮಾಶಂಕರ್, ಉಪಾಧ್ಯಕ್ಷ ಸ್ಥಾನಕ್ಕೆ ಜೈವರ್ಧನ್ ಸ್ಪರ್ಧೆ.

ಮುಂದೂಡಲಾದ ಚುನಾವಣೆ ಪ್ರಕ್ರಿಯೆ ಸಂದರ್ಭ ಬಿಜೆಪಿಯಿಂದ ಈ ಇಬ್ಬರಿಂದ ನಾಮಪತ್ರ ಸಲ್ಲಿಕೆ.

ಮತದಾನ ಮಾಡದಿರಲು ಬಿಜೆಪಿ ಸದಸ್ಯೆ ಶೈಲಾ ಕೃಷ್ಣಪ್ಪ ನಿರ್ಧಾರ.

ಪುರಸಭೆ ಗೆ ಚುನಾವಣೆಯಾದರೆ ಮಾತ್ರ ಮತದಾನ ಮಾಡುವ ಹೇಳಿಕೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!