ಕುಶಾಲನಗರ, ಸೆ 23: ಬಸವನಹಳ್ಳಿಯಲ್ಲಿರುವ ಕುಶಾಲನಗರ ಹಾಗೂ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್.ಆರ್.ಅರುಣರಾವ್ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು.
ಸಂಘಕ್ಕೆ ನೂತನ ಸದಸ್ಯರನ್ನು ನೊಂದಾಯಿಸಲು ನಗರವಾಸಿಗಳಿಗಿಂತ ಅರಣ್ಯವಾಸಿಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡುವ ಬಗ್ಗೆ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.
ಬಳಿಕ ಮಹಾಸಭೆಯಲ್ಲಿ ಅರಣ್ಯ ವಾಸಿಗಳಿಗೆ ಮಾತ್ರ ಸದಸ್ಯತ್ವ ಕೊಡುವ ಬಗ್ಗೆ ತೀರ್ಮಾನಿಸಲಾಯಿತು.
ಸಂಘದ ಆವರಣದಲ್ಲಿ ಹೊಸದಾಗಿ ನಿರ್ಮಾಣ ಮಾಡಲು ಯೋಜಿಸಿರುವ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ 25 ಲಕ್ಷ ಮಂಜೂರಾಗಿರುವ ಬಗ್ಗೆ ಅಧ್ಯಕ್ಷ ಅರುಣ್ ರಾವ್ ಹೇಳಿದರು.
ಹಾಗೆಯೇ ಸಂಘದ ವ್ಯಾಪ್ತಿಯ 541 ಕುಟುಂಬಗಳ 1823 ಮಂದಿಗೆ ಯಶಸ್ವಿನಿ ಯೋಜನೆ ಜಾರಿಗೊಳಿಸಲಾಗಿದೆ.
ಸಂಘದಲ್ಲಿ ಪ್ರಸಕ್ತ ಸಾಲಿನಲ್ಲಿ 2.20 ಲಕ್ಷ ಲಾಭ ಗಳಿಸಿದೆ.
ಸಂಘದ ಮೂಕಭೂತ ವ್ಯವಸ್ಥೆಗಳಿಗಾಗಿ ಜಿಲ್ಲಾ ಸಹಕಾರ ಸಂಘದಿಂದ 2.50 ಲಕ್ಷ ಹಣ ಮಂಜೂರಾಗಿರುವ ಬಗ್ಗೆ ಹೇಳಿದ ಅರುಣ್ ರಾವ್, ಸಂಘದ ಅಭಿವೃದ್ದಿಗೆ ಸದಸ್ಯರು ಹೆಚ್ಚಿನ ರೀತಿ ಶ್ರಮಿಸಬೇಕೆಂದು ಹೇಳಿದರು.
ಸದಸ್ಯರಾದ ಗಂಗಾಧರ್, ನಿಂಗನಾಯಕ್, ಮಂಜುನಾಥ, ಪ್ರಭಾಕರ್, ತೊರೆನೂರು ಶಿವಣ್ಣ, ಬಸವನಹಳ್ಳಿ ಮಹೇಶ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡು ಅಗತ್ಯ ಸಲಹೆ ನೀಡಿದರು.
ಸಂಘದ ಉಪಾಧ್ಯಕ್ಷ ಬಿ.ಎನ್.ಮನು, ನಿರ್ದೇಶಕರಾದ ಆರ್.ಕೆ.ಚಂದ್ರು, ಸಿ.ಕೆ.ಉದಯಕುಮಾರ್, ಬಿ.ಎಂ.ಯಶೋಧ, ಬಿ.ಆರ್.ಸುರೇಶ್, ಅಣ್ಣಯ್ಯ, ಎಸ್.ಆರ್.ಕಮಲ, ಕಾವೇರಿ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಜಿ.ಹನಿಕುಮಾರ್ ಇದ್ದರು.
ಸಂಘದ ಲೆಕ್ಕಾಧಿಕಾರಿ ಯಶವಂತ್ ಸ್ವಾಗತಿಸಿದರು.
Back to top button
error: Content is protected !!