ಕಾರ್ಯಕ್ರಮ

ಆರೋಗ್ಯಪೂರ್ಣ ಸಮಾಜ ನಿರ್ಮಾಣ ಎಲ್ಲರ ಹೊಣೆ: ಜಿಲ್ಲಾ ರೊಟೇರಿಯನ್ ಡಾ.ಚಂದ್ರಶೇಖರಯ್ಯ

ಪಿರಿಯಾಪಟ್ಟಣ, ಆ 30: ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ದೊಡ್ಡ ಸವಾಲಾಗಿದೆ ಎಂದು ಜಿಲ್ಲಾ ರೊಟೇರಿಯನ್ ಹಾಗೂ ಅಡಿಕ್ಷನ್ ಮತ್ತು ಡಿ ಅಡಿಕ್ಷನ್ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರಯ್ಯ ಅಭಿಪ್ರಾಯಪಟ್ಟರು.

ಪಟ್ಟಣದ ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಮಾದಕ ವಸ್ತುಗಳ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಸರ್ಕಾರ, ಸಂಘ-ಸಂಸ್ಥೆ ಎಲ್ಲರ ಮುಂದಿರುವ ದೊಡ್ಡ ಸವಾಲು ಆರೋಗ್ಯ ಪೂರ್ಣ ಸಮಾಜ ನಿರ್ಮಾಣ, ಯಾವುದರಿಂದ ಆರೋಗ್ಯ ಚೆನ್ನಾಗಿರಲು ಸಾಧ್ಯವೆಂಬ ಬಗ್ಗೆ ಗಂಭೀರ ಚಿಂತನೆ ನಡೆಸಲುವ ಕಾಲ ಇದಾಗಲಿದೆ. ಬಸವಣ್ಣ, ಬುದ್ಧ, ಗಾಂಧೀಜಿ, ಅಂಬೇಡ್ಕರ್, ಮಹಾವೀರ ಸೇರಿದಂತೆ ಎಲ್ಲ ಸಂತರ ಮಹತ್ವದ ಗುರಿ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವುದಾಗಿತ್ತು. ವ್ಯಸನರಹಿತ ಸಮಾಜ ಎಲ್ಲರ ಆಶಯ. ಮದ್ಯ ಸಮಾಜದ ದೊಡ್ಡ ಪಿಡುಗು. ಇದರ ವಿರುದ್ಧ ಹೋರಾಟ ಸಾಗಬೇಕಿದೆ. ಸಾಮಾನ್ಯವಾಗಿ ಪುರುಷರೇ ಹೆಚ್ಚಾಗಿ ವ್ಯಸನಿಗಳಾಗಿರುತ್ತಾರೆ. ಇಂತಹ ಮಾದಕ ಮತ್ತು ಮದ್ಯ ಸೇವನೆಯ ವ್ಯಸನದ ಕುರಿತು ಜಾಗೃತಿ ಮೂಡಿಸಲು ಹೊರಟಿರುವ ರೋಟರಿ ಸಂಸ್ಥೆ ಕಾರ್ಯ ಶ್ಲಾಘನೀಯ ಕೆಲಸ ಎಂದರು.
ಕಾರ್ಯಾಗಾರದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಎಂ.ರಾಜೇಗೌಡ ಮಾತನಾಡಿ ಸಮಾಜಕ್ಕೆ ಕಂಟಕವಾಗಿರುವ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸಿ ಮದ್ಯಪಾನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರು ಸಂಕಲ್ಪ ತೊಡ ಬೇಕಾಗಿದೆ. ಬಹುತೇಕ ಇಂದಿನ ಯುವ ಪೀಳಿಗೆ ಕುಡಿದ ಅಮಲಿನಲ್ಲಿಯೆ ಸರಗಳ್ಳತನ, ದರೋಡೆ, ಕಳ್ಳತನ ಮಾಡಿ ಧರ್ಮದೇಟಿಗೆ ಬಲಿಯಾಗುತ್ತಿದ್ದಾರೆ ಗ್ರಾಮೀಣ ಹಾಗೂ ಗಡಿ ಭಾಗದಲ್ಲಿ ಪೂರೈಸುವ ಅಕ್ರಮ ಮದ್ಯಕ್ಕೆ ಜನರು ಬಲಿಯಾಗುತ್ತಿದ್ದು, ಈ ರೀತಿಯ ಜನಜಾಗೃತಿ ಕಾರ್ಯಕ್ರಮಗಳು ಗಡಿಭಾಗ, ಹೋಬಳಿ, ತಾಲೂಕು ಮಟ್ಟದಲ್ಲಿ ಹೆಚ್ಚಾಗಿ ಆಯೋಜನೆಗೊಂಡಲ್ಲಿ ಮದ್ಯಪಾನಕ್ಕೆ ಕಡಿವಾಣ ಹಾಕಿ ಸ್ವಾಸ್ಥ ಸಮಾಜವನ್ನು ಕಟ್ಟಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಕಾರ್ಯದರ್ಶಿ ಐಕೆಪಿ ಹೆಗಡೆ, ಸಂಸ್ಥೆಯ ಪ್ರಾಂಶುಪಾಲ ಕಿರಣ್ ಕುಮಾರ್ ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಹರೀಶ್ ಗೌಡ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸ ವೃಂದದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!