ಕಾರ್ಯಕ್ರಮ

ಕರ್ನಾಟಕ ಚಾಲಕರ ಒಕ್ಕೂಟದಿಂದ ಗುರುತಿನ ಚೀಟಿ ವಿತರಣೆ

ಕುಶಾಲನಗರ, ಆ 30 :ಕರ್ನಾಟಕ ಚಾಲಕರ ಒಕ್ಕೂಟದ ಸ್ಥಾಪಕ ರಾಜ್ಯ ಅಧ್ಯಕ್ಷರಾದ ಜಿ.ನಾರಾಯಣ ಸ್ವಾಮಿ ಸಾರಥ್ಯದ ಕೊಡಗು ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕದಿಂದ ಶುಕ್ರವಾರ ನಗರದ ಖಾಸಗಿ ಸಭಾಂಗಣದಲ್ಲಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಜಿಲ್ಲಾ ಸಂಘದ ಅಧ್ಯಕ್ಷ ಸೈಯದ್ ಮುಜಿಬ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಂಘದ ರಾಜ್ಯ ಸಂಚಾಲಕ ಕೃಷ್ಣ ರಾಜ್ ಅರಸ್ ಜ್ಯೋತಿ ಬೆಳಗಿಸುವ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಘವು ಯಾವುದೇ ರೀತಿಯಲ್ಲಿ ಹಣಕಾಸು ವ್ಯವಹಾರವನ್ನು ಮಾಡುವುದಿಲ್ಲ. ಸರ್ಕಾರದಿಂದ ವಾಹನ ಸವಾರಿಗೆ ದೊರಕುವ ಸವಲತ್ತುಗಳನ್ನು ಕೊಡಿಸಿಕೊಡುವುದು ಮತ್ತು ಅದರ ಮಾಹಿತಿಯನ್ನು ನೀಡುವುದು ಹಾಗೂ ಚಾಲಕರ ಕಷ್ಟ ಸುಖಗಳಿಗೆ ಸ್ಪಂದಿಸುವುದು ವಾಹನವನ್ನು ಚಲಾಯಿಸುತ್ತಿರುವ ಸಂದರ್ಭದಲ್ಲಿ ಏನೇ ತೊಂದರೆ ಆದರೂ ನಮ್ಮ ಸಂಘದ ವತಿಯಿಂದ ಕೂಡಲೇ ಚಾಲಕರ ನೆರವಿಗೆ ತೆರಳುವ ಮೂಲಕ ಅವರ ನೋವುಗಳಿಗೆ ನಾವು ಜೊತೆಯಲ್ಲಿ ಇದ್ದು ರಕ್ಷಣೆ ನೀಡುವುದಾಗಿ ತಿಳಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಚಾಲಕರು ಸಾಂಸ್ಕೃತಿಕ ರಾಯಭಾರಿಗಳು. ಯಾವುದೇ ಊರಿನಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣಲು ಇವರ ಪಾತ್ರ ಮಹತ್ವವಾಗಿರುತ್ತದೆ. ಬಹಳಷ್ಟು ಕುಟುಂಬದ ಯಜಮಾನ ವಾಹನ ಚಲಾಯಿಸುವ ಮೂಲಕ ತಮ್ಮ ಕುಟುಂಬದ ಸದಸ್ಯರನ್ನು ಉತ್ತಮ ರೀತಿಯಲ್ಲಿ ಪೋಷಣೆ ಮಾಡುವ ಮೂಲಕ ಹಾಗೂ ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಉನ್ನತ ಮಟ್ಟದ ಸ್ಥಾನವನ್ನು ನೀಡಿರುವ ನಿರ್ದೇಶನ ಬಹಳಷ್ಟು ಇದೆ. ರಾಜ್ಯದಲ್ಲಿ ಕುಶಾಲನಗರ ವಾಹನ ಚಾಲಕರು ಒಳ್ಳೆಯ ಹೆಸರನ್ನು ಗೊಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ನಮ್ಮ ಸರ್ಕಾರ ಇರುವ ಕಾರಣ ಕ್ಷೇತ್ರದ ಶಾಸಕರ ಗಮನಕ್ಕೆ ತಂದು ಚಾಲಕರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೇರವಾಗಿ ಚಾಲಕರಿಗೆ ಸಿಗುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಮಾತನಾಡಿ, ಸಂಘದಲ್ಲಿ ಸುಮಾರು 200 ಕ್ಕೂ ಅಧಿಕ ಸದಸ್ಯರು ಇದ್ದು ಅವರುಗಳಿಗೆ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಂಘದಿಂದ ತ್ವರಿತವಾಗಿ ಸ್ಪಂದಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಮುಜಿಬ್ ಮಾತನಾಡಿ, ದಯವಿಟ್ಟು ಯಾವುದೇ ಕಾರಣಕ್ಕೂ ಚಾಲಕರು ವಾಹನವನ್ನು ಚಲಾಯಿಸುವ ಸಂದರ್ಭದಲ್ಲಿ ಮದ್ಯಪಾನ ಮಾಡ ಬೇಡಿ ಹಾಗೂ ಸರ್ಕಾರದ ಕಾನೂನು ರೀತಿಯಲ್ಲಿ ಸಮವಸ್ತ್ರ ಮತ್ತು ವಾಹನದ ಎಲ್ಲಾ ದಾಖಲೆಗಳನ್ನು ಜೊತೆಯಲ್ಲಿ ಇರಲಿ.ಪ್ರಯಾಣಿಕರ ಜೊತೆಯಲ್ಲಿ ಒಳ್ಳೆಯ ರೀತಿಯಲ್ಲಿ ವರ್ತಿಸುವ ಮೂಲಕ ರಾಜ್ಯದಲ್ಲಿ ನಮ್ಮ ಸಂಘ ಮಾದರಿಯಾಗಿರ ಬೇಕು ಎಂದರು.

ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಚಂದ್ರು, ಕೆ.ಶಿವರಾಜ್, ಬಿ.ಆರ್.ಸೈಯದ್ ರಿಯಾಜ್, ಮಂಜು, ಫಯಾಜ್, ಅಜಯ್, ಮನುಕುಮಾರ್, ಆನಂದ, ಬಸವರಾಜ್ ಹೋಟೆಲ್ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ‌ ಮುಂತಾದವರು ಇದ್ದರು.

ಕಾರ್ಯಮದ ನಿರೂಪಣೆ ಬೆಳ್ಳುಳ್ಳಿ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!