ಕುಶಾಲನಗರ, ಆ 23: ಕುಶಾಲನಗರ ತಾಲೂಕು ಸವಿತಾ ಸಮಾಜದ ಕಟ್ಟಡ ಶುಭಾರಂಭ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಸುಂದರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ಗಣಪತಿ ಹೋಮದೊಂದಿಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ಕಟ್ಟಡ ಕಾರ್ಯಾರಂಭಕ್ಕೆ ಚಾಲನೆ ನೀಡಲಾಯಿತು.
ಸಂಘದ ಕೊಡಗು ಜಿಲ್ಲಾಧ್ಯಕ್ಷ ದೊರೇಶ್ ನೂತನ ಕಟ್ಟಡ ಉದ್ಘಾಟಿಸಿದರು.
ಶ್ರೀ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ದೊರೇಶ್, ಸಮಾಜದ ಬಾಂಧವರ ಸಹಕಾರದಿಂದ ಸಣ್ಣದಾಗಿ ನಿರ್ಮಿಸಿರುವ ಈ ಕಟ್ಟಡ ಮುಂದಿನ ದಿನಗಳಲ್ಲಿ ಬೃಹತ್ ಭವನ ನಿರ್ಮಾಣ ಮಾಡುವಲ್ಲಿ ಪ್ರಯತ್ನ ಅಗತ್ಯ. ಸರಕಾರದ ಅನುದಾನಗಳನ್ನು ಪಡೆದು ಕಟ್ಟಡವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಯತ್ನಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಶ್ರಮವಹಿಸಲಾಗುವುದು. ಹಿರಿಯರ ಸಹಕಾರದಿಂದ ಸಂಘಟಿತರಾಗಿ ಈ ಒಂದು ಪ್ರಯತ್ನಕ್ಕೆ ಮುಂದಾಗಿರುವ ಸಮಾಜ ಬಾಂಧವರು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢರಾಗಲು ಸರಕಾರದ ಯೋಜನೆಗಳ ಬಗ್ಗೆ ಅರಿತುಕೊಳ್ಳುವ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮುಳ್ಳುಸೋಗೆ ಗ್ರಾಪಂ ಮಾಜಿ ಸದಸ್ಯ ಎಂ.ಎಸ್.ಶಿವಾನಂದ ಮಾತನಾಡಿ, ಕುಶಾಲನಗರ ವ್ಯಾಪ್ತಿಯಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿದೆ. ಸಂಘಕ್ಕೆ ಈ ಒಂದು ನಿವೇಶನ ಗುರುತಿಸಿಕೊಟ್ಟಿದ್ದು ಮುಂದಿನ ದಿನಗಳಲ್ಲಿ ಸಂಘದ ಹೆಸರಿಗೆ ದಾಖಲಾತಿ ಮಾಡಿಕೊಡಲು, ಅನುದಾನಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು. ಸಮಾಜದ ಅಭಿವೃದ್ಧಿಗೆ ಸಂಘದ ಪ್ರಮುಖರ ಪ್ರಯತ್ನ ಕೂಡ ಮುಖ್ಯವಾಗಿದೆ.
ತಾಲೂಕು ಸಂಘದ ಅಧ್ಯಕ್ಷ ಜಗದೀಶ್ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಕೈಗೊಂಡ ಪ್ರಯತ್ನ ಹಾಗೂ ಶ್ರಮದ ಬಗ್ಗೆ ತಿಳಿಸಿದರು. ಸ್ವಾರ್ಥ ಹಾಗೂ ಭಿನ್ನಾಭಿಪ್ರಾಯ ಮರೆತು ಸಮಾಜದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಇದೇ ಸಂದರ್ಭ ಗಣ್ಯರಿಗೆ ಹಾಗೂ ಸಮಾಜದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಮಹಿಳಾ ಮುಖಂಡರಾದ ರಾಧಾ ಪುಟ್ಟರಾಜು, ಲೋಲಾಕ್ಷಿ ಪುಟ್ಟರಾಜು, ಗೌರವಾಧ್ಯಕ್ಷ ಸತ್ಯಾನಂದ, ಉಪಾಧ್ಯಕ್ಷ ದೊರೆಸ್ವಾಮಿ, ಖಜಾಂಚಿ ಶಿವಕುಮಾರ್, ಕಾರ್ಯದರ್ಶಿ ರವೀಂದ್ರ, ನಿರ್ದೇಶಕರಾದ ಶಂಕರ್, ಜಯಂತ್ ಕುಮಾರ್, ಮಲ್ಲೇಶ್, ರಾಚಪ್ಪ, ತೀರ್ಥ, ಅರ್ಜುನ, ನವೀನ ಮತ್ತಿತರರು ಇದ್ದರು.
Back to top button
error: Content is protected !!