ಕಾಮಗಾರಿ

ನಂಜರಾಯಪಟ್ಟಣ ಸ.ಮಾ.ಪ್ರಾ.ಶಾಲೆಯಲ್ಲಿ ಶೌಚಾಲಯ ಉದ್ಘಾಟನೆ

ಕ್ರೀಡಾಕೂಟಕ್ಕೆ 10 ಸಾವಿರ ಆರ್ಥಿಕ ನೆರವು ಹಸ್ತಾಂತರ

ಕುಶಾಲನಗರ, ಆ 21: ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯ ಕಟ್ಟಡವನ್ನು ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಉದ್ಘಾಟಿಸಿದರು.

ಇದೇ ಸಂದರ್ಭ ಶಾಲೆಯಲ್ಲಿ ನಡೆಯಲಿರುವ ವಲಯ ಮಟ್ಟದ ಕ್ರೀಡಾಕೂಟಕ್ಕೆ ಪಂಚಾಯಿತಿ ವತಿಯಿಂದ ರೂ 10 ಸಾವಿರ‌ ಮೊತ್ತದ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು.

ರೂ 4 ಲಕ್ಷ ವೆಚ್ಚದಲ್ಲಿ ಗ್ರಾಮದ ಮುಖ್ಯ ರಸ್ತೆಯಿಂದ ಲಲಿತಾ, ಮುತ್ತಮ್ಮ, ರವಿ, ದರ್ಶನ್ ಅವರ ಮನೆ ಕಡೆ ತೆರಳುವ 19 ಮೀ ಕಾಂಕ್ರಿಟ್ ರಸ್ತೆ‌ ಹಾಗೂ ರೂ 1 ಲಕ್ಷ ವೆಚ್ಚದಲ್ಲಿ ಜಾಯ್ ಮತ್ತು ಎ.ಪಿ.ಸೀತಾರಾಂ ಅವರ ಮನೆಗೆ ತೆರಳುವ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಭೂಮಿಪೂಜೆ‌ ನೆರವೇರಿಸಲಾಯಿತು.

ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಸದರಿ ಶಾಲೆಗೆ ಇದುವರೆಗೆ ರಂಗಮಂದಿರ, ಉದ್ಯಾನವನ ಹಾಗೂ ಶೌಚಾಲಯಗಳಿಗೆಂದು ರೂ 14 ಲಕ್ಷ ರೂ‌ ವಿನಿಯೋಗಿಸಲಾಗಿದೆ.

ಗ್ರಾಮ ಪಂಚಾಯತಿಯನ್ನು ಮಾದರಿ ಗ್ರಾಮ ಪಂಚಾಯಿತಿಯಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿ ಹಾಗೂ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈಗಾಗಲೆ ನಂಜರಾಯಪಟ್ಟಣ ಹಾಗೂ ರಂಗಸಮುದ್ರ ವಾರ್ಡ್ ಗಳಲ್ಲಿ ತಲಾ 40 ಲಕ್ಷ ರೂಗಳಂತೆ 80 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮದ ಗುಳಿಗ ದೇವಾಲಯದಲ್ಲಿ ಗಣೇಶೋತ್ಸವ ಕಾರ್ಯಕ್ಕೆ ಮೇಲ್ಚಾವಣಿಯನ್ನು ಪಂಚಾಯಿತಿ ವತಿಯಿಂದ ಅಳವಡಿಸಲಾಗಿದೆ. ಸರ್ವ ಸದಸ್ಯರ ಸಹಕಾರದಿಂದ ಗ್ರಾಮದಲ್ಲಿ ಹಂತಹಂತವಾಗಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದಾಗಿ ಅವರು ತಿಳಿಸಿದರು.

ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಕುಸುಮಾ, ಸದಸ್ಯರಾದ ರಕ್ಷಿತ್ ಮಾವಾಜಿ, ಸಮೀರ, ಜಾಜಿ ತಮ್ಮಯ್ಯ, ಗಿರಿಜಮ್ಮ, ಪಿಡಿಒ ರಾಜಶೇಖರ್, ಕಾರ್ಯದರ್ಶಿ ಶೇಷಗಿರಿ, ಸಿಬ್ಬಂದಿ ರಂಜಿತ್, ಶಾಲಾ ಮುಖ್ಯ ಶಿಕ್ಷಕಿ ಸರಳ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಸ್ವಾಮಿ ಹಾಗೂ ಶಿಕ್ಷಕ ವೃಂದದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!