ಕುಶಾಲನಗರ, ಆ 15: ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ನಂಜರಾಯಪಟ್ಟಣ ನೂರು ಇಸ್ಲಾಂ ಮದರಸದಲ್ಲಿ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಧ್ವಜಾ ರೋಹಣವನ್ನು ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್ ವಿಶ್ವ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಮುಸ್ಲಿಂ ಜಮಾ ಅತ್ ನ ಅಧ್ಯಕ್ಷ ಅಮೀರ್ ರವರು ವಹಿಸಿದರು ಕಾರ್ಯಕ್ರಮದಲ್ಲಿ ನಂಜರಯಪಟ್ಟಣ ಗ್ರಾಮ ಪಂಚಾಯತಿ ಸದಸ್ಯರಾದ ಆರ್.ಕೆ ಚಂದ್ರು, ಲೋಕನಾಥ್, ಮಾವಾಜಿ ರಕ್ಷಿತ್, ಮುಸ್ಲಿಂ ಜಮಾ ಅತ್ತಿನ ಮಾಜಿ ಅಧ್ಯಕ್ಷ ಅಬ್ದುಲ್ಲಾ ಕೆ.ಬಿ., ಮಹಮ್ಮದ್ ಕೆ.ಪಿ, ನೂರು ಇಸ್ಲಾಂ ಮದರಸದ ಗುರುಗಳಾದ ಮಹಮ್ಮದ್ ಸಹದಿ ಹಾಗೂ ಮಹಮ್ಮದ್ ಮದನಿ, ಜಮಾತಿನ ಅಧ್ಯಕ್ಷ ಅಮೀರ್, ಉಪಾಧ್ಯಕ್ಷ ಬಶೀರ್, ಕಾರ್ಯದರ್ಶಿ ಹಾರಿಸ್, ಖಜಾಂಜಿ ಹ್ಯಾರಿಸ್, ಸದಸ್ಯರಾದ ಅನೀಸ್, ಸಫೀರ್, ನೌಶಾದ್, ಶರೀಫ್, ಅಲಿ ಗ್ರಾಮಸ್ಥರಾದ ಅಬ್ಬಾಸ್ ಎಂ.ಇ, ರಿಯಾಜ್ ಕೆ.ಬಿ. ಶಬ್ಬು, ಯೂತ್ ಕಮಿಟಿಯ ಸದಸ್ಯ ಮುಜಾಮಿಲ್ ಶಂಸುದ್ದೀನ್, ಸಿರಾಜ್ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ನೌಶಾದ್ ಸ್ವಾಗತಿಸಿ ಅನೀಸ್ ವಂದನಾರ್ಪಣೆ ಮಾಡಿದರು.
ನೂರುಲ್ ಇಸ್ಲಾಂ ಮದರಸದ ವಿದ್ಯಾರ್ಥಿ ನಾಯಕ ಎಲ್ಲರಿಗೂ ಪ್ರತಿಜ್ಞಾವಿಧಿ ಹೇಳಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಆಡಳಿತವನ್ನು ಮೆಚ್ಚಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯತಿ ಎಲ್ಲಾ ಸದಸ್ಯರಿಗೆ ರಾಷ್ಟ್ರ ಧ್ವಜವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಗ್ರಾಮ ಪಂಚಾಯತಿ ನಂಜರಾಯಪಟ್ಟಣಕ್ಕೆ ರಾಷ್ಟ್ರ ಲಾಂಛನವನ್ನು ರಾಷ್ಟ್ರಧ್ವಜವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ನಂತರ ಎಲ್ಲರಿಗೆ ಸಿಹಿಯನ್ನು ವಿತರಿಸಲಾಯಿತು.
Back to top button
error: Content is protected !!