ಕುಶಾಲನಗರ, ಆ 02: ತಾಯಂದಿರು ಎರಡು ವರ್ಷಗಳವರೆಗೆ ತಾಯಿಯ ಎದೆ ಹಾಲು ಕುಡಿಸುವುದರಿಂದ ಮಕ್ಕಳ ಆರೋಗ್ಯವೂ ವೃದ್ದಿಸುತ್ತದೆ. ತಾಯಂದಿರನ್ನು ಕಾಡುವ ಸ್ತನ ಕ್ಯಾನ್ಸರ್ ದೂರವಾಗುತ್ತದೆ ಎಂದು ಕುಶಾಲನಗರ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಶಿವಕುಮಾರ್ ಕರೆಕೊಟ್ಟರು.
ಕೊಡಗು ಜಿಪಂ, ಕುಶಾಲನಗರ ತಾಪಂ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ” ವಿಶ್ವ ಸ್ತನ್ಯ ಪಾನ ಸಪ್ತಾಹ ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯಿಯ ಹಾಲನ್ನು ಮಗುವಿಗೆ ಕುಡಿಸುವುದರಿಂದ ದಪ್ಪವಿರುವ ತಾಯಿಯ ತೂಕ ಇಳಿಯುತ್ತದೆ.
ತಾಯಿ ಮಗು ಬಾಂಧವ್ಯ ವೃದ್ದಿಸುತ್ತದೆ. ಪೀರಿಯಡ್ಸ್ ಮುಂದೂಡುತ್ತದೆ.
ಮಗುವಿನ ರೋಗನಿರೋಧಕ ಶಕ್ತಿಯೂ ವೃದ್ದಿಸುತ್ತದೆ ಎಂದು ಡಾ.ಶಿವಕುಮಾರ್ ಹೇಳಿದರು.
ಆರು ತಿಂಗಳವರೆಗೆ ಮಗುವಿಗೆ ತಾಯಿ ಹಾಲು ಹೊರತಾಗಿ ಬೇರೇನೂ ಕುಡಿಸಬಾರದು.
ಬಾಟಲಿ ಹಾಲನ್ನಂತು ಕುಡಿಸಲೇ ಬಾರದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಇಂದೂಧರ್ ಹೇಳಿದರು.
ಕಾರ್ಯಕ್ರಮದಲ್ಲಿ ಕುಶಾಲನಗರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಧುಸೂದನ್, ಶಾಲಾ ಮಕ್ಕಳ ಆರೋಗ್ಯ ತಪಾಸಣಾ ಘಟಕದ ವೈದ್ಯರಾದ ಡಾ.ಮೇಲಪ್ಪ, ಡಾ.ನಿವೇದಿತಾ, ಡಾ.ಭರತ್, ತಾಲ್ಲೂಕು ಆರೋಗ್ಯಾಧಿಕಾರಿ ಹೆಚ್.ಕೆ.ಶಾಂತಿ, ಶುಶ್ರೂಷಕಿ ಇಂದಿರಾ ಮೊದಲಾದವರಿದ್ದರು.
Back to top button
error: Content is protected !!