ಪ್ರಕಟಣೆ

ನಳಂದ ಕಾಲೇಜಿನ ಮಡಿಲಿಗೆ “ಪ್ರೈಡ್ ಆಫ್ ನೇಷನ್” ಪ್ರಶಸ್ತಿಯ ಗರಿ

ಕುಶಾಲನಗರ, ಜು 23:ಏಷ್ಯಾದ ಟುಡೆ ಮಾಧ್ಯಮವು ಭಾರತ ಮತ್ತು ಇಡೀ ವಿಶ್ವವೇ ಹೆಮ್ಮೆಪಡುವಂತೆ ಮಾಡಿದ ಎಲ್ಲಾ ಸಾಧಕರಿಗೆ ಫ್ರೈಡ್ ಆಫ್ ನೇಶನ್ ಎಂಬ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ಪ್ರಶಸ್ತಿಯನ್ನು ಶಿಕ್ಷಣ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದಂತಹ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ಗೌರವಯುತವಾಗಿ ನೀಡಲಾಗುತ್ತದೆ. ಹಾಗೂ ಆಯಾ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿದವರನ್ನು ಪ್ರೇರೇಪಿಸಲು ಅಥವಾ ಪ್ರೋತ್ಸಾಹಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.ನಳಂದ ಇಂಟರ್‌ನ್ಯಾಶನಲ್ ಇಂಡಿಪೆಂಡೆಂಟ್ ಪ್ರಿ ಯೂನಿವರ್ಸಿಟಿ ಕಾಲೇಜು ಜುಲೈ 11, 2024 ರಂದು ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಏಷ್ಯಾ ಟುಡೆ ಮೀಡಿಯಾ ಆಯೋಜಿಸಿದ್ದ ಕರ್ನಾಟಕದ “ಬೆಸ್ಟ್ ಡೇ ಕಮ್ ಬೋರ್ಡಿಂಗ್ ಪಿಯು ಕಾಲೇಜಿನ ಪ್ರೈಡ್ ಆಫ್ ನೇಷನ್ ಪ್ರಶಸ್ತಿಯನ್ನು ” ಗೆದ್ದುಕೊಂಡಿತು. ಸಮಾರಂಭವನ್ನು ಉದ್ಘಾಟಿಸಿದ ಪದ್ಮಶ್ರೀ ಡಾ.ಸಿ.ಎನ್ ಮಂಜುನಾಥ್, ಸಂಸದರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ ಮತ್ತು ಬಾಲಿವುಡ್ ನಟ ಶ್ರೀ ಗುಲ್ಶನ್ ಗ್ರೋವರ್ ಅವರ ಸಮ್ಮುಖದಲ್ಲಿ ನಳಂದ ಇಂಟರ್‌ನ್ಯಾಶನಲ್ ಇಂಡಿಪೆಂಡೆಂಟ್ ಪಿಯು ಕಾಲೇಜಿನ ವಸತಿ ನಿರ್ದೇಶಕ ಶ್ರೀ ನ್ಯಾಮ ಗೇಲ್ ನ್ಯೂ0ಡುಪ್ ಮತ್ತು ಪ್ರಿನ್ಸಿಪಾಲ್ ಶ್ರೀ ಶಾಜಿ ಅಲುಂಗಲ್ ಜೋಸೆಫ್ ರವರು ಪ್ರಶಸ್ತಿ ಮತ್ತು ಪ್ರಮಾಣಪತ್ರವನ್ನು ಸ್ವೀಕರಿಸಿದರು.

ಸಂಸ್ಥೆಯು ಕೆಲವು ವರ್ಷಗಳಿಂದ ಸತತವಾಗಿ ಪಿಯು ಬೋರ್ಡ್ ಪರೀಕ್ಷೆಯಲ್ಲಿ ಪಡೆದ ಫಲಿತಾಂಶವನ್ನು ಪರಿಗಣಿಸಿ ಕಾಲೇಜನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಪಿಯು ಬೋರ್ಡ್ ಪರೀಕ್ಷೆ 2023-24 ರಲ್ಲಿ ವಿಜ್ಞಾನ ವಿಭಾಗದ ಗಾಯತ್ರಿ ಕೆ ಎಂಬ ವಿದ್ಯಾರ್ಥಿನಿಯು 597/600 ಅಂಕಗಳನ್ನು ಗಳಿಸಿ ರಾಜ್ಯ 3 ನೇ ರ್ಯಾಂಕ್ ಮತ್ತು ವಾಣಿಜ್ಯ ವಿಭಾಗದ ಮುತ್ತಮ್ಮ ಎಂ ಸಿ ಎಂಬ ವಿದ್ಯಾರ್ಥಿನಿಯು 586/600 ಅಂಕ ಗಳಿಸಿದ್ದಾರೆ.

ನಳಂದ ಗುರುಕುಲ ಎಜುಕೇಶನ್ ಫೌಂಡೇಶನ್ ನ ಚೇರ್ಮೆನ್ ಶ್ರೀ ಎನ್ ಸಾತಪ್ಪನ್ ಮತ್ತು ನಿರ್ದೇಶಕರಾದ ಶ್ರೀ ನ್ಯಾಮಗೇಲ್ ನ್ಯೂಂಡುಪ್ ಮತ್ತು ಶ್ರೀ ದೇವಿ ಪೂನಚ್ಚ ಅವರ ನೇತೃತ್ವದಲ್ಲಿ ಕಾಲೇಜು ನಡೆಸಲ್ಪಡುತ್ತಿದೆ. ಇದು ಪಿರಿಯಾಪಟ್ಟಣ ತಾಲೂಕಿನ ಕೊಪ್ಪದ ಗೋಲ್ಡನ್ ಟೆಂಪಲ್ ಬಳಿ 40 ಎಕರೆಗಳಷ್ಟು ಸೊಂಪಾದ ಹಸಿರು ಪರಿಸರ ಸ್ನೇಹಿ ಕ್ಯಾಂಪಸ್‌ ಆಗಿದ್ದು ಗುಣಮಟ್ಟ ಮತ್ತು ಪರಿಸರ ನಿರ್ವಹಣಾ ವ್ಯವಸ್ಥೆಗಳಿಗಾಗಿ ISO ಪ್ರಮಾಣೀಕೃತ ಸಂಸ್ಥೆಯಾಗಿದೆ. ಇದು ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳೆರಡರಲ್ಲೂ ಶಿಕ್ಷಣವನ್ನು ನೀಡುತ್ತಿದೆ.

ಸಂಸ್ಥೆಯ ಅರ್ಹ ಮತ್ತು ಅನುಭವಿ ಶಿಕ್ಷಕರು ಪಿ.ಯು ಬೋರ್ಡ್ ಮತ್ತು NEET/JEE ಮತ್ತು KCET ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಗತಿಗಳನ್ನು ನಿರ್ವಹಿಸುತ್ತಿದ್ದಾರೆ.

ಕಾಲೇಜಿನ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿ ಉತ್ತಮವಾದ ಹಾಸ್ಟೆಲ್ ಸೌಲಭ್ಯಗಳನ್ನು ಹೊಂದಿದ್ದು. ಸಂಸ್ಥೆಯು ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಹೊಂದಿದೆ. ಕ್ರೀಡೆ ಮತ್ತು ಆಟಗಳ ಕಲಿಕೆಗೆ ಆದ್ಯತೆ ನೀಡುತ್ತಿದ್ದು. ಕುದುರೆ ಸವಾರಿ, ಈಜು, ಲಾನ್ ಟೆನಿಸ್, ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್, ಹಾಕಿ, ಫುಟ್ ಬಾಲ್ ಮತ್ತು ವಾಲಿಬಾಲ್ ಆಟಗಳಲ್ಲಿ ಉತ್ತಮ ತರಬೇತಿಯನ್ನು ನೀಡಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!