ಪಿರಿಯಾಪಟ್ಟಣ, ಜು 13 : ಭಾರತೀಯ ತಂಬಾಕು ಸಂಸ್ಥೆಯು ಎಫ್ ಸಿವಿ ತಂಬಾಕು ರೈತರ ಜೀವನೋಪಾಯ ಮತ್ತು ಗಳಿಕಯ ಮೇಲೆ ಪರಿಣಾಮ ಬೀರುವ ಹಾಗೂ ಸರ್ಕಾರಕ್ಕೆ ನಷ್ಟ ಉಂಟು ಮಾಡುವ ಅಕ್ರಮ ಸಿಗರೇಟು ವ್ಯಾಪಾರವನ್ನು ತಡೆಯುವಲ್ಲಿ ಅಗತ್ಯ ಕ್ರಮಗಳನ್ನು ಒದಗಿಸುತ್ತಿದೆಯೆಂದು ಟಿಐಐ ನಿರ್ದೇಶಕ ಶರತ್ ಟಂಡನ್ ತಿಳಿಸಿದರು.
ಭಾರತೀಯ ತಂಬಾಕು ಸಂಸ್ಧೆಯು ತನ್ನ 24 ನೇ ಆವೃತ್ತಿಯ ತಂಬಾಕು ರೈತರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಅವರು ಭಾರತವು ವಿಶ್ವದ ಎರಡನೇ ಅತಿ ದೊಡ್ಡ ತಂಬಾಕು ಉತ್ಪಾದಕ ಮತ್ತು ಪ್ರಮುಖ ರಫ್ತುದಾರ ದೇಶವಾಗಿದ್ದು , ಭಾರತದಲ್ಲಿ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ನಗದು ಬೆಳೆಯುವ ಜೀವನೋಪಾಯದ ಉತ್ಪಾದನೆ ಸರಕಾರದ ಆದಾಯ ಸಂಗ್ರಹಣೆ ಮತ್ತು ರಫ್ತಿನ ಮೂಲಕ ವಿದೇಶಿ ಕರೆನ್ಸಿ ಗಳಿಗೆ ಸಂಬಂಧಿಸಿದಂತೆ ಗಮನಾರ್ಹವಾದ ಸಾಮಾಜಿಕ ಆರ್ಥಿಕ ಪ್ರಯೋಜನಗಳನ್ನು ಉತ್ಪಾದಿಸುತ್ತದೆ. ಭಾರತೀಯ ತಂಬಾಕು ಸಂಸ್ಥೆಯು 1999ರಲ್ಲಿ ಸಿಗರೇಟ್ ಎಲೆ ತಂಬಾಕು ಕೃಷಿ ಸಮುದಾಯವನ್ನು ಗೌರವಿಸಿ ಮತ್ತು ಪ್ರೋಹಸಸುವ ಉದ್ದೇಶದಿಂದ ಪ್ರಶಸ್ತಿಗಳನ್ನು ಸ್ಥಾಪಿಸಿದೆ.ಭಾರತದಲ್ಲಿ ಬೆಳೆಯುವ ತಂಬಾಕಿನ ವಿವಿಧ ಪ್ರಭೇದಗಳ ಪೈಕಿ ಫ್ಲೂ ಕ್ಯೂರ್ಡ ವರ್ಜೀನಿಯಾ ಮತ್ತು ಬರ್ಲಿಯು ಹೆಚ್ಚು ಬೇಡಿಕೆಯಿದ್ದು ಲಾಭದಾಯಕ ಪ್ರಭೇದವಾಗಿದೆ. ನಮ್ಮ ತಂಬಾಕು ಉತ್ಪಾದನೆಯನ್ನು ಜಾಗತಿಕ ಬೇಡಿಕೆಯೊಂದಿಗೆ ಜೋಡಿಸಿಕೊಂಡರೆ ರಫ್ತಿನಲ್ಲಿ ಹೊಸ ಎತ್ತರವನ್ನು ಸಾಧಿಸಬಹುದು ಜಾಗತಿಕ ತಂಬಾಕು ವ್ಯಾಪಾರದಲ್ಲಿ ತನ್ನ ಪಾಲನ್ನು ಯೋಚಿಸಲು ಮತ್ತು ದೇಶಕ್ಕೆ ಅಮೂಲ್ಯವಾದ ವಿದೇಶಿ ವಿನಿಮಯ ಗಳಿಕೆಯನ್ನು ತರುವಲ್ಲಿ ಭಾರತವು ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ತಂಬಾಕು ರೈತರ ಹೆಚ್ಚಿನ ಗಳಿಕೆಯನ್ನು ಖಚಿತಪಡಿಸಿಕೊಳ್ಳಲು ರಫ್ಟಿನ ಜೊತೆಗೆ ಸ್ಥಿರವಾದ ದೇಶೀಯ ಮಾರುಕಟ್ಟೆ ಅಗತ್ಯವಿದೆ ಜಾಗತಿಕ ತಂಬಾಕು ವ್ಯಾಪಾರದಲ್ಲಿ ಭಾರತದ ಪಾಲನ್ನು ಹೆಚ್ಚಿಸುವ ಸಲುವಾಗಿ ನಮ್ಮ ಸರ್ಕಾರವು ತಂಬಾಕು ವಲಯಕ್ಕೆ ಇತರ ದೊಡ್ಡ ತಂಬಾಕನ್ನು ಉತ್ಪಾದಿಸುವ ಹಾಗೂ ರಫ್ತು ಮಾಡುವ ದೇಶಗಳಾದ ಜಿಂಬಾಬ್ವೆ ಮಲಾವಿ ಮುಂತಾದ ದೇಶಗಳಿಗೆ ರಫ್ತು ಪ್ರೋತ್ಸಾಹವನ್ನು ಹೆಚ್ಚಿಸಬೇಕು .ಇದು ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ತಂಬಾಕುವಿನ ಬೆಲೆ ಹೆಚ್ಚಿಸಲು ಹಾಗೂ ತಂಬಾಕು ವಲಯದ ರಫ್ತು ಸಾಮರ್ಥ್ಯವನ್ನು ಟ್ಯಾಪ್ ಮಾಡಲು ಸಹಾಯಕವಾಗುತ್ತದೆ ಎಂದರು.
ಈ ವೇಳೆ 13 ಪ್ರಗತಿಪರ ತಂಬಾಕು ರೈತರನ್ನು ,3 ಕೃಷಿ ವಿಜ್ಞಾನಿಗಳು , ಆಂಧ್ರಪ್ರದೇಶ ಮತ್ತು ತೆಲಂಗಾಣದ 13 ತಂಬಾಕು ರೈತರಿಗೆ ಸುಸ್ಥಿರ ಮತ್ತು ಪ್ರಗತಿಪರ ಕೃಷಿಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಂಬಾಕು ಮಂಡಳಿ ಅಧ್ಯಕ್ಷ ಯಶವಂತ್ ಕುಮಾರ್,ಉಪಾಧ್ಯಕ್ಷ ಜಿ.ವಾಸು ಬಾಬು,ಸಂಸದರಾದ ಡಿ. ಪುರಂದೇಶ್ವರಿ , ಪುಟ್ಟ ಮಹೇಶ್ ಕುಮಾರ್ , ವಿಧಾನಸಭಾ ಸದಸ್ಯರ ಮಡ್ಡಿಪಾಟಿ ವೆಂಕಟರಾಜು , ಸಿಟಿ ಆರ್ ಐ ನಿರ್ದೇಶಕ ಡಾಕ್ಟರ್ ಎಂ. ಶೇಷ ಮಾಧವ್,ತಂಬಾಕು ಮಂಡಳಿ ಕಾರ್ಯದರ್ಶಿ ಡಿ.ವೇಣುಗೋಪಾಲ್ ಸೇರಿದಂತೆ ರಾಜಕೀಯ ಮುಖಂಡರು , ತಂಬಾಕು ಮಂಡಳಿ ಮತ್ತು ಸಿಟಿಆರ್ ಐ ಅಧಿಕಾರಿಗಳು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
Back to top button
error: Content is protected !!