ಪಿರಿಯಾಪಟ್ಟಣ, ಜು 02 : ಬೌದ್ಧರಿಗೂ ಮರಗಳಿಗೂ ಅವಿನಾಭಾವ ಸಂಭಂದವಿದ್ದು ಪ್ರಕೃತಿಯನ್ನು ಉಳಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಟಿಬೇಟಿಯನ್ ಧರ್ಮಗುರು ಕರ್ಮಪಾ ರಿಪುಂಚೆ ತಿಳಿಸಿದರು.
ತಾಲೂಕಿನ ಬೈಲುಕುಪ್ಪೆ ಟಿಬೇಟಿಯನ್ ನಿರಾಶ್ರಿತರ ಶಿಬಿರದ ಕಗ್ಯುನಳಂದ ಧರ್ಮಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆ ಹಾಗೂ ಕರ್ಮಾಪ ರಿಪುಂಚೆಯವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಿಡನೆಟ್ಟು ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯನು ಪ್ರಕೃತಿಯ ಮೇಲೆ ಅಲಂಬಿತನಾಗಿದ್ದಾನೆ. ಬುದ್ಧನ ಅನುಯಾಯಿಗಳಾದ ಬೌದ್ಧ ಭಿಕ್ಕುಗಳು ಕೂಡ ಮರಗಳ ಮೇಲೆ ವಿಶೇಷ ಪ್ರೀತಿಯನ್ನು ಇರಿಸಿಕೊಂಡಿದ್ದೇವೆ. ಬುದ್ಧ ತಮ್ಮ ಮೊದಲ ಬೋಧನೆ ಮಾಡಿದ್ದು ಕಾಡಿನಲ್ಲಿ ಮರದ ಕೆಳಗೆ ಹಾಗೆ ಬುದ್ಧನಿಗೆ ಜ್ಞಾನೋದಯವಾಗಿದ್ದು ಮರದ ಅಡಿಯಲ್ಲಿಯೆ. ಅಲ್ಲದೆ ಬುದ್ಧ ಪರಿನಿರ್ವಾಣ ಹೊಂದಿದ್ದು ಕೂಡ ಎರಡು ಮರಗಳ ಮಧ್ಯದಲ್ಲೇ. ಆದ್ದರಿಂದ ಬೌದ್ಧರಾದ ನಾವು ಪ್ರಕೃತಿಯನ್ನು ಪ್ರೀತಿಯಿಂದ ಕಾಣುತ್ತೆವೆ. ಇಂದು ಕಗ್ಯುನಳಂದ ಧರ್ಮಶಾಲೆಯ ಆವರಣದಲ್ಲಿ ಸಾಂಕೇತಿಕವಾಗಿ ಗಿಡಗಳನ್ನು ನೆಟ್ಟು ನಿರೆಯುತ್ತಿದ್ದು ಮುಂದಿನ ಒಂದು ತಿಂಗಳೊಳಗೆ 1 ಲಕ್ಷ ಗಿಡಗಳನ್ನು ನೆಡುವ ಮೂಲಕ ಉತ್ತಮ ಆರೋಗ್ಯ ಹಾಗೂ ಪರಿಸರಕ್ಕಾಗಿ ಪ್ರಕೃತಿಗೆ ಉತ್ತಮ ಕೊಡುಗೆಯನ್ನು ನೀಡಲಾಗುತ್ತಿದೆ, ಸಾವಿರಾರು ಮರಗಳನ್ನು ಬೌದ್ಧ ಭಿಕ್ಕುಗಳು ಬೆಳೆಸಿರುವುದು ಇತರರಿಗೆ ಮಾದರಿಯಾಗಿದ್ದು ಎಲ್ಲರೂ ಇದನ್ನು ಅನುಸರಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬೇಕು ಎಂದು ತಿಳಿಸಿದರು.
ಪರಿಸರವಾದಿ ಪ್ರೊ.ರವಿಕುಮಾರ್ ಮಾತನಾಡಿ, ಸ್ಥಳೀಯರ ಸಹಕಾರದಿಂದ ಟಿಬೇಟಿಯನ್ ನಿರಾಶ್ರಿತರ ಶಿಬಿರಗಳಲ್ಲಿ ಉತ್ತಮ ವನ ನಿರ್ಮಾಣ ಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ಹೀಗೆ ಮರಗಳನ್ನು ಹೆಚ್ಚು ಬೆಳವಣಿಗೆಯಾಗಿ ಮತ್ತಷ್ಟು ವನ ನಿರ್ಮಾಣವಾದರೆ ಕಾವೇರಿ ನದಿಗೆ ಇಲ್ಲಿಂದಲೆ 82 ಲಕ್ಷ ಲೀಟರ್ ನೀರು ಸರಬರಾಜಾಗುತ್ತದೆ. ಮರಗಳು ನೀರನ್ನು ಹಿಡಿದಿಟ್ಟುಕೊಂಡು ಭೂಮಿಗೆ ನೀಡುವುದರಿಂದ ಅಂತರ್‌ಜಲದ ಮಟ್ಟ ಹೆಚ್ಚಾಗುವುದರ ಜೊತೆಗೆ ಉತ್ತಮ ವಾತಾವರಣ ಹೆಚ್ಚಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಾವಿರಾರು ಬೌದ್ಧ ಭಿಕ್ಷುಗಳು ಧರ್ಮಗುರು ಕರ್ಮಾಪ ರಿಪುಂಚೆ ರವರ ಹುಟ್ಟು ಹಬ್ಬಕ್ಕೆ ಶುಭಕೋರಿದರು.
ಈ ಸಂದರ್ಭದಲ್ಲಿ ಗುಲುತಲ ಮೊನಾಸ್ಟ್ರಿ ಧರ್ಮಗುರು ಕರಂಬಜೆ ನೆತನ್ ಡೆಂಜಾನ್, ಸೆರಂಜೆ ಮೊನಾಸ್ಟ್ರಿ ತೆಲುಸೆ, ಕಾಂಗ್ರೆಸ್ ಮುಖಂಡ ಎನ್.ಎಸ್.ಭುಜಂಗ, ಕೊಪ್ಪ ಗ್ರಾಪಂ ಸದಸ್ಯ ಸೈಯದ್ ಇಲಿಯಾಜ್, ಕೊಪ್ಪ ರವಿ, ಅಸ್ಲಾಂ ಪಾಷಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Back to top button
error: Content is protected !!