ಸೋಮವಾರಪೇಟೆ, ಜೂ 17 :ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ ವೆಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಅಭಿಪ್ರಾಯ ಪಟ್ಟರು.
ಪಟ್ಟಣದ ಎಂ.ಜಿ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾಗಲಿರುವ ನಾಟ್ಯಕಲಾ ನೃತ್ಯ ಶಾಲೆಗೆ ಚಾಲನೆ ನೀಡಿ ಮಾತನಾಡಿದರು.
ಇಂದು ಗ್ರಾಮೀಣ ಭಾಗದ ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾಗಿದೆ ಆದ್ದರಿಂದ ಇಂಥ ನಾಟ್ಯ ಶಾಲೆಗಳು ಅವಶ್ಯಕ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಿಕಾ ಭವನದ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ ಇಂದಿನ ಮಕ್ಕಳು ಬಹಳ ಬುದ್ಧಿವಂತರು ಒಬ್ಬೊರೊಳಗೆ ಒಂದೊಂದು ಪ್ರತಿಭೆಗಳಿರುತವ್ವೆ ಅವುಗಳನ್ನು ಗುರುತಿಸಬೇಕು,ಶಾಲೆಗಳಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯು ಅವಶ್ಯಕವೆಂದರು. ಇಂದು ದೃಶ್ಯ ಮಾದ್ಯಮಗಳು ಸ್ಪರ್ಧೆಗಳನ್ನು ಆಯೋಜಿಸಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ನಾಡಿನಾದ್ಯಂತ ಪರಿಚಯ ಮಾಡುತ್ತಿರುವುದರಿಂದ ಎಲ್ಲರಲ್ಲೂ ಆಸಕ್ತಿ ಹೆಚ್ಚುತ್ತಿದೆ ಎಂದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿದ್ದ ರಾಷ್ಟ್ರೀಯ ನೃತ್ಯ ತರಬೇತುದಾರ ವಿನೋದ್ ಕರ್ಕೇರಾ ಮಾತನಾಡಿ ಇಂದು ನೃತ್ಯವೆಂಬುದು ಜೀವನದ ಅವಿಭಾಜ್ಯ ಅಂಗವೆಂಬಂತಾಗಿದೆ ಮಕ್ಕಳಿಂದ ವಯೋವೃದ್ಧರವರೆಗೂ ನೃತ್ಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ,ಎಲ್ಲಾರೂ ದೃಶ್ಯ ಮಾಧ್ಯಮಗಳಲ್ಲಿ ಬರುವ ನೃತ್ಯ,ಹಾಡು,ಮುಂತಾದ ಕಾರ್ಯಕ್ರಮಗಳನ್ನು ನೋಡಿ ಸಂತೋಷ ಪಡುತ್ತಿದ್ದಾರೆ ಎಂದರು.
ಓದಿನಲ್ಲಿ ಇರುವ ಆಸಕ್ತಿಯನ್ನು ಅಂಕಗಳಲ್ಲಿ ಮಾತ್ರ ತೋರಿಸಲು ಸಾಧ್ಯ ,ಆದರೆ ನೃತ್ಯಪ್ರತಿಭೆಯನ್ನು ಒಬ್ಬ ವಿದ್ಯಾರ್ಥಿ ಸಾರ್ವಜನಿಕವಾಗಿ ಪ್ರದರ್ಶಿಸಬಹುದು ಎಂದು ವ್ಯಾಖ್ಯಾನಿಸಿದರು.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಾ ವಿಜೇತ ರಾಹುಲ್ ರಾವ್,ಕಿರುತೆರೆ ನಟ ಪ್ರವೀಣ್,ಕಿರುತೆರೆ ನಿರ್ದೇಶಕ ಅನಿಶ್ ಪೂಜಾರಿ, ಕೆ.ಟಿ.ಡಿ.ಓ ದ ತಾಲ್ಲೋಕು ಅಧ್ಯಕ್ಷ ರವಿ, ಕಾಗಡಿಕಟ್ಟೆ ಅಯ್ಯಪ್ಪ ದೇವಾಲಯ ಸಮಿತಿ ಅಧ್ಯಕ್ಷ ಜಗದೀಶ,ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಗಂಗಾ,ಜೇಸಿ ಸಂಸ್ಥೆಯ ಮಾಜಿ ಅಧ್ಯಕ್ಷ ರುಬೀನಾ ನಾಟ್ಯ ಕಲಾ ಶಾಲೆಯ ಅಭಿಷೇಕ್,ಅಜಿತ್,ದೀಪಕ್ ಹಾಗೂ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
Back to top button
error: Content is protected !!