ಶಿಕ್ಷಣ

ನಳಂದ ಇಂಟರ್ ನ್ಯಾಶನಲ್ ಇಂಡಿಪೆಂಡೆಂಟ್ ಪ್ರಿ ಯುನಿವರ್ಸಿಟಿ ಕಾಲೇಜು: ವೃತ್ತಿಪರ ಕೋರ್ಸುಗಳ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

ಕುಶಾಲನಗರ, ಜೂ 05: ನಳಂದ ಇಂಟರ್ ನ್ಯಾಶನಲ್ ಇಂಡಿಪೆಂಡೆಂಟ್ ಪ್ರಿ ಯುನಿವರ್ಸಿಟಿ ಕಾಲೇಜಿನಲ್ಲಿ ವೃತ್ತಿಪರ ಕೋರ್ಸುಗಳ ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳ ಬಗ್ಗೆ ಮಾಹಿತಿಯನ್ನು ಕೊಡಲು ನಳಂದ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯ ನಂತರ ಮಕ್ಕಳು ತಮ್ಮ ಬದುಕಿನ ಗುರಿಗೆ ಅನುಗುಣವಾಗಿ ಯಾವ ವಿಷಯಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದರೆ ಯಾವ ಕೋರ್ಸುಗಳಿಗೆ ಹೋಗಲು ಅನುಗುಣವಾಗುತ್ತದೆ ಎಂಬುದನ್ನು ಕುರಿತು ಸಂಯೋಜಿತ ಕೋರ್ಸುಗಳ ಸಂಚಾಲಕರಾದ ಕರೀಮುಲ್ಲ ಪ್ರಸಾದ್ ರೆಡ್ಡಿಯವರು ವಿವರ ನೀಡಿದರು.

ಪಿಯುಸಿಯ ನಂತರ ತೆಗೆದುಕೊಳ್ಳಬೇಕಾದ ಎಂಜನಿಯರಿಂಗ್ ಕೋರ್ಸ್, ವೈದ್ಯಕೀಯ ಕೋರ್ಸ್ ಗಳ ಮಾಹಿತಿಯನ್ನು ನೀಡುವುದರ ಜೊತೆಗೆ ಇವುಗಳನ್ನು ಪಡೆಯಲು ಲಭ್ಯವಿರುವ ಉತ್ತಮ ಕಾಲೇಜುಗಳ ಬಗ್ಗೆ ತಿಳಿಸಿಕೊಟ್ಟರು. ಮಾಹಿತಿ ಮಾತ್ರವಲ್ಲದೆ ವಾರಕ್ಕೆ ಎರಡು ದಿನಗಳು JEE/NEET ಮತ್ತು KCET ಪರೀಕ್ಷೆಗಳಿಗೆ ಬೇಕಾದ ಪೂರ್ವ ತರಬೇತಿಯನ್ನು ನೀಡುವುದಾಗಿ ಕಾಲೇಜಿನ ಪ್ರಾಂಶುಪಾಲರಾದ ಶಾಜಿ ಆಲುಂಗಲ್ ರವರು ಸ್ಪಷ್ಟಪಡಿಸಿದರು ಹಾಗೂ ಕಾಲೇಜಿನ ಶಿಸ್ತನ್ನು ಕಾಪಾಡಿಕೊಳ್ಳಲು ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳ ವಿವರಣೆ ನೀಡಿದರು.

ಕಾಲೇಜಿನ ವಿಜ್ಞಾನ ವಿಭಾಗದ ಗಾಯತ್ರಿ. ಕೆ. ಎಂಬ ವಿದ್ಯಾರ್ಥಿಯು 600ಕ್ಕೆ 597 ಅಂಕಗಳು ಅಂದರೆ ಶೇಕಡ 99.5 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 3 ನೇ Rank ಪಡೆದರೆ ವಾಣಿಜ್ಯ ವಿಭಾಗದಿಂದ ಮೌನ ಮುತ್ತಮ್ಮ ಎಂಬ ವಿದ್ಯಾರ್ಥಿನಿಯು ಶೇ 98 ಅಂಕಗಳನ್ನು ಗಳಿಸಿರುವುದನ್ನು ಕುರಿತು ಆಡಳಿತ ಮಂಡಳಿಯವರು, ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ ಸಂಭ್ರಮವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕ ವೃಂದದವರು, ತರಬೇತುದಾರರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!