ರಾಜಕೀಯ

ಬಿಜೆಪಿಯ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಪ್ರಚಾರ ಸಭೆ

ಕುಶಾಲನಗರ, ಮೇ 28: ಬಿಜೆಪಿಯ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರ ಪ್ರಚಾರ ಸಭೆ ಕುಶಾಲನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ‌ನಡೆಯಿತು.

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರ ಪರ ಸಭೆಯಲ್ಲಿ ಮತಯಾಚನೆ‌ ನಡೆಯಿತು. ಘಟನಾಯಕರಿಗೆ ವಹಿಸಿರುವ ಜವಾಬ್ದಾರಿಗಳು, ಮತದಾರರ ಬಳಿ ತೆರಳಿ ಅಭ್ಯರ್ಥಿಗಳ ಪರ ಮತಯಾಚಿಸುವ ಕೆಲಸ ಸಮರ್ಪಕವಾಗಿ ನಿರ್ವಹಿಸುವಂತೆ ಚರ್ಚೆ ನಡೆಯಿತು.

ಈ ಸಂದರ್ಭ ಮಾತನಾಡಿದ ಅಭ್ಯರ್ಥಿ ಧನಂಜಯ ಸರ್ಜಿ, ಪದವೀಧರರಿಗೆ ಸವಲತ್ತುಗಳನ್ನು ಒದಗಿಸುವ ಮೂಲಕ ಉದ್ಯೋಗದಾತರಾಗಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ದಿ ತರಬೇತಿಗಳನ್ನು ಒದಗಿಸುವ ಅಗತ್ಯವಿದ್ದು ಈ ಬಗ್ಗೆ ಚಿಂತನೆ ಹೊಂದಲಾಗಿದೆ. ಭಾರತವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ‌ ಬಿಜೆಪಿಗೆ ಮತ್ತಷ್ಟು ಬಲತುಂಬಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದೆ. ನಿಸ್ವಾರ್ಥ ಸೇವಾ ಮನೋಭಾವದಿಂದ ಈ ಕ್ಷೇತ್ರವನ್ನು ಆಯ್ದುಕೊಂಡಿರುವುದಾಗಿ ತಿಳಿಸಿದ ಅವರು ಎಲ್ಲರ ಸಹಕಾರ ಕೋರಿದರು.

ಚುನಾವಣಾ ಪ್ರಭಾರಿ ಡಿ.ಎಸ್.ಅರುಣ್ ಮಾತನಾಡಿ, ಧನಂಜಯ ಸರ್ಜಿ ಅವರ ಬಗ್ಗೆ ಪರಿಚಯ ಮಾಡಿದರು. ಚುನಾವಣಾ ತಯಾರಿಗಳ ಬಗ್ಗೆ ಸಭೆಗೆ ಮಾಹಿತಿ ಒದಗಿಸಿದರು.

ಮಂಡಲ ಅಧ್ಯಕ್ಷ ಎಂ.ಎಲ್.ಗೌತಮ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ‌ಕಾಳಪ್ಪ, ಕುಶಾಲನಗರ ನಗರ ಘಟಕ ಅಧ್ಯಕ್ಷ ಎಂ.ಎಂ.ಚರಣ್, ಮಾಜಿ ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಜಿಲ್ಲಾ ಸಂಚಾಲಕ ನವೀನ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಕುಶಾಲನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಮಧುಸೂದನ್, ಮಂಡಲ ಸಂಚಾಲಕ ಪಿ.ಆರ್.ಸುನಿಲ್ ಕುಮಾರ್, ಚಂದ್ರಶೇಖರ್ ಹೆರೂರು, ಜೆಡಿಎಸ್ ನಗರಾಧ್ಯಕ್ಷ ಎಚ್.ಟಿ.ವಸಂತ ಮತ್ತಿತರರು ಇದ್ದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!