ಪ್ರಕಟಣೆ

ತೊರೆನೂರು‌ ವಿರಕ್ತ ಮಠಕ್ಕೆ ಸಂಬಂಧಿಸಿದ ಆಸ್ತಿ ರಕ್ಷಣೆಗೆ ವೀರಶೈವ ಮುಖಂಡರ ಒತ್ತಾಯ

ಕುಶಾಲನಗರ, ಮೇ 08: ಕೊಡಗು ಜಿಲ್ಲೆ, ಕುಶಾಲನಗರ ತಾಲೂಕಿಗೆ ಸೇರಿದ ತೊರೆನೂರು ವಿರಕ್ತ ಮಠದ ಆಸ್ತಿ ವಿವಿಧೆಡೆ ಖಾಸಗಿಯವರ ಸ್ವಾಧೀನದಲ್ಲಿದ್ದು ಮಠದ ಸುಪರ್ದಿಗೆ ಪಡೆದುಕೊಳ್ಳಲು ಸಮಾಜದ‌ ಮುಖಂಡರು ಅಗ್ರಹಿಸಿದ್ದಾರೆ.

ಸೋಮವಾರಪೇಟೆ ತಾಲೂಕು ಐಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 40 ಎಕರೆ ಆಸ್ತಿಯು ಬೇರೆಯವರ ಸ್ವಾಧೀನದಲ್ಲಿರುತ್ತದೆ. ಅದಲ್ಲದೆ ಸಂಬಂಧ ಪಟ್ಟಂತ ಆಸ್ತಿಯ ರೆಕಾರ್ಡುಗಳು ಅಥವಾ ದಾಖಲಾತಿಗಳು ಮಠದ ಹೆಸರಿನಲ್ಲಿ ನಡೆದು ಬರುತ್ತಾ ಇರುತ್ತದೆ ಕೂಡಲೇ ಮಠಕ್ಕೆ ಸಂಬಂಧಪಟ್ಟ ಮಠಾಧೀಶರು ಇದರ ಬಗ್ಗೆ ಗಮನಹರಿಸಿ ಇದನ್ನು ಮಠದ ಸ್ವಾಧೀನಕ್ಕೆ ಪಡೆದುಕೊಳ್ಳತಕ್ಕದ್ದು. ಇಲ್ಲದಿದ್ದರೆ ವೀರಶೈವ ಸಮಾಜ ಬಾಂಧವರು ಇದರ ಬಗ್ಗೆ ಹೋರಾಟ ನಡೆಸಬೇಕಾಗುತ್ತದೆ ಮತ್ತು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನಲ್ಲೂ ಸುಮಾರು 200 ಎಕರೆ ಆಸ್ತಿಯೋ ಮಠದ ಹೆಸರಿನಲ್ಲಿ ಇರುತ್ತದೆ ಎಂದು ತಿಳಿದುಬಂದಿರುತ್ತದೆ. ಅದನ್ನು ಸಹ ಮಠಾಧೀಶರು ಮಠದ ಸ್ವಾಧೀನಕ್ಕೆ ಪಡೆದು ಕೊಳ್ಳತಕ್ಕದ್ದು. ಈಗಾಗಲೇ ಮರುಗಾ ಮಠ ಇರಬಹುದು ಮತ್ತು ಮಡಿಕೇರಿಯ ಗದ್ದಿಗೆ ಆಸ್ತಿ ಇರಬಹುದು ಇವೆಲ್ಲವೂ ವೀರಶೈವ ಸಮಾಜ ಬಾಂಧವರ ಆಸ್ತಿಯಾಗಿರುತ್ತದೆ ಆದುದರಿಂದ ದಯವಿಟ್ಟು ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಾಗುತ್ತದೆ ಎಂದು ವೀರಶೈವ ಸಮಾಜದ ಮುಖಂಡರಾದ ರವಿ ಅಜ್ಜಳ್ಳಿ  ಆದಿತ್ಯ ಕೂಗೆ ಕೊಡಿ ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!