ಕುಶಾಲನಗರ, ಮೇ 05: ಕುಶಾಲನಗರದ ವಿವೇಕಾನಂದ ಪಿಯು ಕಾಲೇಜಿನಲ್ಲಿ 10 ನೇ ತರಗತಿ ನಂತರದ ಭವಿಷ್ಯದ ಶೈಕ್ಷಣಿಕ ಕೋರ್ಸ್‌ಗಳು ಮತ್ತು ಸಿಇಟಿ ನೀಟ್ ಕೋರ್ಸ್‌ನ ಪ್ರಾಮುಖ್ಯತೆಯ ಕುರಿತು ಓರಿಯಂಟೇಶನ್ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿವೇಕಾನಂದ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಪನ್ಮೂಲ ವ್ಯಕ್ತಿಗಳು
ಎಸ್‌ಎಸ್‌ಎಲ್‌ಸಿ ನಂತರ ಲಭ್ಯವಿರುವ ಶೈಕ್ಷಣಿಕ ಅವಕಾಶಗಳು ಮತ್ತು ಸಿಇಟಿ, ನೀಟ್ ಕೋರ್ಸ್ ಪ್ರಾಮುಖ್ಯತೆ ಬಗ್ಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ಪೋಷಕರಿಗೆ ಮಾಹಿತಿ ಒದಗಿಸಿದರು.
ಸಿಇಟಿ, ನೀಟ್ ತರಬೇತುದಾರರಾದ ಡಾ. ಗೋವಿಂದರಾಜ್. ಪಿ, ಎಚ್. ಕೆ.ಪ್ರಕಾಶ್, ಯೆನೆಪೊಯ ಪಿಯು ಕಾಲೇಜು ಡಾ. ರಾಕೇಶ್, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಡಾ. ಪ್ರಶಾಂತ್ ರಾವ್ ಅವರು ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಬಗ್ಗೆ ನೆರೆದಿದ್ದ ವಿದ್ಯಾರ್ಥಿ ಸಮೂಹ ಹಾಗೂ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿ ಸಂಶಯ ನಿವಾರಿಸಿದರು.
ಈ ಸಂದರ್ಭ ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ಹಾಗೂ ಉಪನ್ಯಾಸಕ ವೃಂದದವರು ಇದ್ದರು.
Back to top button
error: Content is protected !!