ಕುಶಾಲನಗರ, ಮೇ 04: ಕುಶಾಲನಗರ 230/ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹಾದುಹೋಗುವ ಫೀಡರ್ ಗಳ ಮಾರ್ಗದಲ್ಲಿ ತುರ್ತಾಗಿ ಹೊಸ ಎಂಐಡಿ ಅಭಿವೃದ್ಧಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ ಮೇ 5 ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುತ್ತದೆ.
ಆದ್ದರಿಂದ ಎಫ್ 8 ಸೋಮೇಶ್ವರ ಫೀಡರ್ ವ್ಯಾಪ್ತಿಯ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಸಾಯಿ ಬಡಾವಣೆ, ಕುವೆಂಪು ಬಡಾವಣೆ,ಜನತಾ ಕಾಲೋನಿ,ಹಾರಂಗಿ ರಸ್ತೆ,ಗೋಪಾಲ್ ಸರ್ಕಲ್ ಮತ್ತು ಎಫ್ 2 ಕಾವೇರಿ ಕೆಐಎಡಿಬಿ ವ್ಯಾಪ್ತಿಯ ಕೂಡ್ಲೂರು,ಕೂಡಿಗೆ ,ಕೈಗಾರಿಕಾ ಬಡಾವಣೆ ಹಾಗೂ ಎಫ್ 6 ಕೂಡಿಗೆ ವ್ಯಾಪ್ತಿಯ ವೀರಭೂಮಿ ಸರ್ಕಲ್,ಹಳೇ ಕೂಡಿಗೆ,ಚಿಕ್ಕತ್ತೂರು, ದೊಡ್ಡತ್ತೂರು,ಬಸವನತ್ತೂರು,ಕೂಡುಮಂಗಳೂರು,ಕೂಡ್ಲೂರು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ.
Back to top button
error: Content is protected !!