ಕುಶಾಲನಗರ, ಸೆ 02: ಕೊಡಗು ಜಿಲ್ಲಾ ವ್ಯಾಪ್ತಿಯ ಕುಶಾಲನಗರ ನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಗಾಂಜಾ ಸರಬರಾಜು/ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಸರಬರಾಜು/ಮಾರಾಟದ ಬಗ್ಗೆ ನಮ್ಮ ಕಛೇರಿ/ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಆರ್.ವಿ.ಗಂಗಾಧರಪ್ಪ, ಡಿವೈಎಸ್ ಪಿ, ಸೋಮವಾರಪೇಟೆ ಉಪವಿಭಾಗ, ಯಶವಂತ ಪಿಐ, ಕುಶಾಲನಗರ ನಗರ ಪೊಲೀಸ ಠಾಣೆ ಮತ್ತು ಚಂದ್ರಶೇಖರ್.ಹೆಚ್.ಎ, ಪಿಎಸ್ಐ, ಹೆಚ್.ವಿ.ಗೀತಾ, ಕುಶಾಲನಗರ ನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿ: 01-09-2023 ರಂದು ಮಾದಪಟ್ಟಣ ಗ್ರಾಮ ಬಳಿ ಮಾದಕ ವಸ್ತು ಮಾರಾಟ ಬಳಕೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಕೇರಳ ರಾಜ್ಯ ವೈನಾಡು ಜಿಲ್ಲೆ ಮೂಲದವರಾದ 1) ಶಾಫಿ, 25 ವರ್ಷ, 2) ಅಬ್ದುಲ್ ರೆಹಮಾನ್, 33 ವರ್ಷ, 3) ಅಬ್ದುಲ್ ಲತೀಫ್, 40 ವರ್ಷ, 4) ವಿಷ್ಣು, 23 ವರ್ಷ, 5) ಕುಂಇ ಮೊಹಮ್ಮದ್, 43 ವರ್ಷ, 6) ಜಿನೇಶ್, 41 ವರ್ಷ, 7) ಮಹೇಶ್, 20 ವರ್ಷ ಎಂಬುವವರನ್ನು 76 ಗ್ರಾಂ ಗಾಂಜಾ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ಸದರಿ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶ್ರೀ ಕೆ.ರಾಮರಾಜನ್, ಐಪಿಎಸ್, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.
Back to top button
error: Content is protected !!