ಕಾರ್ಯಕ್ರಮ

ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವದ ಗುರುವಂದನಾ ಸಮಾರಂಭ

ಸೋಮವಾರಪೇಟೆ, ಏ 03: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಿದ್ದಗಂಗಾ ಮಠದ ಕೊಡುಗೆ ಅನನ್ಯ ಎಂದು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ತಿಲೊತ್ತಮೆ ಬಣ್ಣಿಸಿದರು.
ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ವೀರಶೈವ ಸಮಾಜದ ಆಶ್ರಯದಲ್ಲಿ ಏರ್ಪಡಿಸಿದ್ದ ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವದ ಗುರುವಂದನಾ ಸಮಾರಂಭ ವನ್ನುದ್ದೇಶಿಸಿ ಮಾತನಾಡಿದರು.
ಇಡೀ ದೇಶದಲ್ಲಿಯೇ ಗಮನ ಸೆಳೆದಿರುವ ಸಿದ್ದಗಂಗಾ ಕ್ಷೇತ್ರ ಇಂದು ಜನಸಾಮಾನ್ಯರ ಬಾಳಿನ ಆಶಾಕಿರಣವಾಗಿದೆ,ಜಾತಿ, ಮತ ಬೇಧವಿಲ್ಲದೆ ಬಡವ,ಬಲ್ಲಿದನೆಂಬ ತಾರತಮ್ಯವಿಲ್ಲದೆ ಪ್ರತಿವರ್ಷ ಹತ್ತು,ಹದಿನೈದು ಸಾವಿರ ವಿಧ್ಯಾರ್ಥಿ ಗಳಿಗೆ ವಿದ್ಯೆ,ವಸತಿ,ಆಹಾರಗಳೆಂಬ ತ್ರಿವಿಧ ದಾಸೋಹ ನೀಡುತ್ತಿದೆ ಎಂದರು. ಅಂದು ಪೂಜ್ಯ ಶಿವಕುಮಾರ ಸ್ವಾಮೀಜಿ ಹಳ್ಳಿ,ಹಳ್ಳಿ ತಿರುಗಿ ಬಿಕ್ಷೇಎತ್ತಿ ಕಷ್ಟಪಟ್ಟು ಕಟ್ಟಿದ ಮಠ ಇಂದು ಹೆಮ್ಮರವಾಗಿ ಬೆಳೆದು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮಾಜಕ್ಕೆ ಆಶ್ರಯ ನೀಡುತ್ತಿರುವುದು ಇಂದಿನ ಜನಾಂಗ ಕೃತಘ್ನ ತೆಯಿಂದ ಸ್ಮರಿಸಿ ಕೊಳ್ಳಬೇಕಾಗಿದೆ ಹಾಗೂ ತಮ್ಮ ಕೈಯಾಲಾದ ಸಹಾಯ ಮಾಡಬೇಕಾಗಿದೆ ಎಂದರು
ಮಕ್ಕಳಲ್ಲಿಯೇ ದೇವರನ್ನು ಕಾಣುತಿದ್ದ ಶಿವಕುಮಾರ ಸ್ವಾಮೀಜಿಗಳು ಮಕ್ಕಳ ಮದ್ಯಾಹ್ನದ ಊಟದ ನಂತರವೇ ತನ್ನ ಸಾವಿನ ಸುದ್ದಿ ತಿಳಿಸಬೇಕು ಎಂದು ಹೇಳಿದ್ದು ಅವರಿಗೆ ಮಕ್ಕಳ ಮೇಲಿದ್ದ ಮಮತೆಯನ್ನು ತೋರಿಸುತ್ತದೆ ಎಂದು ಕಂಬನಿ ಮಿಡಿದರು.
ಶಿವಕುಮಾರ ಸ್ವಾಮೀಜಿ ಗಳಂತೆಯೆ 12 ನೆ ಶತಮಾನದಲ್ಲಿ ಅನೇಕ ಶಿವಶರಣರು ಈ ನಾಡಿನ ಸಂಸ್ಕೃತಿ,ನಾಡು,ನುಡಿ ಹಾಗೂ ಜನಜೀವನ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಟ್ಟಿದ್ದರು ಅವರುಗಳನ್ನು ನಾವುಗಳು ಸ್ಮರಿಸಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭ ವೀರಶೈವ ಸಮಾಜದ ಯಜಮಾನ ಶಿವಕುಮಾರ್ ಹಾಗೂ ಹಿರಿಯರಾದ ಶ್ರೀಮತಿ ಕಲಾ ಸದಾನಂದ್ ತಿಲೋತ್ತಮೆಯವರಿಗೆ ಗೌರವ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷ ಉಷಾರಾಣಿ ಸ್ವಾಗತಿಸಿ,ವಂದಿಸಿದರು.
ವೀರಶೈವ ಸಮಾಜದ ಶೆಟ್ರು ಜಯಣ್ಣ, ಕಾರ್ಯದರ್ಶಿ ನಾಗರಾಜ್,ಅಕ್ಕನ ಬಳಗದ ಅದ್ಯೇಕ್ಷೆ ಚಂದ್ರಕಲಾ, ಸೇರಿದಂತೆ ವೀರಶೈವ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪ್ರಮುಖರು ಹಾಜರಿದ್ದರು.
ದೇವಾಲಯದ ಅರ್ಚಕರಾದ ಮೋಹನ ಮೂರ್ತಿ ಪುರೋಹಿತ್ವದಲ್ಲಿ ಶ್ಟೋತ್ತರ,ಅರ್ಚನೆ ಹಾಗೂ ವಿಶೇಷ ಪೂಜೆ,ಮಹಾಮಂಗಳಾರತಿ ನಂತರ ದಾಸೋಹ ನಡೆಯಿತು.


ಸಿದ್ದಗಂಗಾ ಮಠ ಹಾಗೂ ಶಿವಕುಮಾರ ಸ್ವಾಮಿಗಳ ಬಗ್ಗೆ ಇರುವ ಗೌರವದಿಂದ ಇಂದು ಎಲ್ಲೆಡೆ ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ ಆಚರಿಸುತ್ತಿದ್ದಾರೆ ಇದು ಭಕ್ತರು ಹಾಗೂ ಮಠದ ಬಗ್ಗೆ ಇರುವ ಅವಿನಾಭಾವ ಸಂಬಂಧ ಎಂದು ಸಿದ್ದಗಂಗಾ ಮಠ ಅಧ್ಯಕ್ಷರಾದ ಶ್ರೀ.ಶ್ರೀ.ಶ್ರೀ.ಸಿದ್ದಲಿಂಗ ಮಹಾಸ್ವಾಮೀಜಿ ಭಕ್ತರಿಗೆ ಕೃತಜ್ಞತೆ ಅರ್ಪಿಸಿದರು.
ಸೋಮವಾರಪೇಟೆಯಲ್ಲಿ ನಡೆದ ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ ಕಾರ್ಯಕ್ರಮದ ವೇಳೆ ಆನ್ ಲೈನ್( ವೀಡಿಯೋ ಕಾಲ್) ಮೂಲಕ ಆಶೀರ್ವಚನ ನೀಡಿದ ಅವರು ಶ್ರೀ ಮಠದ ಮೇಲೆ ಭಕ್ತರಿಗೆ ಇರುವ ಗೌರವದಿಂದ ಶಿವಕುಮಾರ ಸ್ವಾಮಿಗಳ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಸೇರುತ್ತಿದ್ದಾರೆ ಹಾಗೂ ನಾಡಿನ ವಿವಿದೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರಿಗೆ ಗುರುವಂದನೆ ಸಲ್ಲಿಸುತ್ತಿದ್ದಾರೆ ಹಾಗೂ ದಾಸೋಹ ನಡೆಸುತ್ತಿದ್ದಾರೆ ಅಂತೆಯೇ ಸೋಮವಾರಪೇಟೆಯಲ್ಲಿ ಯೂ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತೋಷ ಎಲ್ಲಾರಿಗೂ ಶುಭವಾಗಲಿ ಎಂದು ಹಾರೈಸಿದರು.ಈ ಸಂದರ್ಭ ಅರಮೆರಿ ಕಲಂಚೆರಿ ಮಠದ ಶ್ರೀ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ,ಕಿರಿಕೊಡಲಿ ಮಠದ ಶ್ರೀ.ಸದಾಶಿವ ಸ್ವಾಮೀಜಿ ಸೇರಿದಂತೆ ಕೊಡಗಿನ ಸ್ವಾಮೀಜಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!