ಕುಶಾಲನಗರ, ಏ 02: ಗುಡ್ಡೆಹೊಸೂರು ಬೊಳ್ಳುರು ಗ್ರಾಮದ ಶ್ರೀ ಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವರ ವಾರ್ಷಿಕ ಸಭೆಯನ್ನು ದೇವಸ್ಥಾನದ ಆವರಣದಲ್ಲಿ ಕರೆಯಲಾಗಿತ್ತು ಸಭೆಯನ್ನು ಹಾಲಿ ಅಧ್ಯಕ್ಷರಾದ ಗುರುಬಸಪ್ಪ ಬಿ. ಪಿ. ವಹಿಸಿಕೊಂಡು ಕಮಿಟಿಯ ನಿಧನರಾದ ಸದಸ್ಯರಿಗೆ ಸಂತಾಪ ಸುಚಿಸುವ ಮೂಲಕ ಸಭೆಯನ್ನು ಪ್ರಾರಂಭ ಮಾಡಲಾಯಿತು. ಈಗಿರುವ ಕಮಿಟಿಯ ಅವಧಿ ಪೂರ್ಣಗೊಂಡಿದ್ದರಿಂದ ಹೊಸ ಕಮಿಟಿಗೆ ಸದಸ್ಯರನ್ನು ನೇಮಕ ಮಾಡಲಾಯಿತು ಅಧ್ಯಕ್ಷರಾಗಿ ಬಿ. ಸಿ. ಮಲ್ಲಿಕಾರ್ಜುನ ಮತ್ತು ಉಪಾಧ್ಯಕ್ಷರಾಗಿ ದಾದಪ್ಪ ಹಾಗೂ 11 ಜನ ಸದಸ್ಯರನ್ನು ನೇಮಕ ಮಾಡಲಾಯಿತು ಹಾಗೆ ಈ ವರ್ಷದ ವಾರ್ಷಿಕ ಪೂಜೆಯನ್ನು ಮೇ ತಿಂಗಳ ದಿನಾಂಕ 6ರ ಸೋಮವಾರ ಬಸವೇಶ್ವರ ದೇವರ ಮತ್ತು 7ನೇ ಮಂಗಳವಾರ ಚೌಡೇಶ್ವರಿ ದೇವರ ವಾರ್ಷಿಕೋತ್ಸವ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
Back to top button
error: Content is protected !!