ಸೋಮವಾರಪೇಟೆ, ಮಾ 19: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತ್ಯಗತ್ಯ,ಧೈರ್ಯದಿಂದ ಪರೀಕ್ಷೆ ಎದುರಿಸಿ ಎಂದು ಕಿರಿಕೊಡ್ಲಿ ಮಠಾಧೀಶರರಾದ ಸದಾಶಿವ ಸ್ವಾಮೀಜಿ ವಿಧ್ಯಾರ್ಥಿಗಳಿಗೆ ಮಾನಸಿಕವಾಗಿ ದೈರ್ಯಟ್ ತುಂಬಿದರು.
ಪಟ್ಟಣದ ಎಸ್.ಜೆ.ಎಂ.ಪ್ರೌಡಶಾಲೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪರೀಕ್ಷಾ ಪರಿಕರ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಇಂದು ಸ್ಪರ್ಧಾತ್ಮಕ ಯುಗ ನಾವು ಎಷ್ಟು ಕಲಿತರು ಸಾಲದು ಆದ್ದರಿಂದ ಎಲ್ಲಾರೂ ಗಮನವಿಟ್ಟು ಪಾಠ ಕೇಳಿಸಿ ಕೊಳ್ಳಬೇಕು ಹಾಗೂ ಮನಸಿಟ್ಟು ಓದಬೇಕು ಎಂದರು.
ಪರೀಕ್ಷೆಯ ಬಗ್ಗೆ ಭಯಬೇಡ ಹತ್ತು ತಿಂಗಳಲ್ಲಿ ನೀವು ಕಲಿತಿದ್ದನ್ನು ನೀವು ಬರೆಯುತ್ತೀರಿ ಅಷ್ಟೇ,ಆದ್ದರಿಂದ ಮೊದಲು ಪ್ರಶ್ನೆ ಪತ್ರಿ ಕೆಯನ್ನು ಗಮನವಿಟ್ಟು ಓದಿರಿ ಸುಲಭದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ ವಿದ್ಯಾರ್ಥಿಗಳು ಸಮಾಧಾನದಿಂದ ಪರೀಕ್ಷೆ ಬರೆಯುವ ಮನಸ್ತಿತಿ ಬೆಳೆಸಿಕೊಳ್ಳಿ ಹೆದರಿಕೆ ಬೇಡವೆಂದರು.ಪರೀಕ್ಷೆಯ ಸಮಯದಲ್ಲಿ ಮೊದಲ ಹದಿನೈದು ನಿಮಿಷ ಪ್ರಶ್ನೆಗಳನ್ನು ಓದಲು ಮೀಸಲಾಗಿರುತದೆ ಆದ್ದರಿಂದ ಮೊದಲು ಪ್ರಶ್ನೆಯನ್ನು ಅರ್ತಮಾಡಿಕೊಳ್ಳಿ ಎಂದರು.
ಸ್ಥಳೀಯ ವಿರಕ್ತಮಠದ ಶ್ರೀ.ನಿಶ್ಚಲನಿರಂಜನ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ವಿತರಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಮೃತ್ಯುಂಜಯ,ಮಾಜಿ ಸದಸ್ಯ ಎಸ್.ಮಹೇಶ್,ಮುಖ್ಯೋಪಾಧ್ಯಾಯರಾದ ಮಾರಪ್ಪ ಹಾಗೂ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Back to top button
error: Content is protected !!