ಸಭೆ

ಕೊಡಗು-ಹಾಸನ ಮಠಾಧೀಶರ ಪರಿಷತ್ತು ರಚನೆ

ಸೋಮವಾರಪೇಟೆ: ಮಾ 17: ಒಗ್ಗಟ್ಟಿನಿಂದ ಸಮಾಜದಲ್ಲಿ ಶಾಂತಿ,ನೆಮ್ಮದಿ ಸಾದ್ಯವೆಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಮಠದ ಆವರಣದಲ್ಲಿ ಆಯೋಜಿಸಿದ್ದ ಕೊಡಗು,ಹಾಸನ ಮಠಾದೀಶರ ಪರಿಷತ್ತಿನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇವತ್ತಿನ ಸನ್ನಿವೇಶದಲ್ಲಿ ಒಗ್ಗಟ್ಟು,ಪರಸ್ಪರ ಪ್ರೀತಿ ವಿಶ್ವಾಸ ಎನ್ನುವುದು ಅನಿವಾರ್ಯವಾಗಿದೆ. ಜನಸಾಮಾನ್ಯರು ಹಾಗೂ ಮಠ ಮಾನ್ಯಗಳ ನಡುವೆ ಉತ್ತಮ ಸಂಬಂಧ,ಸಾಮರಸ್ಯ ವಿದ್ದರೆ ಸಮಾಜ ನೆಮ್ಮದಿಯಿಂದ ಉತ್ತಮವಾಗಿರುತ್ತದೆ ಎಂದರು.

ಇಂದು ಎಲ್ಲಾ ವಿಚಾರಗಳು ಜಾತಿ ಆದಾರಿತವಾಗುತಿರುವುದರಿಂದ ಎಲ್ಲಾರೂ ಒಗ್ಗಟ್ಟಾಗಿರುವುದು ಅವಶ್ಯ. ಸಮುದಾಯದ ಒಳಪಂಗಡದ ವಿಚಾರ ಬಿಟ್ಟು ಒಂದಾದಾಗ ನಾವುಗಳೆಲ್ಲಾ ಬಲಿಷ್ಟರಾಗುತೇವೆ ಎಂದು ಅಭಿಪ್ರಾಯಪಟ್ಟರು.

ಹಿಂದಿನ ಕಾಲದಿಂದಲೂ ಸಮಾಜಕ್ಕೆ ವೀರಶೈವ ಲಿಂಗಾಯತ ಮಠಗಳ ಕೊಡುಗೆ ಬಹಳಷ್ಟಿದೆ ಅವುಗಳು ಮುಂದುವರೆಯಬೇಕು.ಇಂದು ಹಲವು ಮಠಗಳು,ಸ್ವಾಮೀಜಿಗಳು ಸಂಕಷ್ಟದಲ್ಲಿದ್ದಾರೆ.

ಅದಕ್ಕಾಗಿ ಎಲ್ಲಾ ಮಠಾಧೀಶರು ಸಂಘಟಿತರಾಗಬೇಕು. ಪರಸ್ಪರ ಸೌಹಾರ್ದತೆ ಯಿಂದ ಇರಬೇಕು. ಆ ಮೂಲಕ ಮಠಗಳ ಆಸ್ತಿಗಳನ್ನು ರಕ್ಷಿಸಿಕೊಂಡು ಹೋಗಬೇಕು ಎಂದರು.

ಸಭೆಯಲ್ಲಿ ಕೊಡಗು,ಹಾಸನ ಮಠಾಧೀಶರ ಪರಿಷತ್ತು ರಚನೆ ಸಂಬಂಧ ಸುದೀರ್ಘ ಚರ್ಚೆ ನಡೆದು, ಕೊಡಗು,ಹಾಸನ ವೀರಶೈವ ಲಿಂಗಾಯತ ಮಠಾಧೀಶರ ನೂತನ ಆಡಳಿತ ಮಂಡಳಿ ರಚಿಸಲಾಯಿತು.

ಗೌರವಾದ್ಯಕ್ಷರಾಗಿ ಕೋಡಿಮಠದ ಸ್ವಾಮೀಜಿ, ಅಧ್ಯಕ್ಷರಾಗಿ ಅರಕಲಗೂಡು ದೊಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಉಪಾಧ್ಯಕ್ಷರಾಗಿ ವಿರಾಜಪೇಟೆ, ಅರಮೆರಿ ಕಳಂಚೆರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ  ಯಳನಾಡು ಮೂರುಕಳಸ ಮಠದ ಶ್ರೀ ಜ್ಞಾನಪ್ರಭು ಸ್ವಾಮೀಜಿ, ಪ್ರದಾನ ಕಾರ್ಯದರ್ಶಿಯಾಗಿ ಶನಿವಾರಸಂತೆ ಮುದ್ದಿನ ಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾರ್ಯದರ್ಶಿಗಳಾಗಿ ಕೊಡ್ಲಿಪೇಟೆ ಕಿರಿಕೊಡ್ಲೀ ಮಠದ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಹಾಸನ ತನ್ನಿರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಖಜಾಂಚಿಯಾಗಿ ಅರಕಲಗೂಡು ಚಿಲುಮೆ ಮಠದ ಜಯದೇವ ಸಾಮೀಜಿ ಉಳಿದಂತೆ ಎರೆಡು ಜಿಲ್ಲೆಯ ಎಲ್ಲಾ ಸ್ವಾಮೀಜಿಗಳನ್ನು ನಿರ್ದೇಶಕರುಗಳಾದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕೊಡಗು,ಹಾಸನ ಜಿಲ್ಲೆಯ ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!