ಕುಶಾಲನಗರ, ಜ 08: ಕೂಡುಮಂಗಳೂರು ಗ್ರಾಮ ಪಂಚಾಯತಿಯ ಮಾಸಿಕ ಸಭೆ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮಸ್ಥರಿಂದ ಬಂದ ಅರ್ಜಿಗಳ ಬಗ್ಗೆ ಚರ್ಚೆಗಳು ನಡೆಯಿತು. ಹಾರಂಗಿ- ಕುಶಾಲನಗರ ರಸ್ತೆಯ ಸುಂದರನಗರ ಗ್ರಾಮದ ಜಿಲ್ಲೆಯ ಪ್ರಮುಖ ಕೈಗಾರಿಕಾ ಕೇಂದ್ರದ ಮುಖ್ಯ ದ್ವಾರಕ್ಕೆ ಹೊಂದಿಕೊಂಡಿರುವ ವೃತ್ತಕ್ಕೆ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ಗುಂಡುರಾವ್ ಅವರ ಹೆಸರು ನಾಮಕರಣ ಮಾಡಲು ಕೋರಿ ಬಂದ ಅರ್ಜಿ ಅನುಮೋದಿಸಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಂಡು, ಮುಖ್ಯ ದ್ವಾರದ ವೃತ್ತಕ್ಕೆ ದಿ. ಗುಂಡೂರಾವ್ ಹೆಸರನ್ನು ನಾಮಕರಣ ಮಾಡಲು ಒಕ್ಕೊರಲಿನಿಂದ ಅಂಗೀಕರಿಸಲಾಯಿತು.
ಸರ್ವೆ ನಂಬರ್ 23/1 ರ ಜಾಗದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಕಟ್ಟಡಗಳ ನಿರ್ಮಾಣಕ್ಕೆ ಅನುಕೂಲವಾಗುವಂತೆ ಸ್ಧಳ ಗುರುತಿಸುವಿಕೆ ಸೇರಿದಂತೆ ಎಲ್ಲಾ ವಾರ್ಡ್ ಗಳ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು ನಡೆದವು.
ಸಭೆಯಲ್ಲಿ ಹಾಜರಿದ್ದ ಸದಸ್ಯರು ತಮ್ಮ ತಮ್ಮ ವಾರ್ಡ್ ಗಳ ಶುಚಿತ್ವಕ್ಕೆ ಸಂಬಂಧಿಸಿದಂತೆ ಮತ್ತು ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ವಿಷಯಗಳ ಬಗ್ಗೆ ಸುರ್ಧಿಘವಾದ ಚರ್ಚೆಗಳು ನಡೆದವು.
ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಸೈನಿಕ ಶಾಲೆ, ಕ್ರೀಡಾ ಶಾಲೆ, ಡಯಟ್ ಒಳಗೊಂಡಿದ್ದರೂ ಕೂಡ ಸರಕಾರಿ ಕಾರ್ಯಕ್ರಮಗಳ ಅಹ್ವಾನ ಪತ್ರಿಕೆ ಇನ್ನಿತರ ಕೆಲವು ಸಂದರ್ಭಗಳಲ್ಲಿ ಕೂಡುಮಂಗಳೂರು ಬದಲಾಗಿ ಕೂಡಿಗೆ ಎಂದೇ ಪ್ರಚಲಿತದಲ್ಲಿದೆ ಎಂದು ಸದಸ್ಯ ಭೋಗಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಈ ಪ್ರವೃತ್ತಿ ಮುಂದುವರೆಯಬಾರದು. ಈ ಬಗ್ಗೆ ಬದಲಾವಣೆ ತರಲು ಸಂಬಂಧಿಸಿದವರಿಗೆ ಪತ್ರ ವ್ಯವಹಾರ ನಡೆಸುವಂತೆ ಅವರು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಭಾಸ್ಕರ್ ನಾಯಕ್ ಮಾತನಾಡಿ, ಸಭೆಯಲ್ಲಿ ಎಲ್ಲಾ ಸದಸ್ಯರು ಅಭಿಪ್ರಾಯಗಳನ್ನು ಸಂಗ್ರಹಿಸಿ ,ಅದ್ಯತೆಯ ಅನುಗುಣವಾಗಿ ಎಲ್ಲಾ ವಾರ್ಡ್ ಕಾಮಗಾರಿಗಳಿಗೆ ಮತ್ತು ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅನುದಾನವನ್ನು ಕಾಯ್ದಿರಿಸಲಾಗುವುದು ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿ ಸಂತೋಷ್, ಕರ ವಸೂಲಿಗಾರ ಅವಿನಾಶ್ ಹಾಜರಿದ್ದರು.
Back to top button
error: Content is protected !!